ಮಹಾಲಿಂಗಪುರ : ಸೋಮವಾರ ಮುಂಜಾನೆಯಿಂದ ರಾತ್ರಿ 9 ವರೆಗೆ ಸಮೀರವಾಡಿ ದರ ನಿಗದಿ ಸಭೆಯಲ್ಲಿ ಸುಮಾರು 5-6 ಸಾವಿರ ರೈತರು ಭಾಗವಹಿಸಿದ್ದರು.
ಸೋಮವಾರ ರಾತ್ರಿ 9ವರೆಗೆ ಸಭೆ ನಡೆದರೂ ದರ ಘೋಷಣೆಯಾಗದ ಹಿನ್ನಲೆಯಲ್ಲಿ ಉದ್ರಿಕ್ತ ಹೋರಾಟಗಾರು ಸಮೀರವಾಡಿ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಸದಸ್ಯರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಈ ಗಲಾಟೆಯಲ್ಲಿ ಅವರನ್ನು ರಕ್ಷೀಸಲು ಹೋದ ಬನಹಟ್ಟಿ ಸಿಪಿಐ ಐ.ಎಂ.ಮಠಪತಿ ಹಾಗೂ ಜಮಖಂಡಿ ಗ್ರಾಮೀಣ ಠಾಣಾಧಿಕಾರಿ ಬಿರಾದರ್ ಮೇಡಂ ಅವರಿಗೆ ಕಲ್ಲು ಬಡಿದು ಸಣ್ಣಪುಟ್ಟ ಗಾಯಗಳಾಗಿವೆ. ಗಲಾಟೆಯಲ್ಲಿ 3-4 ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿವೆ.
ರಾತ್ರಿ 9ಕ್ಕೆ ಗಲಾಟೆ ಪ್ರಾರಂಭವಾಗುತ್ತಿದ್ದಂತೆ ಪರಿಸ್ಥಿತಿ ವಿಕೋಪಕ್ಕೆ ಹೋಗಬಾರದು ಎಂದು ಎಚ್ಚೆತ್ತ ಕಾರ್ಖಾನೆಯವರು 2900 ದರ ಘೋಷಿಸಿ, ಮತ್ತಷ್ಟು ಆಗಬಹುದಾದ ಅನಾಹುತ ವನ್ನು ತಪ್ಪಿಸಿದ್ದಾರೆ.
Related Articles
ಬನಹಟ್ಟಿ ಸಿಪಿಐ ಐ.ಎಂ.ಮಠಪತಿ, ಜಮಖಂಡಿ ಗ್ರಾಮೀಣ ಠಾಣಾಧಿಕಾರಿ ಬಿರಾದಾರ ಅವರು ಮಹಾಲಿಂಗಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ :ಟಿ20 ವಿಶ್ವಕಪ್ ಕ್ರಿಕೆಟ್: ಪ್ರತಿಯೊಬ್ಬರ ನಿರೀಕ್ಷೆ… ಭಾರತ-ಪಾಕ್ ಫೈನಲ್!