ಮಹಾಲಿಂಗಪುರ: ಹನುಮ ಜಯಂತಿಯ ನಿಮಿತ್ಯ ಕುಲಗೋಡ ಹನುಮಾನ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರು, ವಾಸ್ತವ್ಯವಿದ್ದ ಸಮೀರವಾಡಿ ಹವೇಲಿಯಿಂದ ಕುಲಗೋಡಕ್ಕೆ ಹೋಗುವ ಮಾರ್ಗ ಮಧ್ಯೆ ಮಹಾಲಿಂಗಪುರ ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಕಾರಿನಿಂದ ಕೆಳಗಿಳಿದು ಮಹಾಲಿಂಗಪುರ ತಾಲೂಕು ಹೋರಾಟಗಾರರಿಂದ ಮನವಿ ಸ್ವೀಕರಿಸಿದರು.
ಮನವಿ ಸಲ್ಲಿಸಿದ ಮಹಾಲಿಂಗಪುರ ತಾಲೂಕು ಹೋರಾಟ ಸಮಿತಿಯ ಸದಸ್ಯರು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ಒತ್ತಡ ತಂದು ಮಹಾಲಿಂಗಪುರ ತಾಲೂಕು ಆಗಲು ಸಹಕಾರ ನೀಡಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಈ ಕುರಿತು ಮುಖ್ಯಮಂತ್ರಿಗಳು ಮತ್ತು ಕಂದಾಯ ಸಚಿವರೊಂದಿಗೆ ಚರ್ಚಿಸಿ, ಮಹಾಲಿಂಗಪುರ ತಾಲೂಕು ಮಾಡಲು ಸಹಕಾರ ನೀಡುವದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಹಾಲಿಂಗಪುರ ತಾಲೂಕು ಹೋರಾಟ ಸಮಿತಿಯ ಮಹಾಲಿಂಗಪ್ಪ ಕೋಳಿಗುಡ್ಡ, ಚನಬಸು ಹುರಕಡ್ಲಿ, ಸಂಗಪ್ಪ ಹಲ್ಲಿ, ಹಣಮಂತ ಜಮಾದಾರ, ಆರ್.ಟಿ.ಪಾಟೀಲ, ನಾಗರಾಜ ಭಜಂತ್ರಿ, ಜಯರಾಮಶೆಟ್ಟಿ ಸೇರಿದಂತೆ ಹಲವರು ಇದ್ದರು.
**********************************************************************************
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭೇಟಿ ಮಾಡಿದ ನೇಕಾರ ಮುಖಂಡರು
ಮಹಾಲಿಂಗಪುರ: ಹನುಮ ಜಯಂತಿಯ ನಿಮಿತ್ಯವಾಗಿ ನೆರೆಯ ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಕುಲಗೋಡ ಹನುಮಾನ ದೇವಸ್ಥಾನಕ್ಕೆ ಭೇಟಿ ಹಾಗೂ ಪೂಜೆಯ ನಿಮಿತ್ಯ ಸಮೀಪದ ಸಮೀರವಾಡಿ ಗೋದಾವರಿ ಕಾರ್ಖಾನೆಯ ಹವೇಲಿಯಲ್ಲಿ ವಾಸ್ತವ್ಯವಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಮಹಾಲಿಂಗಪುರದ ನೇಕಾರ ಮುಖಂಡರು ಶನಿವಾರ ಮಧ್ಯಾಹ್ನ ಭೇಟಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ನೇಕಾರ ಪ್ರಕೋಷ್ಟ ರಾಜ್ಯ ಸಂಚಾಲಕ ಮನೋಹರ ಶಿರೋಳ ಅವರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರೊಂದಿಗೆ ಉಭಯ ಕುಶಲೋಪರಿ ವಿಚಾರಿಸಿ, ನೇಕಾರ ಸಮುದಾಯದ ಸಮಸ್ಯೆಗಳು ಹಾಗೂ ಬಿಜೆಪಿ ಪಕ್ಷದ ಸಂಘಟನೆಯ ಕುರಿತು ಚರ್ಚಿಸಿ, ಹನುಮ ಜಯಂತಿಯ ಶುಭಾಶಯಗಳನ್ನು ತಿಳಿಸಿದರು.
ತೇರದಾಳ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಶಿವಾನಂದ ಹುಣಶ್ಯಾಳ, ಭಾಜಪ ಮುಖಂಡ ವಿಜಯಕುಮಾರ ಸಬಕಾಳೆ, ಗೋದಾವರಿ ಕಾರ್ಖಾನೆಯ ಕಾರ್ಯನಿರ್ವಾಹಕ ಅಧಿಕಾರಿ ಬಾಲಚಂದ್ರ ಭಕ್ಷಿ, ಮಜದೂರ ಯೂನಿಯನ್ ಅಧ್ಯಕ್ಷ ಬಸವರಾಜ ಪೂಜೇರಿ, ವಿನೋದ ಚಂದನಶಿವ ಸೇರಿದಂತೆ ಹಲವರು ಇದ್ದರು.