ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಹಿನ್ನೆಲೆಯಲ್ಲಿ ಬೆಳಗಾವಿಗೆ ಮಹಾರಾಷ್ಟ್ರ ಸಚಿವ ಚಂದ್ರಕಾಂತ ಪಾಟೀಲ ಅವರು ಡಿ. 3ರ ಬದಲಾಗಿ ಡಿ. 6ರಂದು ಭೇಟಿ ನೀಡಲಿದ್ದಾರೆ.
ಎಂಇಎಸ್ ಮನವಿ ಮೇರೆಗೆ ಬೆಳಗಾವಿಗೆ ಮಹಾರಾಷ್ಟ್ರದ ಗಡಿ ಸಮನ್ವಯ ಸಚಿವ ಚಂದ್ರಕಾಂತ ಪಾಟೀಲ ಅವರು ಡಿ. 3ರಂದು ಭೇಟಿ ನೀಡುವ ವೇಳಾಪಟ್ಟಿ ಬಿಡುಗಡೆ ಆಗಿತ್ತು. ಖ. 6ರಂದು ಭಾರತರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನ ನಿಮಿತ್ತ ಬೆಳಗಾವಿಯ ಅಂಬೇಡ್ಕರ್ ವಾದಿ ಕೆಲ ಸಂಘಟನೆಗಳು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರಿಂದ ಡಿ. 6ರಂದೇ ಬೆಳಗಾವಿ ಭೇಟಿ ಮಾಡಲಾಗುವುದು ಎಂದು ಸಚಿವ ಚಂದ್ರಕಾಂತ ಪಾಟೀಲ್ ಅವರು ಟ್ವಿಟ್ ಮೂಲಕ ತಿಳಿಸಿದ್ದಾರೆ.
ಸಚಿವ ಚಂದ್ರಕಾಂತ ಪಾಟೀಲ್ ಹಾಗೂ ಸಮನ್ವಯಕ ಮಂತ್ರಿ ಶಂಭುರಾಜ ದೇಸಾಯಿ ಡಿ. 6ರಂದು ಭೇಟಿ ನೀಡಿ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ.