ಪಣಜಿ: ಮಹದಾಯಿಯನ್ನು ಉಳಿಸಲು ಸರ್ಕಾರವು ತನ್ನ ಜವಾಬ್ದಾರಿಯನ್ನು ಸರಿಯಾದ ರೀತಿಯಲ್ಲಿ ಅರಿತಿದೆ. ಹಾಗಾಗಿಯೇ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸರ್ಕಾರ ಸುಪ್ರೀಂ ಕೋರ್ಟ್ ಆಗಿರಲಿ ಅಥವಾ ಕೇಂದ್ರ ಸರ್ಕಾರದ ಬಳಿಯೇ ಆಗಿರಲಿ ಗೋವಾದ ನಿಲುವನ್ನು ಸರಿಯಾದ ರೀತಿಯಲ್ಲಿ ಮಂಡಿಸುತ್ತಿದೆ. ಮಹಾದಾಯಿ ವಿಚಾರದಲ್ಲಿ ಎಲ್ಲ ಪಕ್ಷಗಳೂ ಒಗ್ಗೂಡಿಸುವಂತೆ ಕರೆ ನೀಡಿದ್ದರೂ ಅದನ್ನು ನಿರ್ಲಕ್ಷಿಸಿ ಮಹಾದಾಯಿ ವಿಚಾರದಲ್ಲಿ ರಾಜಕೀಯ ಮಾಡಲು ಪ್ರತಿಪಕ್ಷಗಳು ಬಯಸುತ್ತಿದ್ದಾರೆ. ಗೋವಾದ ವಿರ್ಡಿಯಲ್ಲಿ ನಡೆದ ಮಹದಾಯಿ ಬಚಾವ್ ಸಭೆಗೆ ಅಲ್ಪ ಸ್ಪಂದನೆ ದೊರೆತಿದೆ ಎಂದು ಶಾಸಕ ಪ್ರೇಮೇಂದ್ರ ಶೇಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪಣಜಿಯ ಬಿಜೆಪಿ ಕಛೇರಿಯಲ್ಲಿ ಕರೆದ ಸುದ್ಧಿಗೋಷ್ಠಿಯಲ್ಲಿ ಶಾಸಕ ಪ್ರೇಮೇಂದ್ರ ಶೇಟ್, ಅಡ್ವಕೇಟ್ ಯತೀಶ್ ನಾಯ್ಕ್, ಗಿರಿರಾಜ್ ಪೈ ವರ್ಣೇಕರ ಉಪಸ್ಥಿತರಿದ್ದರು. ಅಡ್ವ. ಯತೀಶ್ ನಾಯಕ್ ಮಾತನಾಡಿ- ಮುಖ್ಯಮಂತ್ರಿ ಸಾವಂತ್ ಅವರು ಭಾನುವಾರ ಸಂಜೆ ರಾಜ್ಯ ಸರ್ಕಾರವು ಮಹದಾಯಿ ಉಳಿಸಲು ಮಾಡುತ್ತಿರುವ ಪ್ರಯತ್ನಗಳ ಬಗ್ಗೆ ಸಾರ್ವಜನಿಕರಿಗೆ ಎಲ್ಲಾ ಮಾಹಿತಿಯನ್ನು ನೀಡಿದ್ದಾರೆ. ಮಹದಾಯಿ ಸಮಸ್ಯೆ ಬಗೆಹರಿಸಲು ಬಿಜೆಪಿ ಸಂಕಲ್ಪ ಮಾಡಿದೆ, ಅದಕ್ಕಾಗಿಯೇ ಸರ್ಕಾರ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಕರ್ನಾಟಕ ಸರಕಾರ ನೀಡಿರುವ ಕಳಸಾ-ಭಂಡೂರ ಯೋಜನೆಯ ಪರಿಷ್ಕೃತ ಡಿಪಿಆರ್ ಗೆ ಕೇಂದ್ರ ಜಲ ನ್ಯಾಯಮಂಡಳಿ ಅನುಮೋದನೆ ನೀಡಿದ್ದರೂ ಸರಕಾರ ಅದನ್ನು ಹಿಂಪಡೆಯಬೇಕು ಎಂದು ಈಗಾಗಲೇ ಕೇಂದ್ರದ ಬಳಿ ಮನವಿ ಮಾಡಲಾಗಿದೆ ಎಂಬ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಅಡ್ವಕೇಟ್ ಯತೀಶ್ ನಾಯಕ ಮಾತನಾಡಿ- ಅದರ ಹೊರತಾಗಿ ಕೇಂದ್ರ ಅರಣ್ಯ ಕಾಯಿದೆ ಪ್ರಕಾರ ಕರ್ನಾಟಕ ಸರ್ಕಾರ ಯಾವುದೇ ಕೆಲಸ ಮಾಡುವಂತಿಲ್ಲ. ಇದಲ್ಲದೇ ಅಡ್ವೊಕೇಟ್ ಜನರಲ್ ದೇವಿದಾಸ್ ಪಾಂಗಮ ಅವರು ಕಳಸಾ-ಭಂಡೂರ ಯೋಜನೆಯ ಪ್ರಸ್ತುತ ಸ್ಥಿತಿಗತಿಯನ್ನು ಸಾರ್ವಜನಿಕರಿಗೆ ತಿಳಿಸಿದ್ದಾರೆ ಎಂಬ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗಿರಿರಾಜ್ ಪೈ ವೆರ್ಣೇಕರ್ ಮಾತನಾಡಿ- ಗೋವಾ ರಾಜ್ಯದಲ್ಲಿ 2005ರಿಂದ 2012ರವರೆಗೆ ಕಾಂಗ್ರೆಸ್ ಸರಕಾರವಿತ್ತು. ಹೀಗಿರುವಾಗ ಗೋವಾ ಫೊರ್‍ವರ್ಡ ಪಕ್ಷದ ವಿಜಯ್ ಸರ್ದೇಸಾಯಿಯವರು ಮಹದಾಯಿ ನೀರು ಕರ್ನಾಟಕಕ್ಕೆ ಹರಿಸುತ್ತಿರುವುದನ್ನು ಕಾಂಗ್ರೆಸ್ ಸರ್ಕಾರಕ್ಕೆ ಏಕೆ ಪ್ರಶ್ನಿಸಲಿಲ್ಲ.. ಅಥವಾ ಅದರ ವಿರುದ್ಧ ಧ್ವನಿ ಎತ್ತಲಿಲ್ಲ? ಎಂದು ಪ್ರಶ್ನೆ ಕೇಳಿದರು. ವಿಧಾನಸಭಾ ಚುನಾವಣೆಯ ಸೋಲಿನಿಂದ ಸರ್ದೇಸಾಯಿ ಕಂಗಾಲಾಗಿದ್ದಾರೆ ಎಂದು ಠೀಕಾ ಪ್ರಹಾರ ನಡೆಸಿದರು.
Related Articles
ಇದನ್ನೂ ಓದಿ: ಮೊದಲ ಪತ್ನಿ ಇರುವಾಗಲೇ ಪಾಕ್ ಮಹಿಳೆಯೊಂದಿಗೆ ಎರಡನೇ ಮದುವೆಯಾದ ದಾವೂದ್ ಇಬ್ರಾಹಿಂ