ಮುಂಬೈ : ಕಾರ್ತಿಕ್ ಸುಬ್ಬರಾಜ್ ಅವರ ಬಹು ನಿರೀಕ್ಷಿತ ತಮಿಳು ಆಕ್ಷನ್ ಡ್ರಾಮಾ ಹೊಂದಿರುವ ‘ಮಹಾ ಪುರುಷ’ ಚಿತ್ರ ಫೆಬ್ರವರಿ 10 ರಂದು ಭಾರತದ ಜನಪ್ರೀಯ ಮನರಂಜನಾ ತಾಣವಾದ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಗೊಳ್ಳಲಿದೆ.
ಲಲಿತ್ ಕುಮಾರ್ ನಿರ್ಮಾಣದ ಈ ಚಿತ್ರವು ಸಾಮಾನ್ಯ ಮನುಷ್ಯನ ಇಡೀ ಜೀವನವನ್ನು ಮತ್ತು ಅವನ ಸುತ್ತಲಿನ ಎಲ್ಲ ಜನರನ್ನು ಪರಿವರ್ತಿಸುವ ಘಟನೆಗಳ ಸರಣಿಯ ನಿರೂಪಣೆಯಾಗಿದೆ. ನಿಜ ಜೀವನದ ತಂದೆ ಮಗನ ಜೋಡಿ ವಿಕ್ರಮ್ ಮತ್ತು ಧ್ರುವ ವಿಕ್ರಮ್ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಜೊತೆಗೆ ಬಾಬಿ ಸಿಂಹ ಮತ್ತು ಸಿಮ್ರಾನ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಈ ಚಿತ್ರವು ಫೆಬ್ರವರಿ 10 ರಿಂದ ಪ್ರೈಮ್ ವಿಡಿಯೋದಲ್ಲಿ ಪ್ರಪಂಚದಾದ್ಯಂತ ಪ್ರೀಮಿಯರ್ ಆಗಲಿದೆ ಅಲ್ಲದೆ ಮಲಯಾಳಂ, ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿಯೂ ಸಹ ಲಭ್ಯವಿರಲಿದೆಯಂತೆ.
ವೈಯುಕ್ತಿಕ ಸ್ವಾತಂತ್ರ್ಯದ ಹುಡುಕಾಟದಲ್ಲಿ ಸೈದ್ಧಾಂತಿಕ ಬದುಕಿನ ಹಾದಿಯಿಂದ ದೂರವಾದಾಗ ಕುಟುಂಬವು ಆ ವ್ಯಕ್ತಿಯನ್ನು ತೊರೆಯುವ ಕಥೆಯೇ ಮಹಾನ್. ಆದಾಗ್ಯೂ, ಅವನು ತನ್ನ ಮಹತ್ವಾಕಾಂಕ್ಷೆಗಳನ್ನು ಅರಿತುಕೊಂಡಂತೆ, ತನ್ನ ಜೀವನದಲ್ಲಿ ತನ್ನ ಮಗನ ಅನುಪಸ್ಥಿತಿಯನ್ನು ಭಾವಿಸುತ್ತಾನೆ. ಕೋಟ್ಯಾಧೀಶನಾಗುವ ತನ್ನ ಕನಸನ್ನು ನನಸಾಗಿಸಿದಾಗ ಜೀವನವು ತಂದೆಯಾಗಲು ಎರಡನೇ ಅವಕಾಶವನ್ನು ನೀಡುತ್ತದೆಯೇ? ಈ ರೋಮಾಂಚಕ, ಸಾಹಸಮಯ ಪ್ರಯಾಣದಲ್ಲಿ ಅವನ ಜೀವನವು ಅನಿರೀಕ್ಷಿತ ಘಟನೆಗಳ ಸರಣಿಯ ಮೂಲಕ ಹೇಗೆ ಸಾಗುತ್ತದೆ ಎಂಬುದರ ಕುರಿತು ಸಾಗುವ ಕಥೆಯಾಗಿದೆ.
ಇದನ್ನೂ ಓದಿ : ನಾನು ಯಡಿಯೂರಪ್ಪ, ವಿಜಯೇಂದ್ರರ ವಿರೋಧಿ : ರೇಣು ಭೇಟಿಗೆ ಯತ್ನಾಳ್ ಸಮಜಾಯಿಷಿ