ಮೈಸೂರು: ರೈತರ ಪಾಲಿನ ಡೆತ್‌ನೋಟ್ ಆಗಿರುವ ಕೃಷಿ ಕಾಯಿದೆಗಳನ್ನು ಹಿಂಪಡೆಯಲು ದೇಶಾದ್ಯಂತ ನಡೆಯುತ್ತಿರುವ ಮಹಾಪಂಚಾಯತ್ ಸಭೆಗಳನ್ನು ರಾಜ್ಯ ದಲ್ಲಿಯೂ ನಡೆಸಿ, ರೈತ ಹೋರಾಟವನ್ನು ತೀವ್ರಗೊಳಿಸುವ ಉದ್ದೇಶದಿಂದ “ಮಹಾ ಪಂಚಾಯತ್‌ಗಳನ್ನು ಆಯೋಜಿಸಲಾಗುತ್ತಿದೆ ಎಂದು ಸಾಮೂಹಿಕ ನಾಯಕತ್ವದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ನಾಯಕರಾದ ಚುಕ್ಕಿ ನಂಜುಂಡಸ್ವಾಮಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೋರಾಟವನ್ನು ತೀವ್ರಗೊಳಿಸುವಉದ್ದೇಶದಿಂದ ರೂಪಿಸಿರುವ ಮಹಾ ಪಂಚಾಯತ್ ಸಭೆಗಳು ಮಾ.20ರಂದುಶಿವಮೊಗ್ಗದಲ್ಲಿ ಮೊದಲ ಮಹಾಪಂಚಾಯತ್ ನಡೆದರೆ, ಮಾ.21ರಂದು ಹಾವೇರಿ ಮತ್ತು ಮಾ.31ರಂದು ಬೆಳಗಾವಿಯಲ್ಲಿಮಹಾ ಪಂಚಾಯತ್ ನಡೆಯಲಿವೆ. ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರ ನಾಯಕರಾದ ರಾಕೇಶ್ ಟಿಕಾಯತ್,ಯುದ್ಧವೀರ್ ಸಿಂಗ್, ಡಾ.ದರ್ಶನ್‌ಪಾಲ್ ಮಹಾಮಂಚಾಯತ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಮಾ.20ರಂದು ಬೆಳಗ್ಗೆ 7ಕ್ಕೆ ಬೆಂಗಳೂರಿನ ರಸ್ತೆ ಮಾರ್ಗದಲ್ಲಿ ರಾಷ್ಟ್ರೀಯನಾಯಕರನ್ನು ಒಳಗೊಂಡ ತಂಡವುಶಿವಮೊಗ್ಗ ತೆರಳಲಿದೆ. ಮಾರ್ಗಮಧ್ಯದಲ್ಲಿಸಿಗುವಂತಹ ಮುಖ್ಯ ನಗರಗಳಾದತುಮಕೂರು, ತಿಪಟೂರು, ಅರಸೀಕೆರೆ,ಕಡೂರು, ತರಿಕೆರೆ ಹಾಗೂ ಭದ್ರಾವತಿಯಲ್ಲಿ ಸಂಘಟನೆಗಳ ಮುಖ್ಯಸ್ಥರು ಕಾರ್ಯ ಕರ್ತರು ನಿರ್ದಿಷ್ಟವಾದ ಸ್ಥಳಗಳಲ್ಲಿ ಬಂದುಸೇರಿ ಸ್ವಾಗತ ಕೋರಿ ಅವರೊಂದಿಗೆಶಿವಮೊಗ್ಗ ಪ್ರಯಾಣ ಮುಂದುವರಿಸಲಿದ್ದಾರೆ. ಹೀಗಾಗಿ ಹೆಚ್ಚಿನ ರೈತರು ಈಪ್ರಯಾಣದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ರಾಜ್ಯದ ಎಲ್ಲ ರೈತಪರ ಸಂಘಟನೆಗಳುಚರ್ಚಿಸಿ ಎಲ್ಲರನ್ನೂ ಒಗ್ಗೂಡಿಸಿ ಒಂದೇವೇದಿಕೆಯಲ್ಲಿ ಒಗ್ಗಟ್ಟಾಗಿ ಹೋರಾಟ ಮಾಡಲಾಗುತ್ತಿದೆ. ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ, ಐಕ್ಯಹೋರಾಟ ಕರ್ನಾಟಕ, ಸಂಯುಕ್ತಹೋರಾಟ ಕರ್ನಾಟಕ, ಅಖಂಡ ಕರ್ನಾಟಕ ರೈತ ಸಂಘ ಹಾಗೂ ದಲಿತ, ಕಾರ್ಮಿಕಮತ್ತು ರೈತ ಪರ ಸಂಘಟನೆಗಳು ಒಟ್ಟುಗೂಡಿ ಈ ಮಹಾಪಂಚಾಯತ್‌ರೂಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
19ರಂದು ಸಂಸ್ಮರಣಾ ದಿನ: ಮುಂದಿನ ಪೀಳಿಗೆಯ ಮತ್ತು ಕೃಷಿ ಅಸ್ತಿತ್ವವನ್ನುಉಳಿಸಿಕೊಳ್ಳುವ ಸಲುವಾಗಿ ಹೊಸದಿಲ್ಲಿನಡೆಯುತ್ತಿರುವ ಹೋರಾಟದಲ್ಲಿ ಹುತಾತ್ಮರಾದ ರೈತರನ್ನು ಸ್ಮರಿಸುವ ಸಲುವಾಗಿ ಚಳವಳಿಯಲ್ಲಿ ಮಡಿದ ರೈತರ ಭಾವಚಿತ್ರವನ್ನುಹಿಡಿದು ಮಾ.19ರಂದು ಬೆಂಗಳೂರಿನಲ್ಲಿ”ರೈತ ಹುತಾತ್ಮ ಸಂಸ್ಮರಣಾ ದಿನವನ್ನು ಆಚರಿಸಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಕೆ.ಜಿ.ಶಿವಪ್ರಸಾದ್, ವಿದ್ಯಾಸಾಗರ್‌ರಾಮೇಗೌಡ, ಮಂಜು ಕಿರಣ್ ಹೊಳೆಸಾಲು, ಪ್ರದೀಪ್, ಶಿರಮಳ್ಳಿ ಮಂಜುನಾಥ್, ಕಲಿಪುರ ಮಹಾದೇವಸ್ವಾಮಿ ಸೇರಿದಂತೆ ಮತ್ತಿತರರು ಹಾಜರಿದ್ದರು.