Advertisement

ಮಹಾರಾಷ್ಟ್ರ : ಶಿವಸೇನೆಯ 15 ಬಂಡಾಯ ಶಾಸಕರಿಗೆ ಕೇಂದ್ರದಿಂದ Y+ ಭದ್ರತೆ, ಶಿಂಧೆ ಹೆಸರು ಮಾಯಾ

05:26 PM Jun 26, 2022 | Team Udayavani |

ಮಹಾರಾಷ್ಟ್ರ : ಶಿಂಧೆ ಪಾಳಯದಲ್ಲಿರುವ ಶಿವಸೇನೆಯ ಹದಿನೈದು ಮಂದಿ ಬಂಡಾಯ ಶಾಸಕರಿಗೆ ಕೇಂದ್ರ ಸರಕಾರ ಭಾನುವಾರ Y+ ಭದ್ರತೆ ಒದಗಿಸಿದೆ.

Advertisement

ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕೇಂದ್ರ ಸರಕಾರ ಒದಗಿಸಿದ Y+ ಭದ್ರತೆಯಲ್ಲಿ ಬಂಡಾಯ ನಾಯಕ ಏಕನಾಥ್ ಶಿಂಧೆ ಅವರ ಹೆಸರು ಭದ್ರತಾ ಪಟ್ಟಿಯಲ್ಲಿ ಮಾಯವಾಗಿರುವುದು.

ಮಹಾರಾಷ್ಟ್ರದಲ್ಲಿ ನಡೆದ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈ ಬಂಡಾಯ ಶಾಸಕರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು ಎನ್ನಲಾಗಿದೆ.
ಮಹಾರಾಷ್ಟ್ರ ಮಹಾ ವಿಕಾಸ್ ಅಘಾಡಿ ಸರಕಾರದ ವಿರುದ್ಧ ಬಂಡಾಯ ಸಾರಿರುವ ಏಕನಾಥ ಶಿಂಧೆ ನೇತೃತ್ವದ ೪೦ ಕ್ಕೂ ಹೆಚ್ಚು ಶಾಸಕರು ಗುವಾಹಟಿಯ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ.

ಇದನ್ನೂ ಓದಿ : ದಕ್ಷಿಣ ಆಫ್ರಿಕಾದ ನೈಟ್‌ಕ್ಲಬ್‌ನಲ್ಲಿ 17 ಮಂದಿ ಶವವಾಗಿ ಪತ್ತೆ! ಕಾರಣ ನಿಗೂಢ

‘ವೈ’ ವರ್ಗದ ಭದ್ರತೆಯಲ್ಲಿ ಎಂಟು ಸಿಬ್ಬಂದಿಯನ್ನು ಒಳಗೊಂಡಿರುತ್ತದೆ, ಇದರಲ್ಲಿ ಒಬ್ಬರು ಅಥವಾ ಇಬ್ಬರು ಕಮಾಂಡೋಗಳು ಮತ್ತು ಪೊಲೀಸ್ ಸಿಬ್ಬಂದಿಗಳು ಇರುತ್ತಾರೆ.

Advertisement

ರಮೇಶ ಬೋರ್ನಾರೆ, ಮಂಗೇಶ್ ಕುಡಾಳ್ಕರ್, ಸಂಜಯ್ ಶಿರ್ಸತ್, ಲತಾಬಾಯಿ ಸೋನವಾನೆ, ಪ್ರಕಾಶ್ ಸರ್ವೆ, ಸದಾನಂದ ಸರನವಂಕರ್, ಯೋಗೇಶ್ ದಾದಾ ಕದಂ, ಪ್ರತಾಪ್ ಸರ್ನಾಯಕ್, ಯಾಮಿನಿ ಜಾಧವ್, ಪ್ರದೀಪ್ ಜೈಸ್ವಾಲ್, ಸಂಜಯ್ ರಾಥೋಡ್, ದಾದಾಜಿ ಭೂಸೆ, ದಿಲೀಪ್ ಲಾಂಡೆ, ಬಾಲಾಜಿ ಕಲ್ಯಾಣರ್, ಸಂದೀಪನ ಭೂಮಾರೆ ಈ ಹದಿನೈದು ಶಾಸಕರ ಹೆಸರುಗಳು ಕೇಂದ್ರ ಸರಕಾರ ಒದಗಿಸುವ ಭದ್ರತಾ ಪಟ್ಟಿಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next