Advertisement
ಜ್ಯೋತಿ ಯಾತ್ರೆ ಚಾಮರಾಜನಗರ, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಸಂಚರಿಸಿ ತ್ರಿವೇಣಿ ಸಂಗಮ ಸೇರಲಿದೆ.
Related Articles
Advertisement
10ರ ಬೆಳಗ್ಗೆ ಶ್ರೀ ಮಹದೇಶ್ವರ ದೇಗುಲ ಭೀಮ ಕೊಲ್ಲಿಯಿಂದ ಹೆಗ್ಗಡೆ ದೇವನಕೋಟೆ-ಅಂತರಸಂತಿ-ಬೇಲದ ಕುಪ್ಪೆ ಮಾರ್ಗವಾಗಿ ಸಂಚರಿಸಿ ಗದ್ದಿಗೆ ಶ್ರೀ ಕೆಂಡಗಣೇಶ್ವರ ದೇಗುಲದಲ್ಲಿ ವಾಸ್ತವ್ಯ ಹೂಡಲಿದೆ. 11ರ ಬೆಳಗ್ಗೆ ಗದ್ದಿಗೆ ಶ್ರೀ ಕೆಂಡಗಣೇಶ್ವರ ದೇಗುಲದಿಂದ ಹುಣಸೂರು-ಬೆಟ್ಟದಪುರ ಮಾರ್ಗವಾಗಿ ಮಹಾದೇಶ್ವರ ದೇಗುಲ ಪಿರಿಯಾಪಟ್ಟಣದಲ್ಲಿ ವಾಸ್ತವ್ಯ ಹೂಡಲಿದೆ.
12ರ ಬೆಳಗ್ಗೆ ಪಿರಿಯಾಪಟ್ಟಣದಿಂದ ಶಿವ ದೇವಸ್ಥಾನ-ಪಿರಿಯಾಪಟ್ಟಣ-ಹುಣಸೂರು-ತಿಪ್ಪೂರು-ಸಾಲಿಗ್ರಾಮ-ಕೆ.ಆರ್.ನಗರ-ಎಡತೊರೆ- ಅರ್ಕೇಶ್ವರ ದೇವಸ್ಥಾನ- ಆಲಂಬಾಡಿ ಕಾವಲು- ಅಕ್ಕಿ ಹೆಬ್ಟಾಳು ಮಾರ್ಗವಾಗಿ ಕೆ.ಆರ್.ಪೇಟೆಯಲ್ಲಿ ವಾಸ್ತವ್ಯ ಹೂಡಲಿದೆ. 13ರ ಬೆಳಗ್ಗೆ ಕೆ.ಆರ್.ಪೇಟೆಯಿಂದ ಮತ್ತಿಘಟ್ಟ-ವಿಠಲಾಪುರ -ಸೋಮನಹಳ್ಳಿ -ಪುರ- ಅಂಬಿಗರಹಳ್ಳಿ ಮಾರ್ಗವಾಗಿ ಸಂಚರಿಸಿ ತ್ರಿವೇಣಿ ಸಂಗಮಕ್ಕೆ ಆಗಮಿಸಲಿದೆ.
3ನೇ ವಾಹನ: 6ರ ಬೆಳಗ್ಗೆ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿ ಜ್ಯೋತಿ ಯಾತ್ರೆ ಹನೂರು- ಕೊಳ್ಳೇಗಾಲ -ಮರಡಿಗುಡ್ಡ (ವಿಶೇಷ ಪೂಜೆ) ಬನ್ನೂರು- ಬೆಳವಾಡಿ -ಪಾಲಳ್ಳಿ ಬೆಳಗೋಳ- ಕೆಆರ್‌ಎಸ್ ಕನ್ನಂಬಾಡಿ- ವೇಣುಗೋಪಾಲಸ್ವಾಮಿ ಡಿಂಕಾ ಬಲ್ಲೇನಹಳ್ಳಿ ಮಾರ್ಗವಾಗಿ ಸಂಚರಿಸಿ ಕಲ್ಲಹಳ್ಳಿ ಭೂ ವರಾಹನಾಥಸ್ವಾಮಿ ದೇವಸ್ಥಾನದಲ್ಲಿ ವಾಸ್ತವ್ಯ ಹೂಡಲಿದೆ.
7ರ ಬೆಳಗ್ಗೆ ಕಲ್ಲಹಳ್ಳಿ ಭೂವರಾಹನಾಥಸ್ವಾಮಿ ದೇವಸ್ಥಾನದಿಂದ ಬಲ್ಲೇನಹಳ್ಳಿ ಗ್ರಾಪಂನ ಗ್ರಾಮಗಳು- ಭೂಕನಕೆರೆ ಗ್ರಾಪಂ ಗ್ರಾಮಗಳು-ತೆಂಡೆಕೆರೆ-ಶೀಳನೆರೆ ಮಾರ್ಗವಾಗಿ ಸಂಚರಿಸಿ ಶೀಳನೆರೆಯಲ್ಲಿ ವಾಸ್ತವ್ಯ ಹೂಡಲಿದೆ. 8ರ ಬೆಳಗ್ಗೆ ಶೀಳನೆರೆಯಿಂದ ಸಿಂಧಘಟ್ಟ- ಹರಳಹಳ್ಳಿ -ಚೌಡೇನಹಳ್ಳಿ -ಮಾಕಾವಳ್ಳಿ ಬಂಡಿಹೊಳೆ ಮಾರ್ಗವಾಗಿ ಸಂಚರಿಸಿ ಬಂಡಿಹೊಳೆಯಲ್ಲಿ ವಾಸ್ತವ್ಯ ಹೂಡಲಿದೆ.
9ರಂದು ಬಂಡಿಹೊಳೆಯಿಂದ ಹರಿಹರಪುರ- ಮಡುವಿನಕೋಡಿ -ಬಳ್ಳೇಕೆರೆ- ಐಚನಹಳ್ಳಿ ಮಾರ್ಗವಾಗಿ ಸಂಚರಿಸಿ ಗಂಜಿಗೆರೆಯಲ್ಲಿ ವಾಸ್ತವ್ಯ ಹೂಡಲಿದೆ.
ತ್ರಿವೇಣಿ ಸಂಗಮ: 10ರ ಬೆಳಗ್ಗೆ ಗಂಜಿಗೆರೆ ಭಾರತೀಪುರ ಕ್ರಾಸ್-ಅಘಲಯ- ಸಂತೆ ಬಾಚನಹಳ್ಳಿ -ರಂಗನಾಥಪುರ ಕ್ರಾಸ್-ಸಾರಂಗಿ ಮಾರ್ಗವಾಗಿ ಸಂಚರಿಸಿ ಆಗ್ರಹಾರ ಬಾಚಹಳ್ಳಿದಲ್ಲಿ ವಾಸ್ತವ್ಯ ಹೂಡಲಿದೆ. 11ರ ಬೆಳಗ್ಗೆ ಆಗ್ರಹಾರ ಬಾಚಹಳ್ಳಿಯಿಂದ ಕಿಕ್ಕೇರಿ -ಲಕ್ಷ್ಮೀಪುರ- ಆನೆಗೋಳ- ಮಾದಾಪುರ-ದಬ್ಬೆಘಟ್ಟ ಮಾರ್ಗವಾಗಿ ಸಂಚರಿಸಿ ಐಕನಹಳ್ಳಿಯಲ್ಲಿ ವಾಸ್ತವ್ಯ ಹೂಡಲಿದೆ.
12ರ ಬೆಳಗ್ಗೆ ಹೈಕನಹಳ್ಳಿಯಿಂದ ಬೀರುವಳ್ಳಿ- ಹಿರಿಕಳಲೆ -ಮಂದಗೆರೆ ಮಾರ್ಗವಾಗಿ ಸಂಚರಿಸಿ ಕೆ.ಆರ್.ಪೇಟೆಯಲ್ಲಿ ವಾಸ್ತವ್ಯ ಹೂಡಲಿದೆ.
13ರ ಬೆಳಗ್ಗೆ ಕೆ.ಆರ್.ಪೇಟೆ ಟೌನ್ ಮಾರ್ಗವಾಗಿ ಸಂಚರಿಸಿ ತ್ರಿವೇಣಿ ಸಂಗಮ ತಲುಪಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
2ನೇ ವಾಹನ ಸಂಚಾರ
ಅ.6ರಂದು ಶ್ರೀ ಮಲೆ ಮಹದೇಶ್ವರ ಬೆಟ್ಟದಿಂದ ಕೊಳ್ಳೇಗಾಲ -ಹನೂರು -ಬಿ.ಜಿ.ಪುರ- ಮಾರ್ಗ ವಾಗಿ ಸಂಚರಿಸಿ ಬಿ.ಜಿ.ಪುರ ಮಂಟೇ ಸ್ವಾಮಿ ಕ್ಷೇತ್ರದ ದೇಗುಲದಲ್ಲಿ ವಾಸ್ತವ್ಯ ಹೂಡಲಿದೆ.
7ರ ಬೆಳಗ್ಗೆ ಬಿ.ಜಿ.ಪುರ ಮಂಟೇಸ್ವಾಮಿ ಪುಣ್ಯ ಕ್ಷೇತ್ರದಿಂದ ಹಲಗೂರು ಮಳವಳ್ಳಿ- ಕಸಬಾ 1, 2 ಮತ್ತು 3 -ಕಿರಗಾವಲು 1, 2 ಮತ್ತು 3 ಕೆ.ಎಂ.ದೊಡ್ಡಿ ಮಾರ್ಗವಾಗಿ ಸಂಚರಿಸಿ ಕೆ.ಎಂ.ದೊಡ್ಡಿ ಹನುಮಂತನಗರ ಆತ್ಮಲಿಂಗೇಶ್ವರ ದೇಗುಲದಲ್ಲಿ ವಾಸ್ತವ್ಯ ಹೂಡಲಿದೆ.
8ರ ಬೆಳಗ್ಗೆ ಕೆ.ಎಂ.ದೊಡ್ಡಿ ಹನುಮಂತನಗರ ಆತ್ಮಲಿಂಗೇಶ್ವರ ದೇಗುಲದಿಂದ ಆತಗೂರು -ಕೆಸ್ತೂರು -ಬೆಸಗರಹಳ್ಳಿ -ಕೊಪ್ಪ- ಬಿದರಕೋಟೆ – ಮಾರಗೌಡನಹಳ್ಳಿ ಮಾರ್ಗವಾಗಿ ಸಂಚರಿಸಿ ಕೆರಗೋಡು ಪಂಚಲಿಂಗೇಶ್ವರ ದೇಗುಲದಲ್ಲಿ ವಾಸ್ತವ್ಯ ಹೂಡಲಿದೆ.
9ರ ಬೆಳಗ್ಗೆ ಕೆರಗೋಡು ಶ್ರೀ ಪಂಚಲಿಂಗೇಶ್ವರ ದೇಗುಲದಿಂದ ಕೀಲಾರ- ಹನಕೆರೆ- ಮಂಡ್ಯ ಹುಲಿವಾನ -ಜೀಗುಂಡಿ ಪಟ್ಟಣ -ದುದ್ದ -ಶಿವಳ್ಳಿ ಚಂದಗಾವಲು -ಹೊಳಲು -ಯಲಿಯೂರು -ತೂಬಿನಕೆರೆ ಮಾರ್ಗವಾಗಿ ಸಂಚರಿಸಿ ಕೊತ್ತತ್ತಿಯಲ್ಲಿ ವಾಸ್ತವ್ಯ ಹೂಡಲಿದೆ.
ಚುಂಚನಗಿರಿಯಲ್ಲಿ ವಾಸ್ತವ್ಯ: 10ರ ಬೆಳಗ್ಗೆ ಅರಕೆರೆ 1, 2 ಮಹದೇವಪುರ -ಮಂಡ್ಯ ಕೊಪ್ಪಲು- ಶ್ರೀರಂಗಪಟ್ಟಣ ಶೆಟ್ಟಳ್ಳಿ 1 ಮತ್ತು 2 ದರಸಗುಪ್ಪೆ- ಉಕ್ಕುಡ- ಕ್ಯಾತನಹಳ್ಳಿ- ಅರಳಕುಪ್ಪೆ -ಹರವು- ಕಟ್ಟೆರಿ -ಗಾಮನಹಳ್ಳಿ -ಚಿನಕುರಳಿ ಬೆಟ್ಟಹಳ್ಳಿ -ಪಾಂಡವಪುರ- ಬೆಳ್ಳಾಳೆ- ಇಂಗಳಗುಪ್ಪೆ ಕೆರೆತೊನ್ನೂರು -ಟಿ.ಎಸ್.ಛತ್ರ -ಜಕ್ಕನಹಳ್ಳಿ ಮಾರ್ಗವಾಗಿ ಸಂಚರಿಸಿ ಮೇಲುಕೋಟೆಯಲ್ಲಿ ವಾಸ್ತವ್ಯ ಹೂಡಲಿದೆ.
11ರ ಬೆಳಗ್ಗೆ ಮೇಲುಕೋಟೆಯಿಂದ ಹೊಣಕೆರೆ- ದೇವಲಾಪುರ -ನಾಗಮಂಗಲ -ಬೆಳ್ಳೂರು ಮಾರ್ಗವಾಗಿ ಸಂಚರಿಸಿ ಚುಂಚನಗಿರಿಯಲ್ಲಿ ವಾಸ್ತವ್ಯ ಹೂಡಲಿದೆ. 12ರ ಬೆಳಗ್ಗೆ ಚುಂಚನಗಿರಿಯಿಂದ ಬಿಂಡಿಗನವಿಲೆ- ಕಂಬದಹಳ್ಳಿ -ಸಂತೇಬಾಚನಹಳ್ಳಿ ಮಾರ್ಗವಾಗಿ ಸಂಚರಿಸಿ ಕೆ.ಆರ್.ಪೇಟೆಯಲ್ಲಿ ವಾಸ್ತವ್ಯ ಹೂಡಲಿದೆ. 13ರ ಬೆಳಗ್ಗೆ ಕೆ.ಆರ್.ಪೇಟೆಯಿಂದ ಮತ್ತಿಘಟ್ಟ -ವಿಠಲಾಪುರ -ಸೋಮನಹಳ್ಳಿ- ಪುರ ಅಂಬಿಗರ ಹಳ್ಳಿ ಮಾರ್ಗವಾಗಿ ಸಂಚರಿಸಿ ತ್ರಿವೇಣಿ ಸಂಗಮ(ಆಗಮನ) ವಾಸ್ತವ್ಯ ಹೂಡಲಿದೆ.