Advertisement

Maharatsra Polls: ಮಹಾರಾಷ್ಟ್ರ ಮಹಾಯುತಿ ತೆಕ್ಕೆಗೆ… ಮತಗಟ್ಟೆ ಸಮೀಕ್ಷೆ

08:15 AM Nov 21, 2024 | Team Udayavani |

ಹೊಸದಿಲ್ಲಿ: 288 ಸ್ಥಾನಗಳ ವಿಧಾನಸಭೆಗೆ ಮತದಾನ ಮುಕ್ತಾಯವಾಗುತ್ತಿದ್ದಂತೆ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟಗೊಂಡಿದ್ದು, 9 ಸಮೀಕ್ಷೆಗಳಲ್ಲಿ 8 ಸಮೀಕ್ಷೆಗಳು ಬಿಜೆಪಿ ನೇತೃತ್ವದ ಮಹಾಯುತಿ ಸರಕಾರದ ಪರವಾಗಿ ಭವಿಷ್ಯ ನುಡಿದಿವೆ.

Advertisement

ಕೇವಲ 1 ಸಮೀಕ್ಷೆ ಮಾತ್ರ ಮಹಾ ವಿಕಾಸ ಅಘಾಡಿಗೆ ಬಹುಮತ ಸಿಗಲಿದೆ ಎಂದಿದೆ. ಪ್ರಸ್ತುತ ರಾಜ್ಯದಲ್ಲಿ ಮಹಾಯುತಿ ಮೈತ್ರಿಕೂಟ 202 ಸ್ಥಾನಗಳನ್ನು ಹೊಂದಿವೆ. ಈ ಚುನಾವಣೆ ಸಮೀಕ್ಷೆಗಳ ಪ್ರಕಾರ ಈ ಸ್ಥಾನ 154ಕ್ಕೆ ಕುಸಿತ ಕಂಡರೂ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಸಿಗಲಿದೆ. ಕಾಂಗ್ರೆಸ್‌ ನೇತೃತ್ವದ ಮಹಾ ವಿಕಾಸ ಅಘಾಡಿ ಮೈತ್ರಿಕೂಟದ ಸ್ಥಾನಗಳ ಸಂಖ್ಯೆ ಹೆಚ್ಚಾದರೂ ಸಹ ಅಧಿಕಾರ ಹಿಡಿಯಲು ಬೇಕಾದಷ್ಟು ಸ್ಥಾನಗಳನ್ನು ಗೆಲ್ಲುವುದು ಸಾಧ್ಯವಿಲ್ಲ ಎಂದು ಸಮೀಕ್ಷೆಗಳು ಹೇಳಿವೆ.

ದೈನಿಕ್‌ ಭಾಸ್ಕರ್‌ ಸುದ್ದಿ ಸಂಸ್ಥೆ ಮಾತ್ರ ಎಂವಿಎಗೆ ಬಹುಮತ ಸಿಗಲಿದೆ ಎಂದು ಹೇಳಿದೆ. ಇದರ ಪ್ರಕಾರ ಎಂವಿಎ 135ರಿಂದ 150 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದೆ. ಆದರೆ ಯಾವುದೇ ಏಕೈಕ ಪಕ್ಷಕ್ಕೆ ಯಾವುದೇ ಸಮೀಕ್ಷೆಗಳು ಬಹುಮತ ನೀಡಿಲ್ಲ.

ಸಮೀಕ್ಷೆ ಸುಳ್ಳಾಗಲಿದ್ದು, ನ.23ರಂದು ಎಂವಿಎ ಮಹಾರಾಷ್ಟ್ರದಲ್ಲಿ ಸರಕಾರ ರಚಿಸಲಿದೆ.
ನಾನಾ ಪಟೋಲೆ, ಕಾಂಗ್ರೆಸ್‌ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next