Advertisement

ಡಬಲ್ ಸೆಂಚುರಿ ಬಾರಿಸಿದ ಮಹಾಲಿಂಗಪುರ ತಾಲೂಕು ಹೋರಾಟ

06:45 PM Oct 30, 2022 | Team Udayavani |

ಮಹಾಲಿಂಗಪುರ: ರವಿವಾರ ಮಹಾಲಿಂಗಪುರ ತಾಲೂಕು ಹೋರಾಟವು 200 ದಿನಗಳನ್ನು ಪೂರೈಸಿದ ಹಿನ್ನಲೆಯಲ್ಲಿ ತಾಲೂಕು ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಚನಬಸು ಹುರಕಡ್ಲಿಯವರು ತಮ್ಮ ಬಸವನಗರದ ಗುರು-ಹಿರಿಯರು, ಮಹಿಳೆಯರು, ಯುವಕರು ಸೇರಿದಂತೆ ನೂರಾರು ಜನರೊಂದಿಗೆ ಡಬಲ್ ಸೆಂಚೂರಿ ಹೋರಾಟದಲ್ಲಿ ಭಾಗವಹಿಸಿ ಅಭೂತಪೂರ್ವ ಬೆಂಬಲ ಸೂಚಿಸಿದರು.

Advertisement

ಅದ್ದೂರಿ ಪ್ರತಿಭಟನಾ ಮೆರವಣಿಗೆ :

200ನೇ ದಿನದ ತಾಲೂಕು ಹೋರಾಟದ ನಿಮಿತ್ತ ಪುರಸಭೆ ಸದಸ್ಯೆ ಸವಿತಾ ಹುರಕಡ್ಲಿ, ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಚನಬಸು ಹುರಕಡ್ಲಿ ಅವರ ನೇತೃತ್ವದಲ್ಲಿ ಬಸವನಗರ ಬಸವೇಶ್ವರ ಸಮುದಾಯ ಭವನದಿಂದ ಬಸವವೃತ್ತ, ಡಬಲ ರಸ್ತೆ, ವಿವೇಕ ವೃತ್ತ, ನಡಚೌಕಿ, ಜವಳಿ ಬಜಾರ, ಗಾಂಧಿವೃತ್ತ ಮಾರ್ಗವಾಗಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಶೀಘ್ರ ತಾಲೂಕು ಘೋಷಣೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಗೆ ವಿಶೇಷ ಮೆರಗು:

ಬಸವನಗರದಿಂದ ಹೋರಾಟ ವೇದಿಕೆವರೆಗೆ ನಡೆದ ಬೃಹತ್ ಪ್ರತಿಭಟನಾ ಜಾಥಾದಲ್ಲಿ ನಾಲ್ಕು ಕುದುರೆಗಳ ಮೇಲೆ ಛತ್ರಪತಿ ಶಿವಾಜಿ ಮಹಾರಾಜರು, ಕಿತ್ತೂರ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ವೇಷಭೂಷಣ ಧರಿಸಿ ಜಾಥಾದಲ್ಲಿ ಭಾಗವಹಿಸಿದ್ದರು.

Advertisement

ತೆರೆದ ಜೀಪ್‌ನಲ್ಲಿ ಅಂಬೇಡ್ಕರ್, ಗಾಂಧೀಜಿ, ಝಾನ್ಸಿರಾಣಿ ಲಕ್ಮೀ ಬಾಯಿ ಸೇರಿದಂತೆ ವಿವಿಧ ರಾಷ್ಟ್ರಪುರುಷರ ವೇಷದಲ್ಲಿ ಭಾಗವಹಿಸಿದ್ದ ಮಕ್ಕಳು ಗಮನ ಸೆಳೆದರು. ಹಾಸ್ಯ ಕಲಾವಿದ ರಾಜು ಗೆದ್ದೆಪ್ಪನವರ ತಲೆಗುಂಡು ಹೊಡೆಸಿಕೊಂಡು ಮಹಾತ್ಮ ಗಾಂಧಿ ವೇಷಧಲ್ಲಿ ಪ್ರತಿಭಟನೆಯ ಜಾಥಾ ಮತ್ತು ಹೋರಾಟ ವೇದಿಕೆಯಲ್ಲಿ ಸಂಜೆವರೆಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಜಾಥಾದಲ್ಲಿ ಭಾಗವಹಿಸಿದ್ದ ಹಲವರು ಗಾಂಧಿ ಛದ್ಮವೇಷಧಾರಿಗಳೊಂದಿಗೆ ಸೆಲ್ಪಿ ತೆಗೆದುಕೊಂಡು ಸಂಭ್ರಮಿಸಿದರು.

ಶೀಘ್ರ ತಾಲೂಕು ಘೋಷಣೆಗೆ ಒತ್ತಾಯ :

ತಾಲಕು ಹೋರಾಟ ವೇದಿಕೆ ಪ್ರಧಾನ ಕಾರ್ಯದರ್ಶಿ ಚನಬಸು ಹುರಕಡ್ಲಿ ಮಾತನಾಡಿ, ಮಹಾಲಿಂಗಪುರ ತಾಲೂಕು ಆಗಲು ಎಲ್ಲಾ ರೀತಿಯಲ್ಲಿಯೂ ಯೋಗ್ಯವಾದ ಪಟ್ಟಣವಾಗಿದೆ. ಹೋರಾಟವು ಈಗಾಗಲೇ 200 ದಿನಗಳನ್ನು ಪೂರೈಸಿರುವುದರಿಂದ ತೇರದಾಳ ಮತಕ್ಷೇತ್ರದ ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಿ ಶೀಘ್ರ ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕೆಂದು ಒತ್ತಾಯಿಸಿದರು.

ನೇಕಾರ ಮುಖಂಡ ಅಂಬಾದಾಸ ಕಾಮೂರ್ತಿ, ರನ್ನ ಬೆಳಗಲಿ ಗ್ರಾ.ಪಂ. ಮಾಜಿ ಅಧ್ಯಕ್ಷ ಸಿದ್ದುಗೌಡ ಪಾಟೀಲ, ರೈತ ಸಂಘದ ಗಂಗಾಧರ ಮೇಟಿ, ಸುಭಾಸ ಶಿರಬೂರ, ಬಂದು ಪಕಾಲಿ, ಆಮ ಆದ್ಮಿಯ ಅರ್ಜುನ ಹಲಗಿಗೌಡರ, ಹೋರಾಟ ವೇದಿಕೆ ಅಧ್ಯಕ್ಷ ಸಂಗಪ್ಪ ಹಲ್ಲಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಮೋರೆ, ಖಜಾಂಚಿಗಳಾದ ನಿಂಗಪ್ಪ ಬಾಳಿಕಾಯಿ, ಮಹಾದೇವ ಮೇಟಿ, ಮಹಿಳಾ ಸಂಘದ ಭಾರತಿ ಹಿಟ್ಟಿನಮಠ, ಕಾಂಗ್ರೆಸ್ ಮುಖಂಡ ಮಲ್ಲಪ್ಪ ಸಿಂಗಾಡಿ ಸೇರಿದಂತೆ ಹಲವರು ಮಾತನಾಡಿ 30 ವರ್ಷಗಳ ಬೇಡಿಕೆ ಹಾಗೂ ಎಲ್ಲಾ ರೀತಿಯಲ್ಲಿಯೂ ಯೋಗ್ಯವಾದ ಮಹಾಲಿಂಗಪುರ ಪಟ್ಟಣವನ್ನು ಅತಿ ಶೀಘ್ರದಲ್ಲೇ ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕೆಂದು ಜನಪ್ರತಿನಿಧಿಗಳು ಮತ್ತು ಸರ್ಕಾರಕ್ಕೆ ಆಗ್ರಹಿಸಿದರು.

200ನೇ ದಿನ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಹೋರಾಟದಲ್ಲಿ ಡಾ| ಅಜೀತ ಕನಕರಡ್ಡಿ, ಎಸ್.ಎಂ.ಪಾಟೀಲ, ಶಿವನಗೌಡ ಪಾಟೀಲ, ಭೀಮಪ್ಪ ಪೂಜೇರಿ, ಶ್ರೀಶೈಲಪ್ಪ ಬಾಡನವರ, ಡಾ. ಎಂ.ಬಿ.ಪೂಜೇರಿ, ಸಿದ್ದರಾಮ ಯರಗಟ್ಟಿ, ನ್ಯಾಯವಾದಿ ಎಂ.ಎಸ್.ಮನ್ನಯ್ಯನವರಮಠ, ಪ್ರಕಾಶ ಬಾಡನವರ, ಸಂಜು ಬಾರಕೋಲ, ವೆಂಕಣ್ಣ ಬಿರಾದರ, ಬಸವರಾಜ ಹುಲ್ಯಾಳ, ವಿಜಯ ಸಬಕಾಳೆ, ಆನಂದ ಬೆಳ್ಳಿಕಟ್ಟಿ, ಬಸವರಾಜ ಗಿರಿಸಾಗರ, ಶಿವರಾಜ್ ಕಡಬಲ್ಲವರ, ರವಿ ಗಿರಿಸಾಗರ, ಮಹಾಂತೇಶ ಪಾತ್ರೋಟ, ಹಣಮಂತ ಬಂಡಿವಡ್ಡರ, ಮಹಾಲಿಂಗ ಹುದ್ದಾರ, ಪುರಸಭೆ ಸದಸ್ಯೆ ಸವಿತಾ ಹುರಕಡ್ಲಿ, ಮಹಾನಂದಾ ಗುನಾರಿ, ಭಾರತಿ ಹಿಟ್ಟಿನಮಠ, ಅರುಣಾ ಹಣಗಂಡಿ, ರಾಜಶ್ರೀ ಗಿರಿಸಾಗರ, ಬಸವರಾಜ ಹುರಕಡ್ಲಿ, ತಾಲುಕಾ ಹೋರಾಟ ಸಮಿತಿಯ ಪರಪ್ಪ ಸತ್ತಿಗೇರಿ, ಸಿದ್ದು ಶಿರೋಳ, ಮಾರುತಿ ಕರೋಶಿ, ಮನೋಹರ ಶಿರೋಳ, ಸುರೇಶ ಮಡಿವಾಳರ, ರಪೀಕ್ ಮಾಲದಾರ, ವಿರೇಶ ನ್ಯಾಮಗೌಡ, ಭೀಮಸಿ ಕೌಜಲಗಿ ಸೇರಿದಂತೆ ನೂರಾರು ಜನರು 200ನೇ ದಿನದ ತಾಲುಕಾ ಹೋರಾಟದಲ್ಲಿ ಭಾಗವಹಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next