Advertisement

ಕೊಲ್ಹಾರದಲ್ಲಿ ಮಹಾಗಣಪತಿ ಭವ್ಯ ಮೆರವಣಿಗೆ

04:14 PM Sep 11, 2022 | Shwetha M |

ಕೊಲ್ಹಾರ: ಪ್ರತಿ ವರ್ಷದಂತೆ ಈ ವರ್ಷವೂ ಪಟ್ಟಣದ ಹಿಂದೂ ಮಹಾ ಗಣಪತಿ, ವಿಷ್ಣು ಸೇನಾ ಸಮಿತಿಯವರು 11 ದಿನ ಪ್ರತಿಷ್ಠಾಪಿಸಿದ್ದ ಮಹಾ ಗಣಪತಿಯ ಮಂಗಲ ಮೂರ್ತಿಯ ಮೆರವಣಿಗೆ ಶನಿವಾರ ವಿಜೃಂಭಣೆಯಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ವಿಸರ್ಜಿಸಲಾಯಿತು.

Advertisement

ಭವ್ಯ ಮೆರವಣಿಗೆಯಲ್ಲಿ ಭಾರತ ಮಾತೆ ಮತ್ತು ನಟ ದಿ| ವಿಷ್ಣುರ್ವಧನ ಅವರ ಭಾವಚಿತ್ರ ಹಾಗೂ ಗಜಾನನ ಪ್ರತಿರೂಪನಾದ ಆಲಕನೂರಿನ ಆನೆ, ರನ್ನ ಬೆಳಗಲಿಯ ಜಾಂಜ್‌ ನೃತ್ಯ, ಆಲಮೇಲದ ರೈತನ ಪ್ರತಿರೂಪದ ಸ್ತಬ್ಧ ಚಿತ್ರಗಳು, ಹುಬ್ಬಳ್ಳಿಯ ಸ್ವರ್ಣ ಮಯೂರಿ ತಂಡದ ಗೊಂಬೆಗಳು, ಚಿಕ್ಕಮಂಗಳೂರಿನ ಲಿಂಗದಹಳ್ಳಿಯ ಭದ್ರಕಾಳಿ ನೃತ್ಯ, ವೀರಗಾಸೆ, ನಂದಿಕೋಲು ಕುಣಿತ, ಅಥಣಿ ತಾಲೂಕಿನ ಬ್ಯಾಂಜೋ ಸೆಟ್‌ ಹಾಗೂ ಮದ್ದುಗಳಿಂದ ಕೂಡಿದ ಭವ್ಯ ಮೆರವಣಿಗೆ ಅತ್ಯಂತ ಆಕರ್ಷಣೀಯವಾಗಿತ್ತು. ಮೆರವಣಿಗೆಯನ್ನು ಅವಳಿ ಜಿಲ್ಲೆಯ ಸಾವಿರಾರು ಜನತೆ ರಸ್ತೆಯ ಎರಡು ಬದಿಗಳಲ್ಲಿ ನಿಂತು ಕಣ್ತುಂಬಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next