ಮಹಾರಾಷ್ಟ್ರ: ಪ್ರೀತಿ ಸಿಗೋದು ಕಷ್ಟ. ಅದೇ ಪ್ರೀತಿಯನ್ನು ಉಳಿಸಿಕೊಳ್ಳುವುದು ಕೆಲವರಿಗೆ ಇನ್ನು ಕಷ್ಟ. ಪ್ರೀತಿಸಿದವರನ್ನೇ ಮದುವೆಯಾಗಿ ಸುಖವಾಗಿ ಬಾಳುವುದು ಬಹುಶಃ ನೂರರಲ್ಲಿ ಒಂದಷ್ಟು ಸಂಖ್ಯೆಯ ಜನರು ಮಾತ್ರ.
ಇಲ್ಲೊಂದು ಪ್ರೇಮ ಕಥೆಗೆ ಪತಿಯೇ ಸಹಾಯ ಮಾಡಿದ ಘಟನೆ ನಡೆದಿದೆ. ಮದುವೆಯ ಬಳಿಕ ತನ್ನ ಪತ್ನಿಯ ಮೊದಲ ಪ್ರೇಮಯಾನಕ್ಕೆ ಆಕೆಯ ಪತಿಯೇ ಸಹಾಯ ಮಾಡಿರುವ ಘಟನೆ ಮಹಾರಾಷ್ಟ್ರದ ಗ್ರಾಮವೊಂದರಲ್ಲಿ ನಡೆದಿದೆ.
ಮಹಾರಾಷ್ಟ್ರದ ಬೀಚ್ಕಿಲಾ ಗ್ರಾಮದ ನಿವಾಸಿ ಸನೋಜ್ ಕುಮಾರ್ ಸಿಂಗ್ ಅವರು ಮೇ 10 ರಂದು ಪ್ರಿಯಾಂಕಾ ಕುಮಾರಿ ಎಂಬಾಕೆಯನ್ನು ವಿವಾಹವಾಗಿದ್ದಾರೆ. ಮದುವೆಯಾದ ಕೆಲ ದಿನಗಳ ಬಳಿಕ ತನ್ನ ಪತ್ನಿ ಪ್ರಿಯಾಂಕ ನಿತ್ಯ ನಿರಾಶರಾಗಿ ಕೂತಿರುವುದನ್ನು, ಏನೋ ಮುಚ್ಚಿಡುವುದನ್ನು ಪತಿ ಸನೋಜ್ ಅವರು ಗಮನಿಸಿದ್ದಾರೆ. ಪ್ರಿಯಾಂಕ ಅವರು ಜಿತೇಂದ್ರ ಎಂಬ ಯುವಕನನ್ನು ಪ್ರೀತಿಸುತ್ತಿದ್ದಾರೆ ಎನ್ನುವ ವಿಚಾರ ಪತಿ ಸನೋಜ್ ಗೆ ಗೊತ್ತಾಗಿದೆ. ಕಳೆದ 10 ವರ್ಷಗಳಿಂದ ಇಬ್ಬರು ಪ್ರೀತಿಸುತ್ತಿದ್ದಾರೆ. ಜಾತಿಯ ವಿಚಾರದಲ್ಲಿ ಅವರ ಸಂಬಂಧವನ್ನು ಒಪ್ಪಲಿಲ್ಲ ಎಂದು ಪತಿಗೆ ಗೊತ್ತಾಗಿದೆ.
ಮದುವೆಯಾಗಿ ಸರಿಯಾಗಿ 20 ದಿನಗಳ ಬಳಿಕ ಪ್ರಿಯಾಂಕ ತನ್ನ ಪ್ರಿಯಕರನೊಂದಿಗೆ ಓಡಿ ಹೋಗಲು ನಿರ್ಧರಿಸಿದ್ದಾರೆ. ಜಿತೇಂದ್ರ- ಪ್ರಿಯಾಂಕ ಇಬ್ಬರು ಓಡಿ ಹೋಗಲು ಯತ್ನಿಸಿದ್ದಾರೆ. ಆದರೆ ಇಬ್ಬರನ್ನು ಗ್ರಾಮಸ್ಥರು ನೋಡಿ, ಮನಾಟು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
Related Articles
ಇದಾದ ಬಳಿಕ ಪೊಲೀಸರು ಎರಡೂ ಕುಟುಂಬದವರನ್ನು ಠಾಣೆಗೆ ಕರೆಸಿದ್ದಾರೆ. ಈ ವೇಳೆ ಪತಿ ಸನೋಜ್ ಪತ್ನಿ ಪ್ರಿಯಾಂಕ ಅವರ ಪ್ರೀತಿಗೆ ಸಹಾಯ ಮಾಡಿದ್ದಾರೆ. ಪ್ರಿಯಾಕರನೊಂದಿಗೆ ಓಡಿ ಹೋದದ್ದಕ್ಕೆ ಯಾವುದೇ ತಕರಾರು ಎತ್ತದೇ ಇಬ್ಬರ ಸಹಾಯಕ್ಕೆ ನಿಂತಿದ್ದಾರೆ.