Advertisement

ಮಹಾಘಟಬಂಧನ್‌ ಸ್ವಾರ್ಥರ ಕೂಟ

07:26 AM Feb 22, 2019 | Team Udayavani |

ಮೈಸೂರು: ನರೇಂದ್ರ ಮೋದಿ ಮತ್ತೂಮ್ಮೆ ಪ್ರಧಾನಮಂತ್ರಿ ಆಗದಂತೆ ತಡೆಯಲು ರಚಿಸಿಕೊಂಡಿರುವ ಮಹಾಘಟಬಂಧನ್‌ ಸ್ವಾರ್ಥರ ಕೂಟ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾದ ಸಂಸದ ಅವಿನಾಶ್‌ ರಾಯ್‌ ಖನ್ನಾ ಜರಿದರು. ನಗರದಲ್ಲಿ ಗುರುವಾರ ಬಿಜೆಪಿ ಆಯೋಜಿಸಿದ್ದ ಪ್ರಣಾಳಿಕೆಗಾಗಿ ಪ್ರಬುದ್ಧರೊಡನೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ತತ್ವ ಸಿದ್ಧಾಂತವಿಲ್ಲ:ಮಹಾ ಘಟಬಂಧನ್‌ನಲ್ಲಿ ಇರುವವರೆಲ್ಲರೂ ತಮ್ಮ ಸ್ವಾರ್ಥಕ್ಕಾಗಿ ಕಾಂಗ್ರೆಸ್‌ನಿಂದ ಸಿಡಿದು ಬಂದವರು. ಯಾವ ತತ್ವ -ಸಿದ್ಧಾಂತ, ನೀತಿ ಇಲ್ಲದವರು. ಮಹಾಘಟಬಂಧನ್‌ ಅಧಿಕಾರಕ್ಕೆ ಬಂದರೆ ದಿನಕ್ಕೊಬ್ಬರು ಪ್ರಧಾನಿಯಾದರೂ ಆಶ್ಚರ್ಯವಿಲ್ಲ.

ಅಧಿಕಾರಕ್ಕಾಗಿ ಒಂದಾಗಿರುವ ಇಂತಹ ಸ್ವಾರ್ಥರು ಅಧಿಕಾರಕ್ಕೆ ಬಂದರೆ, ಅದರ ಪರಿಣಾಮವನ್ನು ಭಾರತ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಜಗತ್ತಿನಲ್ಲಿ ಭಾರತ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಲು ಪ್ರಧಾನಿ ನರೇಂದ್ರಮೋದಿ ನಾಯಕತ್ವವೇ ಕಾರಣ. ಅವರು ಮುಂದಿನ ಐದು ವರ್ಷ ಪ್ರಧಾನಿಯಾಗಿ ಇರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ಹಗರಣ ರಹಿತ ಆಡಳಿತ: ಐದು ವರ್ಷಗಳ ಕಾಲ ಭ್ರಷ್ಟಚಾರ ಮುಕ್ತ ಆಡಳಿತ ನೀಡಿರುವ ಮೋದಿ ಸರ್ಕಾರ ಜಾರಿಗೆ ತಂದ ಹಲವಾರು ಯೋಜನೆಗಳು ನೇರವಾಗಿ ಫ‌ಲಾನುಭವಿಗಳಿಗೆ ತಲುಪಿವೆ. ನಾನು ಲಂಚ ತಿನ್ನಲ್ಲ, ತಿನ್ನುವುದಕ್ಕೂ ಬಿಡುವುದಿಲ್ಲ ಎಂಬ ಮಾತಿನಂತೆ ಸಣ್ಣ ಹಗರಣವೂ ಇಲ್ಲದೇ ಆಡಳಿತ ನೀಡಿದ್ದಾರೆ.

ಯಾವುದೇ ಮಧ್ಯವರ್ತಿಗಳಿಗೂ ಪಾಲು ಸಿಗದಂತೆ, ಸುಮಾರು 35 ಸಾವಿರ ಕೋಟಿ ಅನುದಾನ ನೇರವಾಗಿ ಫ‌ಲಾನುಭವಿಗಳ ಖಾತೆಗೆ ಜಮೆಯಾಗುತ್ತಿದೆ ಎಂದರು. ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರತಿ ನಿತ್ಯಒಂದಲ್ಲಾ ಒಂದು ಹಗರಣ ಬಯಲಾಗುತ್ತಿತ್ತು. ಆದರೆ , ನರೇಂದ್ರಮೋದಿ ಆಡಳಿತದಲ್ಲಿ ದಿನಕ್ಕೊಂದು ಯೋಜನೆ ಜಾರಿಗೆ ಬಂದಿದೆ. 

Advertisement

ಸಮರ್ಥ ನಾಯಕತ್ವ: ಉಜ್ವಲ್‌, ಜನಧನ ಯೋಜನೆ ಸೇರಿದಂತೆ ರೈಲ್ವೆ, ರಾಷ್ಟ್ರೀಯ ಹೆದ್ದಾರಿ, ವಿಮಾನ ನಿಲ್ದಾಣಗಳ ವಿಸ್ತರಣೆ, ಅಭಿವೃದ್ಧಿಯಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಜಗತ್ತಿನಲ್ಲಿ ಇಂದು ಭಾರತ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಲು ಪ್ರಧಾನಿ ನರೇಂದ್ರ ಮೋದಿ ಸಮರ್ಥ ನಾಯಕತ್ವವೇ ಕಾರಣ ಎಂದು ಹೇಳಿದರು.

11 ಕೋಟಿ ಸದಸ್ಯತ್ವ ಹೊಂದಿರುವ ಜಗತ್ತಿನ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಬಿಜೆಪಿ ಗುರುತಿಸಿಕೊಂಡಿದೆ. ಬೂತ್‌ ಮಟ್ಟದಲ್ಲಿ ಐದು ಕೋಟಿ ಸಕ್ರಿಯ ಕಾರ್ಯಕರ್ತರನ್ನು ಹೊಂದಿದೆ. ಬೂತ್‌ಮಟ್ಟದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮೋದಿ ಸರ್ಕಾರದ ಕಾರ್ಯಕ್ರಮಗಳ ಕುರಿತು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next