Advertisement
ಮೊದಲು ಬ್ಯಾಟಿಂಗ್ ನಡೆಸಿದ ಶಿವಮೊಗ್ಗ 17.4 ಓವರ್‌ಗಳಲ್ಲಿ 121ಕ್ಕೆ ಸರ್ವಪತನ ಕಂಡರೆ, ಗುಲ್ಬರ್ಗ 12.4 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 126 ರನ್ ಬಾರಿಸಿತು. ಇದು 6 ಪಂದ್ಯಗಳಲ್ಲಿ ಗುಲ್ಬರ್ಗ ಸಾಧಿಸಿದ 3ನೇ ಜಯ. ಶಿವಮೊಗ್ಗ 6 ಪಂದ್ಯಗಳಲ್ಲಿ 3ನೇ ಸೋಲನುಭವಿಸಿತು. ಆದರೆ ರನ್‌ರೇಟ್‌ನಲ್ಲಿ ಗುಲ್ಬರ್ಗ ಮುಂದಿದೆ.
Related Articles
Advertisement
ಸಂಕ್ಷಿಪ್ತ ಸ್ಕೋರ್ಶಿವಮೊಗ್ಗ ಲಯನ್ಸ್-17.4 ಓವರ್‌ಗಳಲ್ಲಿ 121 (ರೋಹನ್ ನವೀನ್ 33, ರೋಹಿತ್ ಕುಮಾರ್ ಕೆ. 25, ಪ್ರಣವ್ ಭಾಟಿಯ 19, ಹಾರ್ದಿಕ್ ರಾಜ್ 27ಕ್ಕೆ 3, ವಿಜಯ್‌ಕುಮಾರ್ ವೈಶಾಖ್ 9ಕ್ಕೆ 2, ಅಭಿಲಾಷ್ ಶೆಟ್ಟಿ 21ಕ್ಕೆ 2). ಗುಲ್ಬರ್ಗ ಮಿಸ್ಟಿಕ್ಸ್-12.4 ಓವರ್‌ಗಳಲ್ಲಿ ಒಂದು ವಿಕೆಟಿಗೆ 126 (ಎಲ್.ಆರ್. ಚೇತನ್ ಔಟಾಗದೆ 58, ಆದರ್ಶ್ ಪ್ರಜ್ವಲ್ 37, ಮೆಕ್‌ನೀಲ್ ಹ್ಯಾಡ್ಲಿ ನೊರೋನ್ಹ ಔಟಾಗದೆ 27, ಶ್ರೇಯಸ್ ಗೋಪಾಲ್ 40ಕ್ಕೆ 1).
ಪಂದ್ಯಶ್ರೇಷ್ಠ: ಹಾರ್ದಿಕ್ ರಾಜ್. ಬೆಂಗಳೂರಿಗೆ ಸತತ 6ನೇ ಸೋಲು
ಮಂಗಳೂರು ಡ್ರ್ಯಾಗನ್ಸ್ ದ್ವಿತೀಯ ಸುತ್ತಿನ ಪಂದ್ಯದಲ್ಲೂ ಬೆಂಗಳೂರು ಬ್ಲಾಸ್ಟರ್ ಮೇಲೆ ಸವಾರಿ ಮಾಡಿದೆ. 31 ರನ್ ಗೆಲುವು ಸಾಧಿಸಿದೆ. ಮೊದಲ ಸುತ್ತಿನ ಮುಖಾಮುಖೀಯಲ್ಲಿ ಮಂಗಳೂರು 23 ರನ್ ಜಯ ಗಳಿಸಿತ್ತು. ಸೋಮವಾರದ 2ನೇ ಪಂದ್ಯದಲ್ಲಿ ಮಂಗಳೂರು ತಂಡ 7 ವಿಕೆಟಿಗೆ 171 ರನ್ ಪೇರಿಸಿದರೆ, ಬೆಂಗಳೂರು 9 ವಿಕೆಟ್ ನಷ್ಟಕ್ಕೆ 140 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಬೆಂಗಳೂರು ತಂಡ ಆರೂ ಪಂದ್ಯಗಳನ್ನು ಸೋತಂತಾಯಿತು. ಮಂಗಳೂರು ಸರದಿಯಲ್ಲಿ ಅನಿರುದ್ಧ ಜೋಶಿ 39, ಅನೀಶ್ವರ್ ಗೌತಮ್ 32, ರೋಹನ್ ಪಾಟೀಲ್ 28 ರನ್ ಹೊಡೆದರು. ಬೆಂಗಳೂರು ಇನ್ನಿಂಗ್ಸ್‌ನಲ್ಲಿ ಶುಭಾಂಗ್ ಹೆಗ್ಡೆ ಏಕಾಂಗಿಯಾಗಿ ಹೋರಾಡಿ ಈ ಪಂದ್ಯದ ಏಕೈಕ ಅರ್ಧ ಶತಕ ದಾಖಲಿಸಿದರು (54). ಪರಸ್ ಗುರ್ಬಕ್Ò ಆರ್ಯ 22ಕ್ಕೆ 5 ವಿಕೆಟ್ ಉಡಾಯಿಸಿ ಬೆಂಗಳೂರು ತಂಡವನ್ನು ಕಾಡಿದರು.