Advertisement

Maharashtra; ರೈಲಿನಲ್ಲಿ ದನದ ಮಾಂಸ ಸಾಗಾಟ ಶಂಕೆಯಿಂದ ವೃದ್ಧನ ಮೇಲೆ ಹಲ್ಲೆ

09:28 AM Sep 01, 2024 | Team Udayavani |

ಮುಂಬೈ: ದನದ ಮಾಂಸ ಕೊಂಡೊಯ್ಯುತ್ತಿದ್ದಾರೆ ಎಂದು ಶಂಕಿಸಿ ವೃದ್ಧನೊಬ್ಬನಿಗೆ ಸಹ ಪ್ರಯಾಣಿಕರು ಚಲಿಸುತ್ತಿರುವ ರೈಲಿನಲ್ಲಿ ಹಲ್ಲೆ ಮಾಡಿ ನಿಂದಿಸಿರುವ ಘಟನೆ ಮಹಾರಾಷ್ಟ್ರದಲ್ಲಿ (Maharashtra) ನಡೆದಿದೆ.

Advertisement

ಅಶ್ರಫ್ ಮುನ್ಯಾರ್ ಅವರು ಸಾಗಿಸುತ್ತಿದ್ದ ಎರಡು ದೊಡ್ಡ ಪ್ಲಾಸ್ಟಿಕ್ ಬಾಕ್ಸ್‌ ಗಳಲ್ಲಿ ಮಾಂಸದಂತಹ ವಸ್ತುವಿನ ಬಗ್ಗೆ ಸುಮಾರು ಹನ್ನೆರಡು ಜನರು ವಿಚಾರಣೆ ನಡೆಸಿದ್ದಾರೆ. ಇದರ ವಿಡಿಯೋ ವೈರಲ್‌ ಆಗಿದೆ.

“ನೀವು ಏನು ಸಾಗಿಸುತ್ತಿದ್ದೀರಿ? ನೀವು ಎಲ್ಲಿಗೆ ಹೋಗುತ್ತಿದ್ದೀರಿ? ನೀವು ಎಲ್ಲಿಂದ ಬಂದಿದ್ದೀರಿ? ನೀವು ಆಡುಗಳನ್ನು ತಂದಿದ್ದೀರಾ? ಅದನ್ನು ಎಷ್ಟು ಜನರು ತಿನ್ನುತ್ತಾರೆ?” ಎಂದೆಲ್ಲಾ ಪ್ರಶ್ನಿಸಿದ್ದಾರೆ.

ಹಿರಿಯ ವ್ಯಕ್ತಿಯು ತನ್ನ ಮಗಳ ಕುಟುಂಬಕ್ಕಾಗಿ ಮಾಂಸವನ್ನು ತೆಗೆದುಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ

ಜಲಗಾಂವ್ ಜಿಲ್ಲೆಯ ನಿವಾಸಿಯಾದ ಮುನ್ಯಾರ್ ಅವರು ಮಾಲೆಗಾಂವ್‌ ನಲ್ಲಿರುವ ತಮ್ಮ ಮಗಳ ಮನೆಗೆ ಧುಲೆ ಎಕ್ಸ್‌ಪ್ರೆಸ್‌ ನಲ್ಲಿ ಪ್ರಯಾಣಿಸುತ್ತಿದ್ದರು ಎಂದು ವರದಿ ಹೇಳಿದೆ.

Advertisement

ವೃದ್ಧನ ಉತ್ತರದಿಂದ ಸಂತುಷ್ಟರಾಗದ ಜನರು ಆತನನ್ನು ಮತ್ತಷ್ಣು ಕೆಣಕಿ ಪ್ರಶ್ನಿಸಿದ್ದಾರೆ. ಯಾವ ಮಾಂಸ ಎಂದು ಕೇಳಿದ್ದಾರೆ. ಒಂದು ಹಂತದಲ್ಲಿ ವೃದ್ದ ಇದು ಕೋಣದ ಮಾಂಸ ಎಂದು ಹೇಳಿದ್ದಾರೆ.

“ನಾವು ಅದನ್ನು ಪರೀಕ್ಷಿಸಿದ ನಂತರ ನಾವು ಯಾವುದರ ಮಾಂಸ ಎಂದು ಗೊತ್ತಾತ್ತದೆ” ಎಂದು ಒಬ್ಬ ವ್ಯಕ್ತಿ ಪ್ರತಿಕ್ರಿಯಿಸಿದರು. “ಇದು ಶ್ರಾವಣ ಮಾಸ. ಇದು ನಮ್ಮ ಹಬ್ಬದ ಸಮಯ, ಈ ಸಮಯದಲ್ಲಿ ನೀವು ಹೀಗೆ ಮಾಡುತ್ತಿದ್ದೀರಿ” ಎಂದು ಇನ್ನೊಬ್ಬರು ಹೇಳಿದರು.

ಮಹಾರಾಷ್ಟ್ರ ಪ್ರಾಣಿ ಸಂರಕ್ಷಣಾ ಕಾಯಿದೆ 1976ರ ಪ್ರಕಾರ ಗೋವುಗಳು, ಹೋರಿಗಳು ಮತ್ತು ಎತ್ತುಗಳ ಹತ್ಯೆಯನ್ನು ನಿಷೇಧಿಸುತ್ತದೆ. ಎಮ್ಮೆ- ಕೋಣಗಳು ನಿಷೇಧದ ವ್ಯಾಪ್ತಿಗೆ ಬರುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next