Advertisement

ಉಡುಪಿಯಲ್ಲಿ ಯಶ್ ಪಾಲ್ ಪರ ಮಹಾರಾಷ್ಟ್ರ ಸಿಎಂ ಶಿಂಧೆ ಪ್ರಚಾರ

06:45 PM May 08, 2023 | Team Udayavani |

ಉಡುಪಿ : ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಸೋಮವಾರ ಉಡುಪಿ ನಗರದಲ್ಲಿ ಬಿಜೆಪಿ ಅಧ್ಯರ್ಥಿ ಯಶ್ ಪಾಲ್ ಸುವರ್ಣ ಅವರ ಪರ ರೋಡ್ ಶೋ ನಡೆಸಿ ಬಳಿಕ ಬಹಿರಂಗ ಸಭೆಯಲ್ಲಿ ಮಾತನಾಡಿದರು.

Advertisement

ಸಭೆಯನ್ನುದ್ದೇಶಿಸಿ ಕನ್ನಡದಲ್ಲೇ ಮಾತನ್ನಾರಂಭಿಸಿದ ಶಿಂಧೆ ಅವರು ಎಲ್ಲರಿಗೂ ನನ್ನ ನಮಸ್ಕಾರಗಳು ಎಂದರು. ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಬಹಳ ಹಿಂದಿನಿಂದಲೂ ಸಂಬಂಧವಿದೆ. ಶಿವಾಜಿ ಮಾಹಾರಾಜರ ಕಾಲದಿಂದಲೂ ದೊಡ್ಡ ಬಾಂಧವ್ಯವಿದೆ. ಉಡುಪಿಯಲ್ಲಿ ಜನ್ಮಭೂಮಿ ಯಾದರೆ ಅನೇಕರಿಗೆ ಮುಂಬಯಿ ಕರ್ಮಭೂಮಿಯಾಗಿದ್ದು ವ್ಯಾಪಾರ, ವ್ಯವಹಾರ ಉದ್ಯೋಗಿಗಳಾಗಿದ್ದಾರೆ. ಕೋವಿಡ್ ಕಾಲದಲ್ಲಿ ಮಹಾರಾಷ್ಟ್ರದಲ್ಲಿ ಕನ್ನಡಿಗರು ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ ಎಂದರು.

ಮಹಾರಾಷ್ಟ್ರದಲ್ಲಿ ಶಿವಸೇನೆ-ಬಿಜೆಪಿ ಮೈತ್ರಿ ಸರಕಾರವಿದ್ದು ಇದೆ ಕಾರಣಕ್ಕೆ ನಾನು ಪ್ರಚಾರಕ್ಕೆ ಬಂದಿದ್ದೇನೆ ಎಂದರು. ಮಾಹಾರಾಷ್ಟ್ರದಲ್ಲಿ ಯಾವ ರಾಜಕೀಯ ಬದಲಾವಣೆ ಆಯಿತು ಎಂದು ತಾವೆಲ್ಲರೂ ತಿಳಿದಿದ್ದೀರಿ. ನಾವು ಬಾಳಾ ಸಾಹೇಬ್ ಠಾಕ್ರೆ ಅವರ ಹಿಂದುತ್ವದ ವಿಚಾರವನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತಿದ್ದೇವೆ ಎಂದರು.

ನರೇಂದ್ರ ಮೋದಿ ಅವರ ಸಹಕಾರದಿಂದ ಡಬಲ್ ಇಂಜಿನ್ ಸರಕಾರ ಕರ್ನಾಟಕದಂತೆ ಮಹಾರಾಷ್ಟ್ರದಲ್ಲೂ ಇದೆ ಎಂದರು. ವಿಕಾಸಕ್ಕಾಗಿ ನಾವು ದೊಡ್ಡ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದೇವೆ. ನಾವು ಮೋದಿ ಅವರಿಗೆ ಯಾವುದೇ ಯೋಜನೆಯ ಪ್ರಸ್ತಾವನೆ ಮಾಡಿದರೆ ಎಲ್ಲವೂ ಮಂಜೂರಾಗುತ್ತದೆ. ಕರ್ನಾಟಕದಲ್ಲೂ ವಿಕಾಸ ಆಗುತ್ತಿದೆ ಎಂದರು.

Advertisement

ರಘುಪತಿ ಭಟ್ ಅವರಿಗೆ ಸನ್ಮಾನ

ಶಾಸಕ ರಘುಪತಿ ಭಟ್ ಅವರಿಗೆ ಶಿಂಧೆ ಅವರು ಶಾಲು ಹೊದಿಸಿ ಸನ್ಮಾನಿಸಿದರು. ಉಡುಪಿಯಲ್ಲಿ ಯುವ ಯಶ್ ಪಾಲ್ ಅವರೊಂದಿಗೆ ರಘುಪತಿ ಭಟ್ ಅವರೂ ಅಭ್ಯರ್ಥಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ರೀತಿ ಬಿಜೆಪಿ ಮತ್ತು ಶಿವಸೇನೆಯಲ್ಲಿ ಆಗುತ್ತದೆ. ನನ್ನಂತ ಒಬ್ಬ ರೈತನ ಮಗ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಲು ಸಾಧ್ಯವಾಗಿದೆ ಎಂದರು.

ರಘುಪತಿ ಭಟ್ ಅವರು ಜತೆಯಲ್ಲಿರುವ ಕಾರಣ ಯಶ್ ಪಾಲ್ ಅವರಿಗೆ 50 ಸಾವಿರಕ್ಕೂ ಹೆಚ್ಚು ಲೀಡ್ ಸಿಗುತ್ತದೆ ಎಂದರು.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗ ದಳ ನಿಷೇಧ ಕುರಿತು ಉಲ್ಲೇಖಿಸಿ ಮಾತನಾಡಿ, ವಿನಾಶ ಕಾಲಕ್ಕೆ ವಿಪರೀತ ಬುದ್ದಿ. ಬಜರಂಗ ದಳ ದೇಶ ಭಕ್ತ ಸಂಘಟನೆ ಎಂದರು. ಇದಕ್ಕೆ ಉತ್ತರ ಈ ಚುನಾವಣೆಯಲ್ಲಿ ನೀವು ನೀಡಬೇಕು ಎಂದರು.

2014 ರಲ್ಲಿ ಮೋದಿ ಅವರು ಪ್ರಧಾನಿಯಾದ ಬಳಿಕ ಹಿಂದೂ ಗಳಿಗೆ ಗರ್ವದ ದಿನವಾಗಿದೆ. ಸಾವರ್ಕರ್ ಅವರಿಗೆ ಕಾಂಗ್ರೆಸ್ ಅವರಿಗೆ ಅವಮಾನ ಮಾಡಿದರು. ರಾಹುಲ್ ಗಾಂಧಿ ಅವರು ವಿದೇಶದಲ್ಲಿ ದೇಶಕ್ಕೆ ಅವಮಾನ ಮಾಡಿದರು ಎಂದು ಕಿಡಿ ಕಾರಿದರು.

ಪ್ರಧಾನಿ ಮೋದಿ ಅವರು ನಮ್ಮ ದೇಶದ ಹೆಸರನ್ನು ವಿಶ್ವದ ಎಲ್ಲೆಡೆ ಬೆಳಗಿಸಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next