Advertisement

Maharashtra Election: ಅಘಾಡಿ ಎಂದರೆ ಭ್ರಷ್ಟಾಚಾರದ ಕಿಲಾಡಿ: ಮೋದಿ

09:34 PM Nov 12, 2024 | Team Udayavani |

ಚಿಮೂರ್‌: “ಮಹಾರಾಷ್ಟ್ರವು ಅಘಾಡಿಯ ಕೈಗೆ ಎಟಕದಷ್ಟರ ಮಟ್ಟಿಗೆದ ಕ್ಷಿಪ್ರ ಅಭಿವೃದ್ಧಿ ಸಾಧಿಸುತ್ತಿದೆ. ವಿಪಕ್ಷಗಳ ಒಕ್ಕೂಟವು ರಾಜ್ಯದ ಅಭಿವೃದ್ಧಿಗೆ ಮಾರಕ. ಮಹಾ ವಿಕಾಸ ಅಘಾಡಿಯು ಅಭಿವೃದ್ಧಿ ಕೆಲಸಗಳಿಗೆ ಬ್ರೇಕ್‌ ಹಾಕುವಲ್ಲಿ ಪಿಎಚ್‌ಡಿ ಮಾಡಿದೆ. ಕಾಂಗ್ರೆಸ್‌ ಅದರಲ್ಲಿ ಡಬಲ್‌ ಪಿಎಚ್‌ಡಿ ಮಾಡಿದೆ. ಅಘಾಡಿ ಎಂದರೆ ಭ್ರಷ್ಟಾಚಾರದ ಕಿಲಾಡಿ’. ಇದು ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿರುವ ಮಹಾರಾಷ್ಟ್ರದಲ್ಲಿ ವಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ಅಬ್ಬರಿಸಿದ ಪರಿ.

Advertisement

ಮಂಗಳವಾರ ಮಹಾರಾಷ್ಟ್ರದ ಚಿಮೂರ್‌ ಮತ್ತು ಸೋಲಾಪುರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಮೋದಿ, “ದೇಶವನ್ನು ಆಳಲೆಂದೇ ನಾವು ಹುಟ್ಟಿದ್ದೇವೆ ಎಂಬ ಮನಸ್ಥಿತಿ ಕಾಂಗ್ರೆಸ್‌ನ ಶಾಹಿ ಪರಿವಾರಕ್ಕಿದೆ. ಅದೇ ಕಾರಣಕ್ಕೆ ಸ್ವಾತಂತ್ರ್ಯಾ ನಂತರ ಕಾಂಗ್ರೆಸ್‌ ಎಂದಿಗೂ ದಲಿತರು, ಹಿಂದುಳಿದವರು ಮತ್ತು ಆದಿವಾಸಿಗಳ ಪ್ರಗತಿಗೆ ಅವಕಾಶವನ್ನೇ ನೀಡಲಿಲ್ಲ’ ಎಂದು ಆರೋಪಿಸಿದರು.

ಸೋಲಾಪುರದಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದ ಅಘಾಡಿಯಲ್ಲಿ ಸಿಎಂ ಹುದ್ದೆಗಾಗಿ ಕಾಲ್ತುಳಿತವೇ ನಡೆಯುತ್ತಿದೆ. ಮಹಾಯುತಿ ಸರ್ಕಾರದ ಲಡ್ಕೀ ಬಹೀನ್‌ ಯೋಜನೆ ಎಲ್ಲರ ನಾಲಿಗೆಯಲ್ಲಿದೆ. ಇದರಿಂದ ಕಾಂಗ್ರೆಸಿಗರಿಗೆ ನಿದ್ದೆಯೇ ಹೊರಟು ಹೋಗಿದೆ ಎಂದು ಛೇಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next