Advertisement

ಅಂತರ್ ಜಿಲ್ಲಾ ಟ್ರಾಕ್ಟರ್ ಟ್ರೇಲರ್ ಕಳ್ಳರ ಬಂಧನ

01:18 PM Oct 10, 2021 | Team Udayavani |

ಮಹಾಲಿಂಗಪುರ: ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಮುಧೋಳ, ಜಮಖಂಡಿ ಗ್ರಾಮೀಣ, ಸಾವಳಗಿ ಹಾಗೂ ಬಬಲೇಶ್ವರ ಠಾಣೆಗಳ ವ್ಯಾಪ್ತಿಯಲ್ಲಿ ಕಳ್ಳತನಮಾಡುತ್ತಿದ್ದ ಇಬ್ಬರು ಹಾಗೂ ಟ್ರೇಲರ್ ಹಾಗೂ ಟ್ಯಾಂಕರ್‌ಗಳನ್ನು ಸ್ವೀಕರಿಸುತ್ತಿದ್ದ ನಾಲ್ವರು ಜನರು ಸೇರಿ 6 ಜನ ಅಂತರ್ ಜಿಲ್ಲಾ ಟ್ರಾಕ್ಟರ್ ಟ್ರೇಲರ್ ಕಳ್ಳರನ್ನು ಬಂಧಿಸುವಲ್ಲಿ ಶನಿವಾರ ಮಹಾಲಿಂಗಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಕಳೆದ 6-8 ತಿಂಗಳಿನಿಂದ ಜಿಲ್ಲೆಯ ಸಾವಳಗಿ ಮತ್ತು ಜಮಖಂಡಿ ಭಾಗಗಳಲ್ಲಿ ಟ್ರಾಕ್ಟರ್ ಟ್ರೇಲರ್ ಕಳ್ಳತನವಾಗುತ್ತಿದ್ದ ಪ್ರಕರಣಗಳು ಜಮಖಂಡಿ ಗ್ರಾಮೀಣ ಹಾಗೂ ಸಾವಳಗಿ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು.

ಬಾಗಲಕೋಟೆ ಎಸ್‌ಪಿ ಲೊಕೇಶ ಜಗಲಾಸರ, ಜಮಖಂಡಿ ಡಿವೈಎಸ್‌ಪಿ ಎಂ.ಪಾಂಡುರಂಗಯ್ಯ, ರಬಕವಿ-ಬನಹಟ್ಟಿ ಸಿಪಿಆಯ್ ಜೆ.ಕರುಣೇಶಗೌಡ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಸ್ಥಳೀಯ ಎಸೈ ವಿಜಯ ಕಾಂಬಳೆ ಅವರು ಸಿಬ್ಬಂದಿಯೊಂದಿಗೆ ಕಾರ್ಯಚರಣೆ ನಡೆಸಿ, ಪಟ್ಟಣದಲ್ಲಿ ಟ್ರೇಲರ್‌ಗಳನ್ನು ಸಾಗಿಸುತ್ತಿದ್ದ ವೇಳೆ ಇಬ್ಬರು ವ್ಯಕ್ತಿಗಳನ್ನು ಹಾಗೂ ಟ್ರೇಲರ್ ಮತ್ತು ಟ್ರಾಕ್ಟರ್ ವಶಪಡಿಸಿಕೊಂಡು ವಿಚಾರಣೆ ನಡೆಸಿ, ಇವರಿಂದ ಕಳುವಾದ ಟ್ರಾಕ್ಟರ್ ಮತ್ತು ಟ್ರೇಲರ್ ಹಾಘು ಟ್ಯಾಂಕರ್ ಖರೀದಿಸಿದ್ದ ಮದನಮಟ್ಟಿ ಗ್ರಾಮದ ಮೂವರು ಹಾಗೂ ಬಾಗಲಕೋಟೆಯ ಒಬ್ಬ ವ್ಯಕ್ತಿಯನ್ನು ಬಂಧಿಸಿ, ಬಂಧಿತರಿಂದ ಒಟ್ಟು 10 ಟ್ರೇಲರ್, ಒಂದು ಟ್ರಾಕ್ಟರ್, ಒಂದು ಟ್ಯಾಂಕರ್ ಸೇರಿದಂತೆ ಸುಮಾರು 25 ಲಕ್ಷ ಕಿಮ್ಮತ್ತಿನ ಟ್ರಾಕ್ಟರ್ ಟ್ರೇಲರ್ ಹಾಗೂ ಟ್ಯಾಂಕರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಅಂತರ್ ಜಿಲ್ಲಾ ಟ್ರಾಕ್ಟರ್ ಟ್ರೇಲರ್ ಕಳ್ಳರ ಬಂಧನ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಯಶಸ್ವಿಯಾದ ಠಾಣಾಧಿಕಾರಿ ವಿಜಯ ಕಾಂಬಳೆ, ಅಪರಾಧ ವಿಭಾಗದ ಎಸೈ ಎಸ್.ಎಸ್.ಘಾಟಗೆ, ಪ್ರೋಬೇಸನರಿ ಎಸೈ ಅಶೋಕ ನಾಯಕ, ಎಎಸ್‌ಆಯ್ ಎಲ್.ಕೆ.ಅಗಸರ್, ಎಸ್.ಬಿ.ಹಿರೇಕುರುಬರ, ಸಿಬ್ಬಂದಿಯಾದ  ಜೆ.ಜಿ.ಪಾಟೀಲ, ಎಲ್.ವ್ಹಿ.ಹುಕುಮನವರ, ಬಿ.ಜಿ.ದೇಸಾಯಿ, ಬಿ.ಪಿ.ಹಡಪದ, ಎಸ್.ಡಿ.ಬಾರಿಗಿಡದ, ಎಂ.ಎಸ್.ಕನಶೇಟ್ಟಿ, ಎಂ.ಆರ್.ಬೇವೂರ, ಎಂ.ಎಸ್.ಲಮಾಣಿ, ಆರ್.ಆರ್.ಕಾಂಬಳೆ, ಎಸ್.ಎಸ್.ಔರಸಂಗ, ಐ.ಆರ್.ಪಣಿಬಂದ, ಎಸ್.ಎಸ್.ನಾಗನಗೌಡರ, ಎಸ್.ಎಸ್.ಧರಿಗೋಣ, ಜಿ.ಎಸ್.ಒಡೆಯರ, ಎಂ.ಎಸ್.ಸಣ್ಣಕ್ಕಿ, ಎಸ್.ಎಸ್.ಪೂಜಾರಿ, ಆರ್.ಆರ್.ಆಲಗೂರ, ಎಂ.ಎನ್.ಕಾಗವಾಡ, ಎಸ್.ಎನ್.ನಾವಿ, ಎಸ್.ಎಂ.ದಾಸರ, ಆರ್.ಎಚ್.ಬರಗಿ, ಎ.ಎಸ್.ಪಾಟೀಲ್ ಎಂ.ಆರ್.ಜೈನರ್, ವೈ.ವೈ ಗಚ್ಚಣ್ಣವರ, ಎನ್.ಆಯ್.ಖಲೇಖಾನ, ಅವರನ್ನು ಬಾಗಲಕೋಟೆ ಜಿಲ್ಲಾ ಎಸ್‌ಪಿ ಲೋಕೇಶ ಜಗಲಾಸರ ಅಭಿನಂದಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next