Advertisement

8 ದಿನದ ಬಳಿಕ ನಾಪತ್ತೆಯಾಗಿದ್ದ ಕೋವಿಡ್ 19 ರೋಗಿ ಶವ ಆಸ್ಪತ್ರೆ ಟಾಯ್ಲೆಟ್ ನಲ್ಲಿ ಪತ್ತೆ!

05:32 PM Jun 10, 2020 | Nagendra Trasi |

ಜಲ್ಗಾಂವ್(ಮಹಾರಾಷ್ಟ್ರ): ಇತ್ತೀಚೆಗಷ್ಟೇ ಐಸಿಯುನಲ್ಲಿದ್ದ ಕೋವಿಡ್ 19 ರೋಗಿ ನಾಪತ್ತೆಯಾಗಿದ್ದ ಸುದ್ದಿ, ನಂತರ ಅವರು ಸಾವನ್ನಪ್ಪಿರುವ ವಿಷಯ ಕುಟುಂಬ ಸದಸ್ಯರಿಗೆ ತಡವಾಗಿ ತಿಳಿದು ಬಂದ ವರದಿ ಓದಿದ್ದೀರಿ. ಆದರೆ ಸುಮಾರು ಎಂಟು ದಿನಗಳ ಹಿಂದೆ ಸರ್ಕಾರಿ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದ 82ವರ್ಷದ ಅಜ್ಜಿಯ ಶವ ಆಸ್ಪತ್ರೆಯ ಶೌಚಾಲಯದಲ್ಲಿ ಪತ್ತೆಯಾದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.

Advertisement

ಝಿಲ್ಲಾಪೇಟ್ ಪೊಲೀಸ್ ಠಾಣೆಯ ಹಿರಿಯ ಇನ್ಸ್ ಪೆಕ್ಟರ್ ಅಕ್ಬರ್ ಪಟೇಲ್ ಅವರ ಪ್ರಕಾರ, ಜಲ್ಗಾಂವ್ ಸಿವಿಲ್ ಆಸ್ಪತ್ರೆಯ ಅಧಿಕಾರಿಗಳು ಮತ್ತು ಕುಟುಂಬದವರು ಜೂನ್ 2ರಂದು ಮಹಿಳೆ ಕಾಣೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ನಂತರ ಭೂಸಾವಲ್ ಪ್ರದೇಶದಲ್ಲಿ ಎಲ್ಲಾ ಕಡೆ ವಿಚಾರಿಸಿದ್ದರು. ಎಲ್ಲಾ ರೋಗಿಗಳ ರಿಜಿಸ್ಟರ್ಸ್ ಅನ್ನು ಪರೀಕ್ಷಿಸಲಾಗಿತ್ತು. ಸಿಸಿಟಿವಿ ಫೂಟೇಜ್ ಅನ್ನು ಕೂಡಾ ಪರಿಶೀಲಿಸಲಾಗಿತ್ತು ಎಂದು ಪಟೇಲ್ ಐಎಎನ್ ಎಸ್ ಗೆ ತಿಳಿಸಿದ್ದಾರೆ.

ಮೇ 27ರಂದು ಮಹಿಳೆಯನ್ನು ಪರೀಕ್ಷಿಸಿದಾಗ ಕೋವಿಡ್ 19 ಪಾಸಿಟಿವ್ ವರದಿ ಬಂದಿತ್ತು. ನಂತರ ಆಕೆಯನ್ನು ಮತ್ತೊಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಜೆಸಿಎಚ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಎಂಟು ದಿನಗಳ ಹಿಂದೆ ಅವರು ನಾಪತ್ತೆಯಾಗಿದ್ದರು.

ಬುಧವಾರ ಆಸ್ಪತ್ರೆಯ ಶೌಚಾಲಯವೊಂದರಿಂದ ಕೆಟ್ಟ ವಾಸನೆ ಬರಲಾರಂಭಿಸಿತ್ತು..ಕೊನೆಗೆ ಅಲ್ಲಿ ಹೋಗಿ ಪರಿಶೀಲಿಸಿದಾಗ ಮಹಿಳೆಯ ಶವ ಅಲ್ಲಿತ್ತು. ಕೂಡಲೇ ನಾವು ಕುಟುಂಬದವರಿಗೆ ವಿಷಯ ತಿಳಿಸಿದ್ದೇವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಾ.ಬಿಆರ್ ಅಂಬೇಡ್ಕರ್ ಶತಾಬ್ದಿ ಆಸ್ಪತ್ರೆಯಲ್ಲಿದ್ದ 80ವರ್ಷದ ಕೋವಿಡ್ 19 ರೋಗಿಯೊಬ್ಬರು ನಾಪತ್ತೆಯಾಗಿದ್ದರು. ಈ ಬಗ್ಗೆ ತನಿಖೆ ನಡೆಸುವಂತೆ ಮಂಗಳವಾರ ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ಆದೇಶ ನೀಡಿದ್ದರು. ನಂತರ ಈ ವ್ಯಕ್ತಿ ಬೊರಿವಲಿ ರೈಲ್ವೆ ನಿಲ್ದಾಣದಲ್ಲಿ ರೈಲಿಗೆ ಸಿಲುಕಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಇಂತಹ ಘಟನೆಗಳ ಬಗ್ಗೆ ತನಿಖೆ ನಡೆಸಬೇಕು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಕಿರಿಟ್ ಸೋಮಯ್ಯ
ಒತ್ತಾಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next