Advertisement

ಮಹಾಲಿಂಗಪುರ: ಅಕ್ರಮ ನಾಡಪಿಸ್ತೂಲ್ ಹೊಂದಿದ್ದ ವ್ಯಕ್ತಿಯ ಬಂಧನ

10:05 PM Jul 27, 2023 | Team Udayavani |

ಮಹಾಲಿಂಗಪುರ: ಸರ್ಕಾರದ ಪರವಾಣಿಗೆ ಇಲ್ಲದೇ ಅಕ್ರಮವಾಗಿ ನಾಡಪಿಸ್ತೂಲ್ ಹೊಂದಿದ್ದ ವ್ಯಕ್ತಿಯ ಮನೆ ಮೇಲೆ, ಖಚಿತ ಮಾಹಿತಿ ಮೇರೆಗೆ ಗುರುವಾರ ದಾಳಿ ನಡೆಸಿ ನಾಡಪಿಸ್ತೂಲ್ ವಶಪಡಿಸಿಕೊಂಡು ವ್ಯಕ್ತಿಯನ್ನು ಬಂಧಿಸುವಲ್ಲಿ ಮಹಾಲಿಂಗಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಸಮೀಪದ ಮಾರಾಪೂರ ಗ್ರಾಮದ ಅವ್ವಪ್ಪ ಹಣಮಂತ ತಂಬೂರಿ ಬಂಧಿತ ವ್ಯಕ್ತಿ. ಸರ್ಕಾರದ ಪರವಾಣಿಗೆ ಇಲ್ಲದೇ ತನ್ನ ಮನೆಯಲ್ಲಿ ಕಂಟ್ರಿ ಪಿಸ್ತೂಲ್ ಇಟ್ಟುಕೊಂಡಿದ್ದ ಖಚಿತ ಮಾಹಿತಿಯಂತೆ ಬಾಗಲಕೋಟೆ ಎಸ್‌ಪಿ, ಜಮಖಂಡಿ ಡಿವೈಎಸ್‌ಪಿ ಶಾಂತವೀರ.ಇ ಹಾಗು ಬನಹಟ್ಟಿ ಸಿಪಿಆಯ್ ಆಯ್.ಎಂ.ಮಠಪತಿ ಅವರ ಮಾರ್ಗದರ್ಶನದಲ್ಲಿ ಮಹಾಲಿಂಗಪುರ ಠಾಣಾಧಿಕಾರಿ ಪ್ರವೀಣ ಬೀಳಗಿ ಅವರು ತಮ್ಮ ಸಿಬಂದಿಯೊಂದಿಗೆ ಮಾರಾಪೂರ ಗ್ರಾಮದಲ್ಲಿನ ಅವ್ವಪ್ಪ ಹಣಮಂತ ತಂಬೂರಿ ಮನೆಯ ಮೇಲೆ ದಾಳಿ ಮಾಡಿ, ವಿಚಾರಣೆಗೆ ಒಳಪಡಿಸಿದಾಗ 3-4 ವರ್ಷಗಳ ಹಿಂದೆ ಬೆಳಗಾವಿ ಜಿಲ್ಲೆಯ ರಾಯಭಾಗ ರೇಲ್ವೆ ಸ್ಷೇಷನ್ ಹೊರಗೆ ಯಾರೋ ಒಬ್ಬನಿಂದ ಖರೀದಿ ಮಾಡಿಕೊಂಡು ಬಂದಿರುವದಾಗಿ ತಿಳಿದು ಬಂದಿದೆ.

ದಾಳಿಯ ವೇಳೆ ಅವ್ವಪ್ಪ ಹಣಮಂತ ತಂಬೂರಿ ಮನೆಯಲ್ಲಿದ್ದ ಒಂದು ನಾಡ ಪಿಸ್ತೂಲ್, ಎರಡು ಜೀವಂತ ಗುಂಡುಗಳು, ಒಂದು ಏರಗನ್ ನಮೂನೆಯದು, ಒಂದು ಪೋಲ್ಡೇಬಲ್ ಲಾಂಗ್, ಕಟ್ಟಿಗೆ ಹಿಡಿಕೆ ಇರುವ ಮತ್ತೊಂದು ಲಾಂಗ್, ಪಿಸ್ತೂಲು ಹಾಗೂ ಗುಂಡುಗಳನ್ನು ಹಾಕಿಟ್ಟ ಪ್ಲಾಸ್ಟಿಕ್ ಚೀಲ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ನಾಡಪಿಸ್ತೂಲ್ ಹೊಂದಿದ ಆರೋಪಿ ಬಂಧನ ಮತ್ತು ಪಿಸ್ತೂಲ್ ವಶಪಡಿಸಿಕೊಂಡ ಕಾರ್ಯಾಚರಣೆಯಲ್ಲಿ ಮಹಾಲಿಂಗಪುರ ಠಾಣಾಧಿಕಾರಿ ಪ್ರವೀಣ ಬೀಳಗಿ ಅವರ ಜೊತೆಗೆ ಎಎಸ್‌ಆಯ್ ಎಸ್.ಬಿ.ಜೈನರ್, ಜೆ.ಜಿ.ಪಾಟೀಲ, ಎಸ್.ಡಿ.ಬಾರಿಗಿಡದ, ಆರ್.ಎನ್.ತೋಳಮಟ್ಟಿ, ಬಿ.ಜಿ.ದೇಸಾಯಿ, ಬಿ.ಪಿ.ಹಡಪದ, ಎಂ.ಎಸ್.ಕನಶೆಟ್ಟಿ ಅವರ ಕಾರ್ಯವನ್ನು ಮೆಚ್ಚಿ ಬಾಗಲಕೋಟೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಬಹುಮಾನ ಘೋಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next