Advertisement

ಅಘಾಡಿ ಪತನ: ಬಿಜೆಪಿ ಸಂಭ್ರಮ: ಗೋವಾಕ್ಕೆ ಬಂದಿಳಿದ ಭಿನ್ನಮತೀಯರು

01:30 AM Jun 30, 2022 | Team Udayavani |

ಪಣಜಿ/ಮುಂಬಯಿ: ಗುರುವಾರವೇ ವಿಧಾನಸಭೆಯಲ್ಲಿ ವಿಶ್ವಾಸಮತ ಕೋರುವಂತೆ ಸುಪ್ರೀಂ­ಕೋರ್ಟ್‌ ಸೂಚನೆ ಬೆನ್ನಲ್ಲಿಯೇ ಸಿಎಂ ಹುದ್ದೆಗೆ ಉದ್ಧವ್‌ ಠಾಕ್ರೆ ರಾಜೀನಾಮೆ ನೀಡಿದ್ದಾರೆ.

Advertisement

ಈ ಸುದ್ದಿ ಪ್ರಕಟವಾಗುತ್ತಿದ್ದಂತೆಯೇ ಮಹಾ­ರಾಷ್ಟ್ರದಾದ್ಯಂತ ಬಿಜೆಪಿ ಮುಖಂಡರು ಮತ್ತು ಕಾರ್ಯ­ಕರ್ತರು ಸಂಭ್ರಮಾಚರಣೆ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ “ಕರ್ಮದ ಫ‌ಲ ಯಾರನ್ನೂ ಬಿಡುವುದಿಲ್ಲ’ ಎಂದಿದ್ದಾರೆ. ಜತೆಗೆ ಕೊನೇಯ ಸಂಪುಟ ಸಭೆಯಲ್ಲಿ ಕೆಲವೊಂದು ನಗರಗಳ ಹೆಸರು ಬದಲಾವಣೆ ಸೇರಿದಂತೆ ಪ್ರಮುಖ ನಿರ್ಣಯಗಳನ್ನು ಕೈಗೊಂಡಿರುವು­ದನ್ನು ಖಂಡಿಸಿದ್ದಾರೆ. ಜತೆಗೆ ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಬಿಜೆಪಿ ಕಾರ್ಯಕರ್ತರು ಬೀದಿಗೆ ಇಳಿದು ಸಂಭ್ರಮಿಸಿದರು.

ಮುಂಬಯಿಯ ಹೋಟೆಲ್‌ ಒಂದರಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ದೇವೇಂದ್ರ ಫ‌ಡ್ನವೀಸ್‌ ಮುಖಂಡರ ಜತೆಗೆ ಸಭೆ ನಡೆಸಿದ್ದಾರೆ. ಸಭೆಯ ಬಳಿಕ ಸಿಹಿ ಹಂಚಿ ಸಂಭ್ರಮಿಸಲಾಯಿತು

ಪಣಜಿಗೆ ಆಗಮನ: ಗುವಾಹಾಟಿಯಿಂದ ವಿಶೇಷ ವಿಮಾನದಲ್ಲಿ ಹೊರಟ ಶಿವಸೇನೆಯ ಭಿನ್ನಮತೀಯ ಶಾಸಕರು ಬುಧವಾರ ರಾತ್ರಿ ಗೋವಾ ರಾಜಧಾನಿ ಪಣಜಿಗೆ ಆಗಮಿಸಿದ್ದಾರೆ.

ಬಿಗಿಭದ್ರತೆ: ಮಹಾರಾಷ್ಟ್ರದಲ್ಲಿ ಉಂಟಾಗಿರುವ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಪೊಲೀಸ್‌ ಇಲಾಖೆ, ಮುಂಬಯಿಯಾದ್ಯಂತ ಭಾರೀ ಬಿಗಿಭದ್ರತೆ ಏರ್ಪಡಿಸಿದೆ.

Advertisement

ಹೊಸ ಸರಕಾರ ರಚನೆಯಾಗುವ ಹಿನ್ನೆಲೆಯಲ್ಲಿ ಶಿವಸೇನೆಯ ಕಚೇರಿಯಿಂದ ಮಹಾರಾಷ್ಟ್ರ ವಿಧಾನಸಭೆಗೆ ಸಾಗುವ ಎಲ್ಲ ಮಾರ್ಗಗಳಲ್ಲಿ ಪೊಲೀಸ್‌ ಕಾವಲು ಹಾಕಲಾಗಿದೆ. ಪ್ರಮುಖ ರಸ್ತೆಗಳಲ್ಲಿ ಪೊಲೀಸ್‌ ನಾಕಾಬಂದಿ ಹಾಕಲಾಗಿದೆ ಹಾಗೂ ಮಹಾರಾಷ್ಟ್ರ ವಿಧಾನಸೌಧದ ಆವರಣ ಹಾಗೂ ಆಜು­ಬಾಜಿನಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಪಕ್ಷಗಳ ಬಲ ಪಕ್ಷ ಸಂಖ್ಯೆ
ಶಿವಸೇನೆ 16
ಎನ್‌ಸಿಪಿ 53
ಕಾಂಗ್ರೆಸ್‌ 44
ಬಿಜೆಪಿ 106
ಶಿಂಧೆ ಬಣ 39
ಪಕ್ಷೇತರರು 29
ತೆರವಾದ ಸ್ಥಾನ 1
ಒಟ್ಟು ಸ್ಥಾನ 288
ಬಹುಮತಕ್ಕೆ 144

 

Advertisement

Udayavani is now on Telegram. Click here to join our channel and stay updated with the latest news.

Next