Advertisement

ಕಾಂಗ್ರೆಸ್ ಗೆ ಸೇರ್ಪಡೆಗೊಂಡ ಮಹಾರಾಷ್ಟ್ರದ ಮಾಜಿ ಸಚಿವ ಸುನಿಲ್ ದೇಶ್ ಮುಖ್..!

05:29 PM Jun 19, 2021 | Team Udayavani |

ನವ  ದೆಹಲಿ  : ಮಹಾರಾಷ್ಟ್ರದ ಮಾಜಿ ಸಚಿವ ಸುನಿಲ್ ದೇಶ್ ಮುಖ್ ಇಂದು ಬಿಜೆಪಿ ಪಕ್ಷವನ್ನು ತೊರೆದು ರಾಷ್ಟ್ರೀಯ ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದಾರೆ.

Advertisement

2014  ರಲ್ಲಿ ಕಾಂಗ್ರೆಸ್ ನನ್ನು ತೊರೆದು ಬಿಜೆಪಿ ಸೇರಿದ್ದ ದೇಶ್ ಮುಖ್, ರಾಷ್ಟ್ರೀಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಜನ್ಮ ದಿನದಂದು  ಮತ್ತೆ ಮಾತೃ ಪಕ್ಷಕ್ಕೆ ಮಹಾರಾಷ್ಟ್ರ ಕಾಂಗ್ರಸ್ ಮುಖ್ಯಸ್ಥ ನಾನಾ ಪಟೋಲೆ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಎಚ್. ಕೆ ಪಾಟೀಲ್ ಮುಂದಾಳತ್ವದಲ್ಲಿ  ಸೇರ್ಪಡೆಗೊಂಡಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ : ಸದಾನಂದಗೌಡರಿಗೆ ಅವಮಾನ ಮಾಡುವ ಕೆಲಸವನ್ನು ವಿರೋಧ ಪಕ್ಷ ಮಾಡಿದೆ : ಕಟ್ಟಾ ಸುಬ್ರಹ್ಮಣ್ಯ

2014 ರ ತನಕ ಕಾಂಗ್ರೆಸ್ ಪಕ್ಷದಲ್ಲಿದ್ದ ದೇಶ್ ಮುಖ್, ಮಹಾರಾಷ್ಟ್ರದ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. 2004 ರಲ್ಲಿ ಮಹಾರಾಷ್ಟರದಲ್ಲಿ ಕಾಂಗ್ರಸ್ ಆಡಳಿತದ ಸಂದರ್ಭದಲ್ಲಿ ಆರ್ಥಿಕ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. 2014 ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದರು.

ಇನ್ನು, ತಿರೋರಾ ಕ್ಷೇತ್ರದ ಮಾಜಿ ಎನ್‌ ಸಿ ಪಿ (ರಾಷ್ಟ್ರೀಯ ಕಾಂಗ್ರೆಸ್ ಪಕ್ಷ) ಶಾಸಕ ದಿಲೀಪ್ ಬನ್ಸೋಡ್ ಮತ್ತು ಅಮರಾವತಿ ಪುರಸಭೆಯ 18 ಬಿಜೆಪಿ ಕಾರ್ಪೋರೇಟರ್‌ ಗಳು ಸಹ ಇಂದು(ಶನಿವಾರ, ಜೂನ್ 19) ಕಾಂಗ್ರೆಸ್ ಸೇರಿದ್ದಾರೆ.

Advertisement

ಈ ಬಗ್ಗೆ ತಮ್ಮ ವೈಯಕ್ತಿಕ ಟ್ವಿಟ್ ಖಾತೆಯ ಮೂಲಕ ಕಾಂಗ್ರೆಸ್ ಪಕ್ಷದ ಸದಸ್ಯ ಆದಿತ್ಯ ಗೋಸ್ವಾಮಿ, “ಡಾ. ಸುನೀಲ್ ದೇಶ್ ಮುಖ್ ಅವರೊಂದಿಗೆ, ತಿರೋರಾ ಕ್ಷೇತ್ರದ 18 ಬಿಜೆಪಿ ಕಾರ್ಪೋರೇಟರ್ ಗಳು ಮತ್ತು ಮಾಜಿ ಎನ್‌ ಸಿ ಪಿ ಶಾಸಕ ಎಸ್. ದಿಲೀಪ್ ಬನ್ಸೋಡ್ ಅವರು ಮಹಾರಾಷ್ಟ್ರ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಕಾಂಗ್ರೆಸ್ ಗೆ ಸೇರಿದ್ದಾರೆ” ಎಂದು ತಿಳಿಸಿದ್ದಾರೆ.


 ಇದನ್ನೂ ಓದಿ :  ರಾಜೀನಾಮೆ ನೀಡದೆ ಬಿಜೆಪಿಗೆ ಸೇರಿರುವ 10 ಶಾಸಕರನ್ನ ಪಕ್ಷಕ್ಕೆ ಸೇರಿಸಲ್ಲ : ಗುಂಡೂರಾವ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next