Advertisement
ಹೌದು, ಇಡೀ ವಿಶ್ವವೇ ತನ್ನತ್ತ ಗಮನೆ ಸೆಳೆಯುವ ಹಾಗೆ ಮಾಡಿದ ರೈತ ಯಾರು ಏನು ಎಂಬುವುದರ ಸಂಪೂರ್ಣ ಮಾಹಿತಿ ಇಲ್ಲಿದೆ. ನಾವು ನಿಮಗೆ ತಿಳಿಸುತ್ತಿರುವ ರೈತ ಸಾಮಾನ್ಯ ರೈತನಲ್ಲ. ಈ ರೈತ ಒಬ್ಬ ಹೆಲಿಕಾಪ್ಟರ್ ಮಾಲಿಕ, ಅಂತಂದರೇ ನೀವು ನಂಬಲೇಬೇಕು.
Related Articles
Advertisement
ಡೈರಿ ವ್ಯವಹಾರಕ್ಕಾಗಿ ಹೆಲಿಕಾಪ್ಟರ್ ಖರೀದಿಸಿದ ರೈತ ಜನಾರ್ದನ್ ..!
ಕೃಷಿ ಮತ್ತು ಹಾಲು ವ್ಯಾಪಾರ ಮಾಡುವ ರೈತ ಜನಾರ್ದನ್ ಭೋಯಿರ್ ಡೈರಿ ವ್ಯವಹಾರಕ್ಕಾಗಿ ಆಗಾಗ್ಗೆ ಪಂಜಾಬ್ , ಗುಜರಾತ್, ಹರಿಯಾಣ, ರಾಜಸ್ಥಾನದಂತಹ ಪ್ರದೇಶಗಳಿಗೆ ಪ್ರಯಣ ಬೆಳೆಸುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ತನ್ನ ಪ್ರಯಾಣ ಸುಗಮವಾಗಿರಲಿ ಎಂಬ ಕಾರಣದಿಂದಾಗಿ, 30 ಕೋಟಿ ಮೌಲ್ಯದ ಹೆಲಿಕಾಪ್ಟರ್ ಖರೀದಿಸಿದ್ದಾರೆ.
ಮಾರ್ಚ್ 15 ರಂದು ತಲುಪಲಿರುವ ಹೆಲಿಕ್ಯಾಪ್ಟರ್ !
ಜನಾರ್ದನ್ ಭೋಯಿರ್ ಅವರು ತಮ್ಮ ಮನೆಯ ಸಮೀಪ ಹೆಲಿಪ್ಯಾಡ್ ನಿರ್ಮಿಸಿದ್ದಾರೆ. ಇದಲ್ಲದೆ, ತನ್ನ 2.5 ಎಕರೆ ಜಾಗದಲ್ಲಿ ಪೈಲಟ್ ರೂಮ್ , ಟೆಕ್ನಿಷಿಯನ್ ರೂಮ್ ಸಹ ಸಿದ್ಧಪಡಿಸಲಾಗಿದೆ. ಮಾರ್ಚ್ 15 ರಂದು ಜನಾರ್ಧನ್ ಅವರಿಗೆ ಹೆಲಿಕಾಪ್ಟರ್ ಸಿಗಲಿದೆ.
ಜನಾರ್ಧನ್ ಗೆ ಇದು ಹೇಗೆ ಸಾಧ್ಯವಾಯಿತು..?
ಜನಾರ್ದನ್ ಭೋಯಿರ್ ಕೃಷಿಯ ಹೊರತಾಗಿ, ರಿಯಲ್ ಎಸ್ಟೇಟ್ ನಡೆಸುತ್ತಾರೆ. ಜನಾರ್ದನ್ ಭೋಯಿರ್ ಸಹ ಅನೇಕ ಗೋದಾಮುಗಳನ್ನು ಹೊಂದಿದ್ದು, ಇದರಿಂದ ಬಾಡಿಗೆ ರೂಪದಲ್ಲಿ ಸಾಕಷ್ಟು ಹಣ ಸಂಪಾದಿಸುತ್ತಾರೆ ಜನಾರ್ಧನ್.
ಓದಿ : ಭತ್ತದ ಗದ್ದೆಗೆ ಡ್ರೋಣ್ ಮೂಲಕ ಕ್ರಿಮಿನಾಶಕ ಸಿಂಪರಣೆ: ಗಂಗಾವತಿ ಭಾಗದ ರೈತರ ಹೊಸ ಪ್ರಯೋಗ