Advertisement

ಮಹಾರಾಷ್ಟ್ರದ ವಸತಿ ಸಚಿವ ಜಿತೇಂದ್ರ ಅವಾದ್ ಗೆ ಕೋವಿಡ್ -19 ಸೋಂಕು ದೃಢ

08:12 AM Apr 25, 2020 | Mithun PG |

ಮುಂಬೈ: ಮಹಾರಾಷ್ಟ್ರದ  ವಸತಿ ಸಚಿವ ಜಿತೇಂದ್ರ ಅವಾದ್‌ ಗೆ ಕೊವಿಡ್ ಸೋಂಕು ಪಾಸಿಟಿವ್ ವರದಿ ಬಂದಿದ್ದು, ಐಸೋಲೇಶನ್ ವಾರ್ಡ್‌ನಲ್ಲಿ ದಾಖಲಿಸಲಾಗಿದೆ.

Advertisement

ಸಚಿವರ ಸಿಬ್ಬಂದಿಗಳಲ್ಲಿ ಕೆಲವರಿಗೆ ಕೋವಿಡ್ 19  ಲಕ್ಷಣಗಳು  ಕಾಣಿಸಿಕೊಂಡ ಹಿನ್ನಲೆಯಲ್ಲಿ  ತಾವೂ ಕೂಡ ಪರೀಕ್ಷೆಗೆ ಒಳಪಟ್ಟಿದ್ದರು. ಮಾತ್ರವಲ್ಲದೆ ಏ. 13 ರಿಂದಲೂ ಸೆಲ್ಫ್ ಕ್ವಾರಂಟೈನ್ ನಲ್ಲಿದ್ದರು. ಮೊದಲ ಬಾರಿಗೆ ಪರೀಕ್ಷೆ ನಡೆಸಿದಾಗ  ನೆಗೆಟಿವ್ ಎಂದೂ ಫಲಿತಾಂಶ ಬಂದರೂ, ಎರಡನೇ ಬಾರಿ ಅದು  ಪಾಸಿಟಿವ್ ಆಗಿ ಬದಲಾಗಿತ್ತು.

ಕೆಲ ದಿನಗಳ ಹಿಂದೆ ಸಚಿವ ಜಿತೇಂದ್ರ ಅವಾದ್ ಅವರ ಮನೆಯ ಕೆಲಸಗಾರರು, ಮತ್ತು ಐವರು ಭದ್ರತಾ ಸಿಬ್ಬಂದಿಯಲ್ಲಿ ಸೋಂಕು ದೃಢಪಟ್ಟಿತ್ತು. ತಾವೂ ಸುಮಾರು 15 ಮಂದಿ ಸೋಂಕಿತರೊಂದಿಗೆ ಸಂಪರ್ಕಕ್ಕೆ ಬಂದ ಕಾರಣಕ್ಕೆ ಸೆಲ್ಫ್ ಕ್ವಾರಂಟೈನ್ ಗೆ ಒಳಗಾಗಿದ್ದರು.. ಅದಾಗ್ಯೂ ಸಚಿವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಮಹಾರಾಷ್ಟ್ರದಲ್ಲೇ ಕೋವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು ಈವರೆಗೂ ಸುಮಾರು 6,427 ಪ್ರಕರಣಗಳು ದೃಢಪಟ್ಟಿವೆ. ಮಾತ್ರವಲ್ಲದೆ ಈ ರಾಜ್ಯದಲ್ಲೇ ದಾಖಲೆಯ 283 ಜನರು ಮೃತಪಟ್ಟಿದ್ದಾರೆಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next