Advertisement

ಮಹಾಲಿಂಗಪುರ ತಾಲೂಕು ಆಗುವರೆಗೂ ಹೋರಾಟ ನಿರಂತರ

07:21 PM Aug 17, 2022 | Team Udayavani |

ಮಹಾಲಿಂಗಪುರ: ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿಸಲು ಒತ್ತಾಯಿಸಿ ಕಳೆದ ಏಪ್ರೀಲ್ 14 ರಿಂದ ನಡೆಯುತ್ತಿರುವ ಮಹಾಲಿಂಗಪುರ ತಾಲೂಕು ಹೋರಾಟವು ಬುಧವಾರ 126 ದಿನಗಳನ್ನು ಪೂರೈಸಿದೆ.

Advertisement

ಹೋರಾಟ ಪ್ರಾರಂಭಿಸಿ 125 ದಿನಗಳು ಕಳೆದರೂ ಸರ್ಕಾರದಿಂದ ಸೂಕ್ತ ಸ್ಪಂದನೆ ದೊರೆಯದ ಕಾರಣ ಸಾಮೂಹಿಕ ನಾಯಕತ್ವದಲ್ಲಿ ಬುಧವಾರ ಕರೆ ನೀಡಿದ್ದ ಮಹಾಲಿಂಗಪುರ ಬಂದ್ ಬೃಹತ್ ಪ್ರತಿಭಟನೆಯ ನಂತರ ಹೋರಾಟ ವೇದಿಕೆಯಲ್ಲಿ ನಡೆದ ಸಭೆಯಲ್ಲಿ ಪಕ್ಷಾತೀತವಾಗಿ ಮಹಾಲಿಂಗಪೂರ ತಾಲೂಕು ಹೋರಾಟ ಆಗುವರೆಗೂ ಹೋರಾಟವನ್ನು ಮುಂದುವರೆಸುವುದು, ಮುಖ್ಯವಾಗಿ ಬಾಗಲಕೋಟೆ ಜಿಲ್ಲಾಧಿಕಾರಿಗಳು ಹೋರಾಟ ವೇದಿಕೆಗೆ ಆಗಮಿಸಿ 125 ದಿನಗಳ ಮಹಾಲಿಂಗಪುರ ಹೋರಾಟದ ಕುರಿತು ಸರ್ಕಾರಕ್ಕೆ ಜಿಲ್ಲಾಡಳಿತದಿಂದ ನೀಡಿರುವ ವರದಿಯ ಮಾಹಿತಯನ್ನು ತಿಳಿಸಬೇಕೆಂದು ಹೋರಾಟಗಾರರು ಒತ್ತಾಯಿಸಿದರು.

ಮಹಾಲಿಂಗಪುರ ತಾಲೂಕು ಹೋರಾಟ ಸಮಿತಿಯ ಧರೆಪ್ಪ ಸಾಂಗ್ಲಿಕರ, ಸಂಗಪ್ಪ ಹಲ್ಲಿ, ಸಿದ್ದು ಪಾಟೀಲ, ನಿಂಗಪ್ಪ ಬಾಳಿಕಾಯಿ, ಚನ್ನಬಸು ಹುರಕಡ್ಲಿ, ಸಿದ್ದು ಶಿರೋಳ, ಮಹಾದೇವ ಮೇಟಿ, ಅರ್ಜುನ ಹಲಗಿಗೌಡರ, ಕಲಾವಿದ ರಂಗನಾಥ ಡಿ.ಕೆ, ರೈತ ಸಂಘದ ಮುತ್ತಪ್ಪ ಕೋಮಾರ, ಗಂಗಾಧರ ಮೇಟಿ, ಸುಭಾಸ ಶಿರಬೂರ, ಕಾಂಗ್ರೆಸ್ ಮುಖಂಡರಾದ ಎ.ಆರ್.ಬೆಳಗಲಿ, ಎಸ್.ಎಂ.ಉಳ್ಳಾಗಡ್ಡಿ, ರಂಗನಗೌಡ ಪಾಟೀಲ, ಗುರಲಿಂಗಯ್ಯಾ ಮಠಪತಿ, ಶಂಕರ ಹುಕ್ಕೇರಿ, ಡಾ| ಬಿ.ಡಿ.ಸೋರಗಾಂವಿ, ನ್ಯಾಯವಾದಿ ಬಿ.ವ್ಹೀ.ಕೆರೂರ, ಶಿವಲಿಂಗ ಟಿರ್ಕಿ, ಎಚ್.ಎಸ್.ಭಜಂತ್ರಿ  ಸೇರಿದಂತೆ ಹಲವರು ಮಾತನಾಡಿ ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿಯವರು ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಿ, ಮಹಾಲಿಂಗಪೂರ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕೆಂದು ಒತ್ತಾಯಿಸಿದರು.

ತಹಶೀಲ್ದಾರಗೆ ಮನವಿ : ಮಧ್ಯಾಹ್ನ ತಾಲೂಕು ಹೋರಾಟದ ವೇದಿಕೆಗೆ ಭೇಟಿ ನೀಡಿದ ರಬಕವಿ-ಬನಹಟ್ಟಿಯ ತಹಶೀಲ್ದಾರ ಸಂಜಯ ಇಂಗಳೆ ಅವರಿಗೆ ತಾಲೂಕು ಹೋರಾಟ ಸಮಿತಿಯಿಂದ ಮನವಿ ಸಲ್ಲಿಸಲಾಯಿತು.

ಮನವಿ ಸ್ವೀಕರಿಸಿದ ತಹಶೀಲ್ದಾರ ಸಂಜಯ ಇಂಗಳೆ ಮಾತನಾಡಿ ನೀವು ನೀಡಿದ ಮನವಿಯನ್ನು ಇಂದೇ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳಿಸುತ್ತೇವೆ. ಇಂದು ಕೆರೆಗಳ ಒತ್ತುವರಿ ಕುರಿತು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ವಿಶೇಷ ಸಭೆಯ ನಿಮಿತ್ಯ ಜಿಲ್ಲಾಧಿಕಾರಿಗಳು ತಾಲೂಕು ಹೋರಾಟ ವೇದಿಕೆಗೆ ಬರಲು ಸಾಧ್ಯವಾಗಿಲ್ಲ. ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಜಿಲ್ಲಾಧಿಕಾರಿಗಳು ಭೇಟಿ ನೀಡುವ ದಿನಾಂಕವನ್ನು ತಿಳಿಸಲಾಗುವುದು ಎಂದರು. ಡಿಸಿ ಅವರು ಬರುವ ದಿನಾಂಕವನ್ನು ಗುರುವಾರವೇ ತಿಳಿಸಬೇಕೆಂದು ಹೋರಾಟ ಸಮಿತಿ ಸದಸ್ಯರು ಒತ್ತಾಯಿಸಿದರು.

Advertisement

ಬಸನಗೌಡ ಪಾಟೀಲ, ಮಹಾಂತೇಶ ಹಿಟ್ಟಿನಮಠ, ಆರ್.ಟಿ.ಪಾಟೀಲ, ಯಲ್ಲನಗೌಡ ಪಾಟೀಲ, ಜಾವೇದ ಬಾಗವಾನ, ಬಸವರಾಜ ಹಿಟ್ಟಿನಮಠ, ಶ್ರೀಮಂತ ಹಳ್ಳಿ, ಸುರೇಶ ಮಡಿವಳರ, ಪಂಡಿತ ಪೂಜೇರಿ, ಬನಪ್ಪಗೌಡ ಪಾಟೀಲ, ಸಂಜು ಬಾರಕೋಲ, ಎಂ.ಎಸ್.ಕಂಬಿ, ಬಸವರಾಜ ರಾಯರ, ಮಲ್ಲಪ್ಪ ಸಿಂಗಾಡಿ, ಮಹಾಲಿಂಗಪ್ಪ ಜಕ್ಕನ್ನವರ, ಮನೋಹರ ಶಿರೋಳ, ಮಲ್ಲಪ್ಪ ಭಾವಿಕಟ್ಟಿ, ಈಶ್ವರ ಚಮಕೇರಿ, ಎಸ್.ಎಂ.ಪಾಟೀಲ, ಚನ್ನು ದೇಸಾಯಿ, ಪರಪ್ಪ ಸತ್ತಿಗೇರಿ, ಅಣ್ಣೇಶ ಉಳ್ಳಾಗಡ್ಡಿ, ರಾಜು ಭಾವಿಕಟ್ಟಿ, ಜಿ.ಎಸ್.ಬರಗಿ, ಅಲ್ಲಪ್ಪ ಗುಂಜಿಗಾಂವಿ, ಮುಸ್ತಕ ಚಿಕ್ಕೋಡಿ, ಪರಪ್ಪ ಹುದ್ದಾರ, ಮಹಾಲಿಂಗಪ್ಪ ಲಾತೂರ, ಮಹಾಲಿಂಗಪ್ಪ ಸನದಿ, ಗುರುಪಾದ ಅಂಬಿ, ಕರೆಪ್ಪ ಮೇಟಿ ಸೇರಿದಂತೆ ಮಹಾಲಿಂಗಪುರ ಹಾಗೂ ಸುತ್ತಮುತ್ತಲಿನ 12 ಗ್ರಾಮಗಳ ಹಿರಿಯರು, ವಿವಿಧ ಪಕ್ಷಗಳ ಮುಖಂಡರು, ಹಲವಾರು ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next