Advertisement

Tomato prices: ಟೊಮ್ಯಾಟೋ ಮಾರಿ ಒಂದೇ ತಿಂಗಳಿನಲ್ಲಿ ಕೋಟ್ಯಧಿಪತಿಯಾದ ರೈತ  

01:38 PM Jul 15, 2023 | Team Udayavani |

ಮಹಾರಾಷ್ಟ್ರ: ಟೊಮ್ಯಾಟೋ ಬೆಳೆಗೆ ಈಗ ಚಿನ್ನದ ದರ. ಮನೆಗೆ ತರಕಾರಿ ಖರೀದಿ ಮಾಡಿ ತರುವವರು ಟೊಮ್ಯಾಟೋ ಖರೀದಿಸಲೋ ಬೇಡ್ವೋ ಎನ್ನುವ ಚಿಂತೆಯಲ್ಲಿದ್ದರೆ, ಇತ್ತ ಟೊಮ್ಯಾಟೋ ಬೆಳೆದವರು ಖುಷಿಯಲ್ಲಿ ತೇಲಾಡುತ್ತಿದ್ದಾರೆ.

Advertisement

ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಟೊಮ್ಯಾಟೋ ಬೆಳೆದ ರೈತರೊಬ್ಬರು ಜಾಕ್‌ ಪಾಟ್‌ ಹೊಡೆದಿದ್ದಾರೆ. ತುಕಾರಾಂ ಭಾಗೋಜಿ ಗಾಯಕರ್ ಮತ್ತು ಅವರ ಕುಟುಂಬ ಕಳೆದ ಒಂದೇ ತಿಂಗಳಿನಲ್ಲಿ ಟೊಮ್ಯಾಟೋ ಮಾರಿ ಕೋಟ್ಯಧಿಪತಿಯಾಗಿದ್ದಾರೆ.!

ಹೌದು. ಗಗನಕ್ಕೇರಿರುವ ಟೊಮ್ಯಾಟೋ ಬೆಲೆಯನ್ನು ನೋಡಿ ನಾವೆಲ್ಲ ಶಾಕ್‌ ಆಗಿದ್ದೇವೆ. ಆದರೆ ಇಲ್ಲೊಬ್ಬರು ಟೊಮ್ಯಾಟೋ ಮಾರಿಯೇ ಕೋಟ್ಯಧಿಪತಿಯಾಗಿದ್ದಾರೆ.

ತುಕಾರಾಂ 18 ಎಕರೆ ಕೃಷಿ ಭೂಮಿ ಹೊಂದಿದ್ದಾರೆ. ಇದರಲ್ಲಿ 12 ಎಕರೆ ಜಮೀನಿನಲ್ಲಿ ತಮ್ಮ ಮಗ ಈಶ್ವರ್ ಗಾಯಕರ್ ಮತ್ತು ಸೊಸೆ ಸೊನಾಲಿ ಅವರ ಸಹಾಯದಿಂದ ಟೊಮ್ಯಾಟೋವನ್ನು ಬೆಳೆದಿದ್ದಾರೆ.

ಉತ್ತಮ ಗುಣಮಟ್ಟದಲ್ಲಿ ಟೊಮ್ಯಾಟೋ ಬೆಳೆಯನ್ನು ಬೆಳೆದ ತುಕಾರಾಂ ನಾರಾಯಣಗಂಜ್ ನಲ್ಲಿ ಮೊದಲಿಗೆ ಒಂದು ಟೊಮ್ಯಾಟೋ ಬಾಕ್ಸ್‌ (ಕ್ರೇಟ್)‌ ನ್ನು ಮಾರಾಟ ಮಾಡಿ 2,100 ರೂ.ವನ್ನು ಗಳಿಸಿದ್ದಾರೆ. ಆ ಬಳಿಕ ಶುಕ್ರವಾರ (ಜು.14 ರಂದು) 900 ಬಾಕ್ಸ್‌ ಮಾರಾಟ ಮಾಡಿ ಒಂದೇ ದಿನದಲ್ಲಿ 18 ಲಕ್ಷ ರೂ.ಯನ್ನು ಗಳಿಸಿರುವುದಾಗಿ ವರದಿ ತಿಳಿಸಿದೆ.

Advertisement

ಕಳೆದ ತಿಂಗಳು ಗುಣಮಟ್ಟದ ಆಧಾರದಲ್ಲಿ ಒಂದು ಟೊಮ್ಯಾಟೋ ಬಾಕ್ಸ್‌ ಗೆ 1000 ದಿಂದ 2,400 ರೂ.ವಿನಂತೆ ಬೆಲೆ ನಿಗದಿ ಮಾಡಿ ಮಾರಾಟ ಮಾಡುತ್ತಿದ್ದರು. ಇವರಿಂದ ಟೊಮ್ಯಾಟೋ ಖರೀದಿಸಿದ ಕೃಷಿ ಕೇಂದ್ರ ತಿಂಗಳಿನಲ್ಲಿ 80 ಕೋಟಿ ರೂ.ಗಳ ವ್ಯವಹಾರವನ್ನು ಮಾಡಿದೆ. ಇದರೊಂದಿಗೆ ಕೃಷಿ ಕೇಂದ್ರ  100ಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗವನ್ನೂ ನೀಡಿದೆ.

ಕಳೆದ ಒಂದು ತಿಂಗಳಿನಲ್ಲಿ 13,000 ಟೊಮೆಟೊ ಕ್ರೇಟ್‌ಗಳನ್ನು ಮಾರಾಟ ಮಾಡುವ ಮೂಲಕ 1.5 ಕೋಟಿ ರೂ.ವನ್ನು ತುಕಾರಂ ಗಳಿಸಿದ್ದಾರೆ.

ತುಕಾರಾಂ ಅವರ ಸೊಸೆ ನಾಟಿ, ಕೊಯ್ಲು, ಪ್ಯಾಕೇಜಿಂಗ್ ವಿಭಾಗವನ್ನು ನೋಡಿಕೊಳ್ಳುತ್ತಾರೆ. ಅವರ ಮಗ ಈಶ್ವರ್ ಮಾರಾಟ, ನಿರ್ವಹಣೆ ಮತ್ತು ಹಣಕಾಸು ಯೋಜನೆಯನ್ನು ನಿರ್ವಹಿಸುತ್ತಾರೆ.

 

Advertisement

Udayavani is now on Telegram. Click here to join our channel and stay updated with the latest news.

Next