ಪಣಜಿ : ಮಹದಾಯಿ ನದಿ ನೀರು ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ರಾಜ್ಯ ಸರ್ಕಾರವು ವಿಶೇಷ ವಿಭಾಗವನ್ನು ಸ್ಥಾಪನೆ ಮಾಡಿದೆ. ರಾಜ್ಯ ಜಲಸಂಪನ್ಮೂಲ ಇಲಾಖೆಯ ಇಂಜಿನಿಯರ್ ಇದೀಗ ಮಹದಾಯಿ ವಿಶೇಷ ವಿಭಾಗದ ಕಾರ್ಯಕಾರಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.
ಇದನ್ನೂ ಓದಿ : ಭಕ್ತಾರ ಗಮನಕ್ಕೆ:ಧರ್ಮಸ್ಥಳ,ಕಟೀಲು,ಕುಕ್ಕೆ ದೇವಸ್ಥಾನ ವಾರಾಂತ್ಯ ಬಂದ್; ಡಿಸಿ ಆದೇಶದಲ್ಲೇನಿದೆ
ಇತ್ತೀಚೆಗಷ್ಟೆ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಮಹದಾಯಿ ಪ್ರಕರಣದಲ್ಲಿ ಹೆಚ್ಚಿನ ಗಮನಹರಿಸಲು ವಿಶೇಷ ವಿಭಾಗ ಸ್ಥಾಪನೆ ಮಾಡುವುದಗಿ ಹೇಳಿದ್ದರು. ರಾಜ್ಯ ಜಲಸಂಪನ್ಮೂಲ ಇಲಾಖೆಯ ಮುಖ್ಯ ಇಂಜಿನೀಯರ್ ಪ್ರಮೋದ್ ಬದಾಮಿ, ಈ ಕುರಿತ ಆದೇಶ ಹೊರಡಿಸಿದ್ದಾರೆ. ಮಹದಾಯಿ ನದಿ ವಿಷಯದಲ್ಲಿ ಜ್ಞಾನ ಹೊಂದಿರುವ ಇಂಜಿನಿಯರ್ ದಿಲೀಪ್ ನಾಯ್ಕ ಅವರನ್ನು ಈ ವಿಭಾಗದ ಪ್ರಮುಖರನ್ನಾಗಿ ನೇಮಕ ಮಾಡಲಾಗಿದೆ.
ಮಹದಾಯಿ ನದಿ ನೀರು ವಿಷಯಲ್ಲಿ ರಾಜ್ಯ ಸರ್ಕಾರ ಗಂಭೀರವಾಗಿದೆ ಎಂದು ಇತ್ತೀಚೆಗಷ್ಟೆ ಮುಖ್ಯಮಂತ್ರಿ ಪ್ರಮೋದ ಸಾವಂತ್ ಹೇಳಿಕೆ ನೀಡಿದ್ದರು.
ಕರ್ನಾಟಕವು ಮಹದಾಯು ನದಿ ನೀರನ್ನು ತಿರುಗಿಸಿಕೊಂಡಿದ್ದರೂ ಸರ್ಕಾರ ಬಾಯಿಮುಚ್ಚಿ ಕುಳಿತಿದೆ ಎಂದು ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಹರಿಹಾಯ್ದಿದ್ದವು.
ಇದನ್ನೂ ಓದಿ : ಬೊಮ್ಮಾಯಿ ಸಂಪುಟ ರಚನೆ : ಪೂರ್ಣಿಮಾ ಅಸಮಾಧಾನ