Advertisement

ಮಹದಾಯಿ: ಕಾನೂನು ಚೌಕಟ್ಟು ಮೀರಿಲ್ಲ​​​​​​​

06:00 AM Jul 26, 2018 | |

ಬೆಂಗಳೂರು: ಮಹದಾಯಿ ನದಿ ನೀರಿನ ವಿವಾದದಲ್ಲಿ ಕರ್ನಾಟಕ ಕಾನೂನು ಚೌಕಟ್ಟು ಮೀರಿಲ್ಲ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. 

Advertisement

ಕರ್ನಾಟಕ ಸುರಂಗ ಮಾರ್ಗದ ಮೂಲಕ ಮಹದಾಯಿ ನೀರನ್ನು ಮಲಪ್ರಭಾ ನದಿಗೆ ಹರಿಸಿದೆ ಎಂಬುದಾಗಿ ಗೋವಾ ಸರ್ಕಾರ ಮಾಡಿರುವ ಆರೋಪವನ್ನು ತಳ್ಳಿ ಹಾಕಿರುವ ಅವರು, ಮಹದಾಯಿ ಲೀಕೇಜ್‌ ಬಗ್ಗೆ ಫೋಟೋ ಸಹಿತ ದಾಖಲೆಗಳನ್ನು ನ್ಯಾಯಾಧಿಕರಣಕ್ಕೆ ನೀಡಲಾಗಿದೆ. ನಾವು ಎಲ್ಲಿಯೂ ನೀರನ್ನು ಬಳಕೆ ಮಾಡಿಕೊಳ್ಳುತ್ತಿಲ್ಲವೆಂದು ಸ್ಪಷ್ಟಪಡಿಸಿದರು.

ಗೋವಾ ಅತ್ಯಂತ ಸಣ್ಣ ರಾಜ್ಯವಾಗಿದ್ದು, ಅವರೊಂದಿಗೆ ಜಗಳ ಅಥವಾ ಯುದ್ಧ ಮಾಡಲು ನಾವು ಸಿದಟಛಿರಿಲ್ಲ. ಆಗಸ್ಟ್‌ ಅಂತ್ಯದೊಳಗೆ ನ್ಯಾಯಾಧಿಕರಣದ ತೀರ್ಪು ಬರುವ ಸಾಧ್ಯತೆಯಿದೆ. ಗೋವಾ ಸರ್ಕಾರ ಸಮುದ್ರಕ್ಕೆ ಹೋಗುವ ನೀರನ್ನು ಬಳಸಿಕೊಳ್ಳಲಿ. ಅದಕ್ಕೆ ನಮ್ಮ ತಕರಾರಿಲ್ಲ. ಕರ್ನಾಟಕಕ್ಕೆ ನ್ಯಾಯಯುತವಾಗಿ ಎಷ್ಟು ನೀರು ಸಿಗಬೇಕೋ ಅಷ್ಟು ಸಿಗಬೇಕು ಎನ್ನುವುದು ನಮ್ಮ ಬೇಡಿಕೆ. ಉತ್ತರ ಕರ್ನಾಟಕ ಭಾಗದ ಜನರಿಗೆ ನೀರು ಸಿಗಬೇಕು. ಅದಕ್ಕೆ ನೀರು ಕೊಡಿ ಎಂದು ಕೇಳುತ್ತಿದ್ದೇವೆ. ಗೋವಾ ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ನಡೆಸಲಿ ಎಂದರು.

ಮಹದಾಯಿ ವಿಷಯದಲ್ಲಿ ರಾಜ್ಯಕ್ಕೆ ನ್ಯಾಯ ಸಿಗಲಿದ್ದು, ಆತ್ಮವಿಶ್ವಾಸದಿಂದ ಇರುವಂತೆ ರಾಜ್ಯದ ಪರ ವಕೀಲರು ಹೇಳಿದ್ದಾರೆ.
ಅದಕ್ಕಾಗಿ ನಾವು ಕಾಯುತ್ತಿದ್ದೇವೆ. ನಾನೂ ಮಹದಾಯಿ ಸ್ಥಳ ಪರಿಶೀಲನೆಗೆ ಹೊರಟಿದ್ದೆ. ಸ್ಥಳಕ್ಕೆ ಭೇಟಿ ನೀಡಿದರೆ ಅಪಾರ್ಥವಾಗುತ್ತದೆ ಎಂಬ ಕಾರಣಕ್ಕೆ ಧಾರವಾಡದಿಂದ ವಾಪಸ್‌ ಬಂದೆ ಎಂದು ಹೇಳಿದರು.

ರಾಹುಲ್‌ ಪ್ರಧಾನಿಯಾಗಬೇಕು: ದೇಶದ ಹಿತದೃಷ್ಟಿಯಿಂದ ಗಾಂಧಿ ಕುಟುಂಬ ತ್ಯಾಗ ಮಾಡಿಕೊಂಡು ಬಂದಿದೆ. ರಾಹುಲ್‌ ಗಾಂಧಿಯೇ ಮುಂದಿನ ಪ್ರಧಾನಿಯಾಗಬೇಕೆಂದು ಕಾಂಗ್ರೆಸ್‌ ಪಕ್ಷದ ತೀರ್ಮಾನವಾಗಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಎಲ್ಲರೂ ಒಗ್ಗೂಡಬೇಕು ಎಂದು ಅವರು ಹೇಳಿದರು.

Advertisement

ಆತ್ಮಹತ್ಯೆ ನಿಲ್ಲಲಿ: ರಾಜ್ಯ ಸರ್ಕಾರ ಸಂಕಷ್ಟದಲ್ಲಿರುವ ರೈತರ ನೆರವಿಗಾಗಿ ಸಾಲ ಮನ್ನಾ ಮಾಡಿದೆ. ವೈಯಕ್ತಿಕ ಕಾರಣವೇ ಇರಲಿ, ಸಾಲವೇ ಇರಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು. ಸಾಲ ಮನ್ನಾ ವಿಚಾರದಲ್ಲಿ ಅನುಮಾನಗಳನ್ನು ಬಗೆಹರಿಸಲು ಬ್ಯಾಂಕರ್‌ಗಳೊಂದಿಗೆ ಸಭೆ ನಡೆಸಲಾಗಿದೆ. ಈ ವಿಷಯದಲ್ಲಿ ಸರ್ಕಾರ ಸುಮ್ಮನೆ ಕುಳಿತಿಲ್ಲ ಎಂದರಲ್ಲದೆ, ರೈತರು ಯಾವುದೇ ಸಮಸ್ಯೆಯಿಂದ ಮೃತಪಟ್ಟರೂ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next