Advertisement

ಮಹಾರಾಷ್ಟ್ರದಾದ್ಯಂತ ಸಡಗರದೊಂದಿಗೆ ಬಪ್ಪಾಗೆ ವಿದಾಯ;15 ಸಾವು 

09:59 AM Sep 07, 2017 | Team Udayavani |

ಮುಂಬಯಿ: ಗಣಪತಿ ಬಪ್ಪಾ ಮೋರ್ಯಾ ಎಂಬಿತ್ಯಾದಿ ಘೋಷಣೆಗಳ ಮಧ್ಯೆ ಮಂಗಳವಾರ ಗಜಮುಖ ಗಣಪನಿಗೆ ವಿದಾಯವನ್ನು ಹೇಳಲಾಯಿತು. 

Advertisement

ಲಾಲ್‌ಬಾಗ್‌ನ ರಾಜಾ ಸೇರಿದಂತೆ ಎಲ್ಲಾ ಪ್ರಮುಖ ಗಣೇಶೋತ್ಸವ ಮಂಡಲಗಳು ಡೋಲು ವಾದ್ಯಗಳೊಂದಿಗೆ ಸಂಭ್ರಮ ಸಡಗರದಿಂದ ಬಪ್ಪಾಗೆ ವಿದಾಯ ಹೇಳಿದರು.  

ಬಿಗಿ ಭದ್ರತೆ ಹಾಗೂ ವೈಭವದೊಂದಿಗೆ ಮಂಗಳವಾರ ಮುಂಜಾನೆ ಆರಂಭವಾದ  ವಿಗ್ರಹ ವಿಸರ್ಜನೆ ಪ್ರಕ್ರಿಯೆಯು ಬುಧವಾರ ಮುಂಜಾನೆ  ಕೊನೆಗೊಂಡಿತು. 

ಸುಮಾರು 22 ಗಂಟೆಗಳ ಸುದೀರ್ಘ‌ ಮೆರವಣಿಗೆಯ ಬಳಿಕ ಬುಧವಾರ ಮುಂಜಾನೆ ದಕ್ಷಿಣ ಮುಂಬಯಿಯ ಗಿರ್‌ಗಾಂವ್‌ ಚೌಪಾಟಿಯಲ್ಲಿ ಲಾಲ್‌ಬಾಗ್‌ನ ರಾಜಾನನ್ನು ವಿಸರ್ಜನೆ ಮಾಡಲಾಯಿತು.  ಜನರೆಲ್ಲರೂ ರಸ್ತೆಗಳಲ್ಲಿ  ಕುಣಿಯುತ್ತ, ಹಾಡುತ್ತ  ಗಣಪತಿಗೆ ಅಂತಿಮ ವಿದಾಯ ಹೇಳಿದರು.

ಬುಧವಾರ ಮುಂಜಾನೆ 7 ಗಂಟೆ ವರೆಗೆ ನಗರದಾದ್ಯಂತ ವಿವಿಧ ಚೌಪಾಟಿಗಳು, ನೈಸರ್ಗಿಕ ಹಾಗೂ  ಕೃತಕ ಕೊಳಗಳಲ್ಲಿ   ಸುಮಾರು 7,000 ಸಾರ್ವಜನಿಕ ಗಣಪತಿ ವಿಗ್ರಹಗಳು ಹಾಗೂ 33,000ಕ್ಕೂ ಹೆಚ್ಚಿನ ಘರ್‌ಗೂತಿ (ಮನೆಗಳಲ್ಲಿ ಪ್ರತಿಷ್ಠಾಪಿತ) ವಿಗ್ರಹಗಳ ವಿಸರ್ಜನೆ ನಡೆಯಿತು ಎಂದು ಬೃಹನ್ಮುಂಬಯಿ ಮಹಾನಗರ ಪಾಲಿಕೆ(ಬಿಎಂಸಿ)ಯ ಅಧಿಕಾರಿಯೊಬ್ಬರು ತಿಸಿದ್ದಾರೆ.

Advertisement

ನೈಸರ್ಗಿಕ ಜಲಗಾರಗಳ ಮಾಲಿನ್ಯವನ್ನು ತಡೆಗಟ್ಟುವ ಸಲುವಾಗಿ ಬಿಎಂಸಿಯ ವತಿಯಿಂದ ಮುಂಬಯಿಯ ವಿವಿಧ ವಾರ್ಡ್‌ಗಳಲ್ಲಿ ಸ್ಥಾಪಿಸಲಾಗಿದ್ದ ಕೃತಕ ಕೊಳಗಳಲ್ಲಿ ಬಹುತೇಕ ವಿಗ್ರಹಗಳ ವಿಸರ್ಜನೆ ನಡೆಯಿತು ಎಂದವರು ಹೇಳಿದ್ದಾರೆ.

ಬುಧವಾರ ಬೆಳಗ್ಗೆ 11ರ ವರೆಗೆ ಭಕ್ತರು  43,499 ಗಣಪತಿ ವಿಗ್ರಹಗಳನ್ನು  ವಿಸರ್ಜಿಸಿದರು.  ಈ  ವಿಗ್ರಹಗಳಲ್ಲಿ ಸಾರ್ವಜನಿಕ ಗಣೇಶಮಂಡಲಗಳ  7,034 ವಿಗ್ರಹಗಳು, ಮನೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ  33,350 ವಿಗ್ರಹಗಳು ಹಾಗೂ 188 ಗೌರಿ ಗಣೇಶ ವಿಗ್ರಹಗಳು ಸೇರಿವೆ. ಒಟ್ಟು 2,927  ಗಣಪತಿ ವಿಗ್ರಹಗಳನ್ನು ಕೃತಕ ಕೊಳಗಳಲ್ಲಿ  ವಿಸರ್ಜನೆ ಮಾಡಲಾಗಿದೆ. ಈ ವಿಗ್ರಹಗಳಲ್ಲಿ  ಸಾರ್ವನಿಕ  ಮಂಡಲಗಳ  164 ವಿಗ್ರಹಗಳು, ಮನೆಯ 2,758  ಹಾಗೂ 5 ಗೌರಿ ಗಣೇಶ ವಿಗ್ರಹಗಳು ಸೇರಿವೆ.

ಅಂತಿಮ ದಿನದ ಗಣಪತಿ ವಿಗ್ರಹ ವಿಸರ್ಜನೆಗೆ  ಮುಂಬಯಿ ಸೇರಿದಂತೆ  ರಾಜ್ಯಾದ್ಯಂತ ಬಿಗಿ ಭದ್ರತೆಯೊಂದಿಗೆ ಭರದ ಸಿದ್ಧತೆಗಳನ್ನು ಮಾಡಲಾಗಿತ್ತು.  ನಗರದ ಪ್ರಮುಖ ವಿಸರ್ಜನಾ ಸ್ಥಳಗಳಾದ ಗಿರಾYಂವ್‌ ಚೌಪಾಟಿ, ಶಿವಾಜಿ ಪಾರ್ಕ್‌, ಜೂಹೂ ಚೌಪಾಟಿ, ಮಾಲ್ವಣಿ, ಪೊವಾಯಿ ಲೇಕ್‌, ಮಾಲ್ವೆ, ಆಕ್ಸಾ ಚೌಪಾಟಿ ಸೇರಿದಂತೆ  ಸುಮಾರು 100  ವಿಸರ್ಜನಾ ಸ್ಥಳಗಳಲ್ಲಿ ಪೊಲೀಸರು  ಡ್ರೋನ್‌ ಕೆಮರಾ ಹಾಗೂ ಹೆಲಿಕಾಪ್ಟರ್‌ಗಳ ಮೂಲಕ  ಜನದಟ್ಟಣೆಯ ಮೇಲೆ ನಿಗಾ ಇಟ್ಟಿದ್ದರು.

ವಿವಿಧ ವಿಸರ್ಜನಾ ಸ್ಥಳಗಳಲ್ಲಿ ಲೈಫ್‌ಗಾರ್ಡ್‌ಗಳನ್ನು ನಿಯೋಜಿಸಲಾಗಿತ್ತು. ನಗರಾದ್ಯಂತ ಪೊಲೀಸ್‌ ನಿಯಂತ್ರಣ ಕೊಠಡಿಗಳು ಹಾಗೂ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸ ಲಾಗಿತ್ತು.  ಮೋಟಾರ್‌ ಬೋಟುಗಳು ಹಾಗೂ ಅಂಬ್ಯುಲೆನ್ಸ್‌ ಗಳನ್ನೂ ಸಿದ್ಧ ಇಡಲಾಗಿತ್ತು. ಅಲ್ಲದೆ ಪಾಲಿಕೆ ವತಿಯಿಂದ ಮೊಬೈಲ್‌ ಶೌಚಾಲಯಗಳ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಸರಿ ಸುಮಾರು 9,000 ಬಿಎಂಸಿ ನೌಕರರು  ವಿಸರ್ಜನಾ ಪ್ರಕ್ರಿಯೆಗಳ ಮೇಲ್ವಿಚಾರಣೆ ನಡೆಸಿದರು. 

ವಿಸರ್ಜನೆಗೆ ಬಳಸಲಾಗುವ ಮುಖ್ಯರಸ್ತೆಗಳಲ್ಲಿ ಭಾರೀ ವಾಹನಗಳ ಸಂಚಾರದ  ತಡೆಹಿಡಿಯಲಾಗಿತ್ತು.  ಕೆಲವೆಡೆ ಮಾರ್ಗಗಳನ್ನು ಬದಲಾಯಿಸಲಾಗಿತ್ತು. ಪ್ರಯಾಣಿಕರ ಅನುಕೂಲಕ್ಕಾಗಿ  ತಡರಾತ್ರಿಯಿಂದ  ಹೆಚ್ಚುವರಿ ವಿಶೇಷ ಲೋಕಲ್‌ ರೈಲುಗಳು ಹಾಗೂ  ಬೆಸ್ಟ್‌ ಆಡಳಿತದ ವತಿಯಿಂದ ಕೆಲವೆಡೆ ಹೆಚ್ಚುವರಿ ಬಸ್‌ಗಳ ವ್ಯವಸ್ಥೆಯನ್ನು ಮಾಡಲಾಗಿತ್ತು.

ವಿಗ್ರಹ ವಿಸರ್ಜನೆ ವೇಳೆ 15 ಮಂದಿ ದುರ್ಮರಣ
 ಅಂತಿಮ ದಿನದ ಗಣಪತಿ ವಿಗ್ರಹಗಳ ವಿಸರ್ಜನೆ ವೇಳೆ ರಾಜ್ಯಾದ್ಯಂತ ಸಂಭವಿಸಿದ ವಿವಿಧ ಪ್ರಕರಣಗಳಲ್ಲಿ  15 ಮಂದಿ ಮೃತಪಟ್ಟಿದ್ದಾರೆ. 

ಮಂಗಳವಾರ  ತಡರಾತ್ರಿಯ ವರೆಗೆ ರಾಜ್ಯಾದ್ಯಂತ 11 ಸಾವುಗಳು ವರದಿಯಾಗಿದ್ದು, ಬುಧವಾರ ಈ ಅಂಕಿಅಂಶವು 15ಕ್ಕೆ ಏರಿಕೆ ಆಯಿತು ಎಂದು ರಾಜ್ಯ ಪೊಲೀಸ್‌ ಕೇಂದ್ರ ಕಾರ್ಯಾಲಯದ ಅಧಿಕೃತ ಮೂಲಗಳು ತಿಳಿಸಿವೆ.  ಬುಧವಾರ  ಔರಂಗಾಬಾದ್‌ ಜಿಲ್ಲೆಯ ಬಿದ್ಕಿನ್‌ ಸಮೀಪ ಶಿವಾನಿ ನದಿಯಲ್ಲಿ  ವಿಗ್ರಹ ವಿಸರ್ಜನೆ ವೇಳೆ ನಾಲ್ವರು ವ್ಯಕ್ತಿಗಳು ಮುಳುಗಿ ಮೃತಪಟ್ಟರೆ, ಪುಣೆಯಲ್ಲೂ ಮೂವರು ಭಕ್ತರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಅದೇ, ಜಲಗಾಂವ್‌ ಮತ್ತು ನಾಸಿಕ್‌ನಲ್ಲಿ ತಲಾ 2 ಹಾಗೂ ಬೀಡ್‌, ಅಹ್ಮದ್‌ನಗರ, ಸತಾರ ಮತ್ತು ಪರ್ಭಾಣಿನಲ್ಲಿ ತಲಾ ಓರ್ವ ವ್ಯಕ್ತಿಯು ವಿಗ್ರಹ ವಿಸರ್ಜನೆ ವೇಳೆ ಮುಳುಗಿ ಮೃತಪಟ್ಟಿರುವುದಾಗಿ ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ.

ನಾಸಿಕ್‌ನಲ್ಲಿ ಸಂಭವಿಸಿದ 2 ಪ್ರತ್ಯೇಕ ಪ್ರಕರಣಗಳ ಪೈಕಿ  ಒಂದರಲ್ಲಿ ಕಿಶೋರ್‌ ಕೈಲಾಸ್‌ ಲೋಲಗೆ (24) ಎಂಬವರು ಚೆಹಾದಿ ಗ್ರಾಮಕ್ಕೆ ಸಮೀಪದ ದರ್ನಾ ನದಿಯಲ್ಲಿ ವಿಸರ್ಜನೆ ವೇಳೆ  ನೀರಲ್ಲಿ ಮುಳುಗಿ ಮೃತಪಟ್ಟರೆ, ಮತ್ತೂಂದು ಪ್ರಕರಣದಲ್ಲಿ ಗಣೇಶ್‌ ಮರಾಲೆ ಎಂಬವರು ಮುಗಾÕರಾ ಗ್ರಾಮಕ್ಕೆ ಸಮೀಪದ ಕೊಳದಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಈ ದುರದೃಷ್ಟಕರ ಘಟನೆಗಳ ಮಧ್ಯೆ ಬುಧವಾರ ಮುಂಜಾನೆ ವರೆಗೆ ಮುಂಬಯಿ, ಪುಣೆಯಲ್ಲಿ ಗಣೇಶ ವಿಗ್ರಹಗಳ ವಿಸರ್ಜನೆ ಪ್ರಕ್ರಿಯೆ  ನಡೆಯಿತು. ಪುಣೆಯ ಪ್ರಸಿದ್ಧ ದಗುxಶೇಟ್‌ ಹಲ್ವಾಯಿ ಗಣೇಶ ವಿಗ್ರಹವು 20 ಗಂಟೆಗಳ ಸುದೀರ್ಘ‌ ಮೆರವಣಿಗೆಯ ಬಳಿಕ ವಿಸರ್ಜಿಸಲ್ಪಟ್ಟಿತು.

Advertisement

Udayavani is now on Telegram. Click here to join our channel and stay updated with the latest news.

Next