ಔರಂಗಬಾದ್: ಖಾಸಗಿ ಶಾಲೆಗಳ ನಡುವೆ ದೇಶಾದ್ಯಂತ ಸರ್ಕಾರಿ ಶಾಲೆಗಳ ಪರಿಸ್ಥಿತಿ ಇಕ್ಕಟ್ಟಿನಲ್ಲಿದೆ. ಅದರ ನಡುವೆಯೇ, ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಪೋಖರಿ ಹಳ್ಳಿಯ ನಿವಾಸಿಗಳು ಸರ್ಕಾರಿ ಶಾಲೆಯನ್ನು ಉಳಿಸಿಕೊಳ್ಳಲು 39 ಲಕ್ಷ ರೂ.ಗಳನ್ನು ಚಂದಾ ಎತ್ತಿದ್ದಾರೆ. ಅದರಿಂದ ಶಾಲೆಯನ್ನು ಪುನರ್ ನಿರ್ಮಿಸಲು ನಿರ್ಧರಿಸಿದ್ದಾರೆ.
ಸ್ವಾಗತಾರ್ಹ ಅಂಶವೆಂದರೆ, ನಾಲ್ವರು ಶಾಲೆಗೆ 1 ಎಕರೆ ಜಮೀನು ದಾನ ಮಾಡಿದ್ದಾರೆ. 1ರಿಂದ 7ನೇ ತರಗತಿವರೆಗೆ ಮಕ್ಕಳು ಓದಬಹುದು. ನವೀಕರಣ ಮತ್ತು ನಿರ್ಮಾಣ ಕಾರ್ಯ 2018ರಲ್ಲಿ ಆರಂಭವಾಗಿತ್ತು. 2020ರಲ್ಲಿ ಕೊರೊನಾ ತಲೆಯೆತ್ತಿದ್ದರಿಂದ ನಿಂತುಹೋಗಿತ್ತು. ಈಗಿನ ಅಂದಾಜಿನ ಪ್ರಕಾರ ಮುಂದಿನ ಶೈಕ್ಷಣಿಕ ವರ್ಷದೊಳಗೆ ಕೆಲಸ ಮುಗಿಯಲಿದೆ. ಔರಂಗಬಾದ್‌ನಿಂದ 160 ಕಿ.ಮೀ. ದೂರವಿರುವ ಪೋಖರಿ ಹಳ್ಳಿಯಲ್ಲಿ 1,300 ಮಂದಿ ವಾಸಿಸುತ್ತಿದ್ದಾರೆ.
ಇದನ್ನೂ ಓದಿ: ಅಕ್ಷಯ್-ಟೈಗರ್ ಶ್ರಾಫ್ ನಟನೆಯ “ಬಡೆ ಮಿಯಾನ್-ಚೋಟೆ ಮಿಯಾನ್” ಚಿತ್ರೀಕರಣ ಆರಂಭ