Advertisement

ಮಹಾಲಿಂಗಪುರ ಬಂದ್ ಯಶಸ್ವಿ : 126 ದಿನದ ತಾಲೂಕು ಹೋರಾಟಕ್ಕೆ ಅಭೂತಪೂರ್ವ ಬೆಂಬಲ

03:09 PM Aug 17, 2022 | Team Udayavani |

ಮಹಾಲಿಂಗಪುರ : ಪಟ್ಟಣವನ್ನು ತಾಲೂಕು ಕೇಂದ್ರ ಮಾಡಬೇಕೆಂದು ಒತ್ತಾಯಿಸಿ ಸಾಮೂಹಿಕ ನಾಯಕತ್ವದಡಿ ಬುಧವಾರ ಹಮ್ಮಿಕೊಂಡಿದ್ದ ಮಹಾಲಿಂಗಪುರ ಬಂದ್ ಯಶಸ್ವಿಯಾಗಿದೆ.

Advertisement

ಬುಧವಾರ ಮುಂಜಾನೆ 10 ಗಂಟೆಗೆ ಪಟ್ಟಣದ ಬಸವವೃತ್ತದಲ್ಲಿ ತಾಲೂಕು ಹೋರಾಟ ಸಮೀತಿ ಸದಸ್ಯರು ಹಾಗೂ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಮುಖಂಡರು, ಹೋರಾಟಗಾರರು,ರೈತರು ಭಾಗವಹಿಸಿ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಮಹಾಲಿಂಗಪುರ ಬಂದ್ ಹೋರಾಟದ ಬೃಹತ್ ಮೇರವಣಿಗೆಗೆ ಚಾಲನೆ ನೀಡಲಾಯಿತು.

ನಂತರ ಡಬಲ್ ರಸ್ತೆ, ವಿವೇಕ ವೃತ್ತ, ನಡಚೌಕಿ, ಜವಳಿ ಬಜಾರ, ಗಾಂಧಿ ವೃತ್ತ ಮಾರ್ಗವಾಗಿ ಚನ್ನಮ್ಮ ವೃತ್ತದಲ್ಲಿನ ತಾಲೂಕು ಹೋರಾಟದ ವೇದಿಕೆವರೆಗೆ ಬೃಹತ್ ಮೇರವಣಿಗೆ ನಡೆಸಲಾಯಿತು.

ಸಂಗಾನಟ್ಟಿಯ ಹಲಗೆಮೇಳ, ಮಹಾಲಿಂಗಪುರದ ಡೊಳ್ಳಿನ ಕಲಾವಿದರು ಪ್ರತಿಭಟನಾ ಮೇರವಣಿಗೆಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದರು. ಮಹಾಲಿಂಗಪುರ ಬಂದ್ ನಿಮಿತ್ಯ ಪಟ್ಟಣದಲ್ಲಿನ ಎಲ್ಲಾ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಬೆಂಬಲ ಸೂಚಿಸಿದರು.

ಬಸ್ ಸಂಚಾರ ಸಂಪೂರ್ಣ ಬಂದ್ : ಮುಂಜಾಗ್ರತಾ ಕ್ರಮವಾಗಿ ಮಹಾಲಿಂಗಪುರ ಬಂದ್ ಹಿನ್ನೆಲೆಯಲ್ಲಿ ಬಸ್ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿತ್ತು. ಬೃಹತ್ ಮೆರವಣಿಗೆಯಲ್ಲಿ ಭಾಗವಹಿಸಿದ್ದ ವಿವಿಧ ಗ್ರಾಮಗಳ ಮುಖಂಡರು, ವಿವಿಧ ಪಕ್ಷಗಳ ಮುಖಂಡರು ಭಾಗವಹಿಸಿ ಇದು ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ನಡೆಯುತ್ತಿರುವ ಹೋರಾಟವಾಗಿದೆ. ಸರಕಾರ ಈ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿ ಆದಷ್ಟು ಬೇಗ ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕೆಂದು ಒತ್ತಾಯಿಸಿದರು. ತಾಲೂಕು ಹೋರಾಟದ 126 ನೇ ದಿನದ ಹೋರಾಟದ ನಿಮಿತ್ಯ ಹಮ್ಮಿಕೊಂಡ ಮಹಾಲಿಂಗಪುರ ಬಂದ್ ಪ್ರತಿಭಟನೆಯಲ್ಲಿ ಪಕ್ಷಾತೀತವಾಗಿ ಎಲ್ಲಾ ಪಕ್ಷಗಳ ಮುಖಂಡರು, ವಿವಿಧ ಗ್ರಾಮಗಳ ಮುಖಂಡರು, ಹೋರಾಟಗಾರರು, ಕಲಾವಿದರು, ರೈತ ಸಂಘಟನೆಗಳ ಮುಖಂಡರು ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು.

Advertisement

ಕಾಂಗ್ರೆಸ್ ಸದಸ್ಯರ ರಾಜೀನಾಮೆ : ಮಹಾಲಿಂಗಪುರ ತಾಲೂಕು ರಚನೆಗೆ ಆಗ್ರಹಿಸಿ ಪಟ್ಟಣದ ಪುರಸಭೆಯ ಕಾಂಗ್ರೆಸ್ ನ 9, ಬಿಜೆಪಿಯ 3 ಬಂಡಾಯ ಸದಸ್ಯರು ಸೇರಿ 12 ಸದಸ್ಯರು ರಾಜೀನಾಮೆ ಘೋಷಿಸಿ, ತಾಲೂಕು ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಈ ಮೂಲಕ 126 ದಿನದ ತಾಲೂಕು ಹೋರಾಟದ ಬಂದ್ ಪ್ರತಿಭಟನೆಯು ತಾಲೂಕು ಹೋರಾಟದ ಸ್ವರೂಪ ಬದಲಾವಣೆಯ ಮುನ್ಸೂಚನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next