Advertisement

ಮಹದಾಯಿ: ಸಂಧಾನಕ್ಕಿಳಿದ ಬಿಎಸ್‌ವೈ

08:50 AM Aug 06, 2017 | Harsha Rao |

ಬೆಂಗಳೂರು: ರಾಜಕೀಯವಾಗಿ ಬಿಜೆಪಿ ಪಾಲಿಗೆ ಬಿಸಿ ತುಪ್ಪವಾಗಿರುವ ಮಹದಾಯಿ ವಿವಾದಕ್ಕೆ ವಿಧಾನಸಭೆ ಚುನಾವಣೆ ಮುನ್ನ ಹೇಗಾದರೂ ಮಾಡಿ ತೇಪೆ ಹಚ್ಚಲು ಬಿಜೆಪಿ ಪ್ರಯತ್ನಿಸುತ್ತಿದ್ದು, ಇದಕ್ಕಾಗಿ ಗೋವಾ ಮುಖ್ಯಮಂತ್ರಿ ಮನವೊಲಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರೇ ಕಣಕ್ಕಿಳಿಯಲು ತೀರ್ಮಾನಿಸಿದ್ದಾರೆ.

Advertisement

ಮುಂಬರುವ ವಿಧಾನಸಭೆ ಚುನಾವಣೆ ವೇಳೆಗೆ ಮಹದಾಯಿ ವಿವಾದ ಬಗೆಹರಿಯದಿದ್ದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಅದು ದೊಡ್ಡ ಹೊಡೆತ ನೀಡಲಿದೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ತಮ್ಮ ನೇತೃತ್ವದಲ್ಲೇ ಗೋವಾ ಮುಖ್ಯಮಂತ್ರಿ ಮನೋಹರ್‌ ಪರ್ರಿಕರ್‌ಬಳಿ ನಿಯೋಗ ಕರೆದೊಯ್ಯಲು ತೀರ್ಮಾನಿಸಿದ್ದಾರೆ.

ಅರಮನೆ ಮೈದಾನದಲ್ಲಿ ಶನಿವಾರ ನಡೆದ ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಸೆಪ್ಟೆಂಬರ್‌ ಕೊನೆಯ ಅಥವಾ ಅಕ್ಟೋಬರ್‌ ಮೊದಲ ವಾರ ರೈತ ನಾಯಕರು, ಶಾಸಕರು, ಸಂಸದರನ್ನು ಗೋವಾಕ್ಕೆ ಕರೆದೊಯ್ದು ಮನೋಹರ್‌ ಪರ್ರಿಕರ್‌ ಅವರನ್ನು ಭೇಟಿ ಮಾಡಿ ವಿವಾದ ಬಗೆಹರಿಸುವ ಕುರಿತು ಮಾತುಕತೆ ನಡೆಸಲಾಗುವುದು ಎಂದರು. ಮಹದಾಯಿ ವಿಚಾರ ಸಮಸ್ಯೆ ತಂದೊಡ್ಡಿದೆ. ಇದು ಕುಡಿಯುವ ನೀರಿನ ಯೋಜನೆ ಮತ್ತು ಉತ್ತರ ಕರ್ನಾಟಕದ ಕೆಲವು ಭಾಗಗಳಿಗೆ ಅನಿವಾರ್ಯವಾಗಿರುವುದನ್ನು ಪರ್ರಿಕರ್‌ಅವರಿಗೆ ಮನವರಿಕೆ ಮಾಡಿಕೊಟ್ಟು ಮಾತುಕತೆ ಮೂಲಕ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಗೋವಾ ಉದಟಛಿಟತನ: ಕಳಸಾ-ಬಂಡೂರಿ ನಾಲಾ ಯೋಜನೆಗೆ 7.5 ಟಿಎಂಸಿ ನೀರು ಹರಿಸುವಂತೆ ಮಧ್ಯಂತರ ಆದೇಶ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮಧ್ಯಂತರ ಮನವಿಯನ್ನು ನ್ಯಾಯಾಧಿಕರಣ ತಿರಸ್ಕರಿಸಿದ ಬಳಿಕ ಕಳೆದ ಒಂದು ವರ್ಷದಿಂದ ಮಾತುಕತೆ ಮೂಲಕ ವಿವಾದ ಬಗೆಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಿದ ಪ್ರಯತ್ನಗಳೆಲ್ಲವೂ ಗೋವಾ ಹಠಮಾರಿತನದಿಂದಾಗಿ ಫ‌ಲ ನೀಡಿರಲಿಲ್ಲ. ಅಲ್ಲದೆ, ಇತ್ತೀಚೆಗೆ ಸಿಎಂ ಸಿದ್ದರಾಮಯ್ಯನವರು ಗೋವಾ ಸಿಎಂ ಮನೋಹರ್‌ ಪರಿಕ್ಕರ್‌ರಿಗೆ ಬರೆದಿದ್ದ ಪತ್ರಕ್ಕೆ ಅಲ್ಲಿನ ಜಲ ಸಂಪನ್ಮೂಲ ಸಚಿವರಿಂದ ಕೀಳು ಮಟ್ಟದ ಉತ್ತರ ಕೊಡಿಸಿ ಗೋವಾ ಉದಟಛಿಟತನ ಪ್ರದರ್ಶಿಸಿತ್ತು.

ಇದರಿಂದ ಮುಜುಗರಕ್ಕೀಡಾದ ಬಿಜೆಪಿಯು ಗೋವಾದಲ್ಲಿ ಬಿಜೆಪಿ ಅಧಿಕಾರದಲ್ಲಿರು ವುದನ್ನು ಬಳಸಿಕೊಂಡು ವಿವಾದ ಬಗೆಹರಿಸುವ ಪ್ರಯತ್ನ ಮಾಡದಿದ್ದರೆ, ಅದು ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಪಕ್ಷದ ಮೇಲೆ ನಕಾರಾತ್ಮಕ
ಪರಿಣಾಮ ಬೀರುವ ಆತಂಕ ಉಂಟಾಗಿತ್ತು. ಇನ್ನೊಂದೆಡೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ ವರಿಷ್ಠರು, ಅದಕ್ಕೆ ಬೇಕಾದ ವೇದಿಕೆಯನ್ನು ನೀವೇ ಸೃಷ್ಟಿಸಿಕೊಳ್ಳಬೇಕು, ಈ ವಿಚಾರದಲ್ಲಿ ನಾವು
ಮಧ್ಯಪ್ರವೇಶಿಸುವುದಿಲ್ಲ ಎಂಬ ಸೂಚನೆಯನ್ನೂ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳಲು ಗೋವಾ ಮುಖ್ಯಮಂತ್ರಿಗಳ ಮನವೊಲಿಸುವ ಕಾರ್ಯಕ್ಕೆ ಸ್ವತಃ ಯಡಿಯೂರಪ್ಪ ಅವರೇ ಇಳಿದಿದ್ದಾರೆ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next