ನಾಗ್ಪುರ: ಕೇವಲ 20 ರೂ.ಗಾಗಿ ವ್ಯಕ್ತಿಯೊಬ್ಬ ಪಾನಿಪುರಿ ವ್ಯಾಪಾರಿಗೆ ಚೂರಿ ಇರಿದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ಭಾನುವಾರ ಸಂಜೆ (ಜ.22 ರಂದು) ನಡೆದಿದೆ.
ರಸ್ತೆ ಪಕ್ಕ ಪಾನಿಪುರಿ ವ್ಯಾಪಾರ ಮಾಡುವ ಜೈರಾಮ್ ಗುಪ್ತಾ , ಪಕ್ಕದಲ್ಲಿರುವ ಅಂಗಡಿಯಲ್ಲಿ ಕೆಲಸ ಮಾಡುವ ವ್ಯಕ್ತಿಗೆ ಬಾಕಿಯಿರುವ 20 ರೂ. ಪಾವತಿಸುವಂತೆ ಹೇಳಿದ್ದಾರೆ. ಇದಕ್ಕೆ ಮತ್ತೆ ಪಾವತಿಸುತ್ತೇನೆ ಎಂದು ಸ್ವಲ್ಪ ಸಿಟ್ಟಿನಲ್ಲೇ ವ್ಯಕ್ತಿ ಹೇಳಿದ್ದಾನೆ. ಇದು ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಗಿ, ಅಂಗಡಿಯಲ್ಲಿ ಕೆಲಸ ಮಾಡುವ ವ್ಯಕ್ತಿ ಚೂರಿಯಿಂದ ಪಾನಿಪುರಿ ವ್ಯಾಪಾರಿ ಹೊಟ್ಟೆಗೆ ಇರಿದಿದ್ದಾನೆ.
ಸದ್ಯ ಪಾನಿಪುರಿ ವ್ಯಾಪಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿ ವಿರುದ್ಧ ಕೊಲೆ ಯತ್ನದ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಬಿಹಾರ: ನಕಲಿ ಮದ್ಯ ಸೇವಿಸಿ ಮೂವರು ಸಾವು; 6 ಮಂದಿ ಗಂಭೀರ