Advertisement

ಗಾಂಜಾದಿಂದ ಚಾಕಲೇಟ್ ತಯಾರಿಸಿ ಮಾರುತ್ತಿದ್ದ ಒಡಿಶಾ ಮೂಲದ ಇಬ್ಬರ ಬಂಧನ, ಸೊತ್ತು ವಶ

02:09 PM Mar 04, 2022 | Team Udayavani |

ಮಹದೇವಪುರ: ಬಹಳ ಅಪಾಯಕಾರಿ ಗಾಂಜಾ ಚಾಕಲೇಟ್‍ಗಳನ್ನು ಮಾರಾಟ ಮಾಡುತ್ತಿದ್ದ ಓಡಿಶಾ ಮೂಲದ ಇಬ್ಬರು ಯುವಕರನ್ನು ಬಂಧಿಸುವಲ್ಲಿ ಮಹದೇವಪುರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಗಿರೀಶ್ ತಿಳಿಸಿದ್ದಾರೆ.

Advertisement

ಓಡಿಶಾ ಮೂಲದ ಪ್ರದೀಪ್ ಕುಮಾರ್ (33) ಹಾಗೂ  ಎಸ್.ಕೆ. ಸಜಾನ್ (27) ಬಂಧಿತ ಆರೋಪಿಗಳು.

ಸುದ್ದಿಗಾರರೊಂದಿಗೆ ಮಾತನಾಡಿದ ಅಧಿಕಾರಿಗಳು ಗಾಂಜಾ ಮತ್ತು ಗಾಂಜಾ ಚಾಕಲೇಟ್‍ಗಳನ್ನು ಓಡಿಶಾ ರಾಜ್ಯದಿಂದ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ಅವರ ಬಳಿ ಇದ್ದ 1 ಕೆ.ಜಿ ಗಾಂಜಾ ಮತ್ತು 18 ಕೆ.ಜಿ ತೂಕದ 3200 ಗಾಂಜಾ ಚಾಕ್ಲೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ಆರೋಪಿಗಳು ಓಡಿಶಾ ರಾಜ್ಯದಿಂದ ರೈಲಿನಲ್ಲಿ ಅಕ್ರಮವಾಗಿ ತಂದು ನಾರಾಯಣಪುರ, ಲೌರಿ ಸ್ಕೂಲ್ , ರಿಂಗ್ ರೋಡ್ ಮಹದೇವಪುರ ಪ್ಲೇಓವರ್ ಕೆಳಗಡೆ ಅಕ್ರಮವಾಗಿ ಮಾರುತ್ತಿದ್ದರು ಅಲ್ಲದೆ ಬೆಂಗಳೂರಿನ ಜಿಗಣಿ, ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತಲಿನ ಪಾನ್‌ಶಾಪ್ ಅಂಗಡಿಗಳಿಗೆ ಸರಬರಾಜು ಮಾಡುತ್ತಿದ್ದರು ಎನ್ನಲಾಗಿದೆ.

Advertisement

ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಆರೋಪಿಗಳು ನಿಜ ಬಾಯಿ ಬಿಟ್ಟಿದ್ದಾರೆ… ವೆಲ್ಡಿಂಗ್ ಶಾಪ್ ನಲ್ಲಿ ಕೆಲಸ ಮಾಡ್ತಿದ್ದ ಅರೋಪಿಗಳ ಪೈಕಿ ಓರ್ವನ ಸಹೋದರ ಜಿಗಣಿಯಲ್ಲಿ ಪಾನ್ ಶಾಪ್ ಇಟ್ಟಿದ್ದ, ಪಾನ್ ಶಾಪ್ ಮೂಲಕ ಚಾಕಲೇಟ್ ಮಾರಾಟ ಮಾಡ್ತಿದ್ದ ಅರೋಪಿಗಳು, ಚಾರ್ಮಿನಾರ್ ಗೋಲ್ಡ್ ಎಂಬ ಹೆಸರಿನಲ್ಲಿ ಚಾಕಲೇಟ್ ತಯಾರಿಸಿ ಅಂಗಡಿಯಲ್ಲಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ:ಉಕ್ರೇನ್ ಸಂಕಷ್ಟ :ಕೊನೆಗೂ ‘ಮಲಿಬು’ವಿನೊಂದಿಗೆ ಭಾರತಕ್ಕೆ ಬಂದ ರಿಷಬ್

ಪ್ರಕರಣದಲ್ಲಿ ಶಾಂತಮಲ್ಲಪ್ಪ, ಎ.ಸಿ.ಪಿ , ವೈಟ್ ಫೀಲ್ಡ್ ಉಪ – ವಿಭಾಗ, ಬೆಂಗಳೂರು ನಗರ, ಮತ್ತು ಮಹದೇವಪುರ ಪೊಲೀಸ್ ಠಾಣೆಯ  ಹೆಚ್.ಹರಿಯಪ್ಪ, ಪೊಲೀಸ್ ಇನ್ಸ್ಪೆಕ್ಟರ್‌ ಹಾಗೂ ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌, ವಿನೋದ್ ಕುಮಾರ್.ಬಿ, ಸಿಬ್ಬಂದಿಗಳಾದ ಚಂದ್ರಪ್ಪ, ಹೆಚ್.ಸಿ .10766, ಬಾಸ್ಕರ ಕಂಬಾರ, ಹೆಚ್‌ಸಿ  ರವಿ.ಕೆ.ಎಲ್  ಸುರೇಶ್.ಹೆಚ್ . ಹೆಚ್.ಸಿ.  ರವಿ ದಾಸ್ಯಳ, ಪಿಸಿ ರವಿ.ವೈ.ವಿ, ಪಿಸಿ .  ಯತೀಶ್.ಎನ್.ಎಂ ರವರ ಕಾರ್ಯವನ್ನು ಶ್ಲಾಗಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next