Advertisement

ಪತಿ ಸತ್ತರೆ, ಪತ್ನಿ ತಾಳಿ ತೆಗೆಯುವಂತಿಲ್ಲ, ಕುಂಕುಮ ಅಳಿಸುವಂತಿಲ್ಲ

09:30 AM May 09, 2022 | Team Udayavani |

ಮುಂಬೈ: ಪತಿ ಅಸುನೀಗಿದ ತಕ್ಷಣ ಪತ್ನಿ ಕುಂಕುಮ ಅಳಿಸಬೇಕು, ಬಳೆ ಒಡೆಯಬೇಕು, ತಾಳಿ ತೆಗೆದುಹಾಕಬೇಕು ಎನ್ನುವ ಸಂಪ್ರದಾಯಗಳು ಚಾಲ್ತಿಯಲ್ಲಿವೆ. ಆದರೆ ಅದೆಲ್ಲದ್ದಕ್ಕೂ ಸೆಡ್ಡು ಹೊಡೆದಿರುವ ಮಹಾರಾಷ್ಟ್ರದ ಒಂದು ಗ್ರಾಮ, ಈ ವಿಧವಾ ಆಚರಣೆಯನ್ನು ನಿಷೇಧಿಸಿ ನಿರ್ಣಯ ಅಂಗೀಕರಿಸಿದೆ.

Advertisement

ಕೊಲ್ಹಾಪುರ ಜಿಲ್ಲೆಯ ಹರ್ವಾರ್ಡ್‌ ಗ್ರಾಮದಲ್ಲಿ ಸಮಾಜ ಸುಧಾರಕ, ರಾಜ ರಾಜಶ್ರೀ ಛತ್ರಪತಿ ಶಾಹು ಮಹಾರಾಜ್‌ ಅವರ ಜನ್ಮ ಶತಮಾನೋತ್ಸವದ ಪ್ರಯುಕ್ತ ಈ ವಿಶೇಷ ನಿರ್ಣಯ ಕೈಗೊಳ್ಳಲಾಗಿದೆ. ಇನ್ನು ಮುಂದೆ ಗ್ರಾಮದಲ್ಲಿ ಯಾವುದೇ ಪುರುಷ ಸಾವನ್ನಪ್ಪಿದ್ದರೆ, ಆಕೆಯ ಪತ್ನಿಗೆ ಈ ರೀತಿಯ ಸಂಪ್ರದಾಯಗಳನ್ನು ಮಾಡಲಾಗುವುದಿಲ್ಲ. ಅಲ್ಲಿನ ಪ್ರತಿ ಪುರುಷರು, “ನಾ ಸಾವನ್ನಪ್ಪಿದ್ದರೆ, ನನ್ನ ಪತ್ನಿಗೆ ಹೀಗೆ ಮಾಡಬಾರದು’ ಎಂದು ಬಾಂಡ್‌ ಪೇಪರ್‌ ಮೇಲೆ ಬರೆದುಕೊಟ್ಟಿದ್ದಾರೆ ಕೂಡ.

ಇದನ್ನೂ ಓದಿ:ಗೃಹ ಸಚಿವ ಆರಗ ಜ್ಞಾನೇಂದ್ರರಿಗೆ ತಲೆ ಕೆಟ್ಟಿದೆ, ಅವರೊಬ್ಬ ಮೆಂಟಲ್ : ಕಿಮ್ಮನೆ ವಾಗ್ದಾಳಿ

ಗ್ರಾಮ ಪಂಚಾಯಿತಿ ಸದಸ್ಯರಾಗಿರುವ ಸುರ್ಗೊಂಡ ಪಾಟೀಲ್‌ ಅವರು ಇಂಥದ್ದೊಂದು ನಿರ್ಣಯಕ್ಕೆ ನಾಂದಿ ಹಾಡಿದ್ದಾರೆ. ಕೊರೊನಾ ಸಮಯದಲ್ಲಿ ಈ ರೀತಿಯ ಸಂಪ್ರದಾಯವನ್ನು ಗಮನಿಸಿದ್ದ ಅವರು, ಅದಕ್ಕೆ ಅಂತ್ಯಹಾಡಬೇಕೆಂದು ಗ್ರಾಮಸಭೆಯಲ್ಲಿ ಚರ್ಚಿಸಿ ನಿರ್ಣಯ ತೆಗೆದುಕೊಂಡಿದ್ದಾರೆ. ಅವರ ಈ ನಿರ್ಣಯಕ್ಕೆ ಒಳ್ಳೆಯ ಸ್ಪಂದನೆ ಸಿಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next