Advertisement

ಮಹಾದಾಯಿ ಹರಿವು ಸರಾಗ : ಗೋವಾದ ಅರ್ಜಿ ವಜಾಗೊಳಿಸಿದ ಸು.ಕೋ.

10:16 AM Mar 04, 2020 | sudhir |

ಹೊಸದಿಲ್ಲಿ: ಕಳಸಾ- ಬಂಡೂರಿ ಯೋಜನೆ ಜಾರಿಗೆ ತಡೆಯಾಜ್ಞೆ ಕೋರಿ ಗೋವಾ ಸರಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಳ್ಳಿಹಾಕಿದೆ. ಇದರಿಂದ ಯೋಜನೆ ಜಾರಿ ಬಗ್ಗೆ ಇದ್ದ ಎಲ್ಲ ಅಡೆತಡೆಗಳೂ ನಿವಾರಣೆ ಯಾದಂತಾಗಿವೆ.

Advertisement

ಸರ್ವೋಚ್ಚ ನ್ಯಾಯಾಲಯದ ಈ ತೀರ್ಪಿನಿಂದಾಗಿ 2018ರ ಆ. 14ರಂದು ಮಹಾದಾಯಿ ನೀರು ವಿವಾದ ನ್ಯಾಯಮಂಡಳಿ (ಎಂಡಬುÉ  éಡಿಟಿ) ನೀಡಿದ್ದ ಆದೇಶದಂತೆ ಕರ್ನಾಟಕವು ಗೋವಾದಲ್ಲಿ ಹರಿಯುವ ಮಹಾದಾಯಿ ನದಿಯಿಂದ 13.42 ಟಿಎಂಸಿ ನೀರನ್ನು ಕಳಸಾ- ಬಂಡೂರಿ ನಾಲೆಯ ಮೂಲಕ ಮಲಪ್ರಭಾ ನದಿಗೆ ಹರಿಸಿಕೊಳ್ಳಬಹುದಾಗಿದೆ.

ಗೋವಾದಿಂದ ಸತತ ಅಡ್ಡಗಾಲು
2014ರ ಎ. 17ರಂದು ಮಧ್ಯಾಂತರ ಆದೇಶ ನೀಡಿದ್ದ ಸರ್ವೋಚ್ಚ ನ್ಯಾಯಾಲಯವು ಮಹಾದಾಯಿ ನದಿಯಿಂದ 1.7 ಟಿಎಂಸಿ ನೀರನ್ನು ತನ್ನ ಕಡೆಗೆ ತಿರುಗಿಸಿಕೊಳ್ಳಲು ಕರ್ನಾಟಕಕ್ಕೆ ಅನುಮತಿ ನೀಡಿತ್ತು. ಆದರೆ ಅದಕ್ಕೆ ಗೋವಾ ಸತತವಾಗಿ ಅಡ್ಡಗಾಲು ಹಾಕುತ್ತಾ ಬಂದಿತ್ತು.

ಇತ್ತೀಚೆಗೆ ಗೋವಾದ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ದಿಲ್ಲಿಯಲ್ಲಿ ಜಾಬ್ಡೇಕರ್‌ರನ್ನು ಭೇಟಿಯಾಗಿ ಮಹಾದಾಯಿ ನೀರಿನಲ್ಲಿ ಕರ್ನಾಟಕಕ್ಕೆ ಪಾಲು ನೀಡದ ಬಗ್ಗೆ ಮನವಿ ಕೊಟ್ಟಿದ್ದರು. ಆದರೆ ಅದ್ಯಾವ ಕ್ರಮಗಳೂ ಫ‌ಲ ನೀಡದ್ದರಿಂದ ಅಂತಿಮವಾಗಿ ಅವರು ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next