ಮುಂಬೈ: ಮಹಾರಾಷ್ಟ್ರ ಸರ್ಕಾರವು ಏಕಬಳಕೆಯ ಪ್ಲಾಸ್ಟಿಕ್ ನೀತಿಯಲ್ಲಿ ಬದಲಾವಣೆ ತರುವ ಮೂಲಕ ಗೊಬ್ಬರವಾಗಬಲ್ಲ ಸಾಮಾಗ್ರಿಗಳಿಂದ ತಯಾರಿಸಿದ ಸ್ಟ್ರಾಗಳು, ಕಪ್ ಗಳು, ಪ್ಲೇಟ್‌ಗಳು, ಫೋರ್ಕ್‌ಗಳು ಮತ್ತು ಚಮಚಗಳ ಉತ್ಪಾದನೆಗೆ ಅನುಮತಿ ನೀಡಿದೆ.
“ಏಕಬಳಕೆಯ ಪ್ಲಾಸ್ಟಿಕ್ ಮತ್ತು ಥರ್ಮಾಕೋಲ್ ವಸ್ತುಗಳ ನಿಷೇಧದ ಕುರಿತು ಅಧ್ಯಯನ ನಡೆಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಸಮಿತಿಯು, ಗೊಬ್ಬರವಾಗಬಲ್ಲ ಸಾಮಾಗ್ರಿಗಳಿಂದ ತಯಾರಿಸಿದ ವಸ್ತುಗಳಿಗೆ ಅನುಮತಿ ನೀಡಲು ನಿರ್ಧರಿಸಿತು. ಆದರೆ ಇದಕ್ಕೆ ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಪ್ಲಾಸ್ಟಿಕ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ(ಸಿಐಪಿಇಟಿ) ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣಾ ಮಂಡಳಿ(ಸಿಪಿಸಿಬಿ)ಯಿಂದ ಅನುಮೋದನೆ ಪಡೆಯುವುದು ಕಡ್ಡಾಯ,’ ಎಂದು ಮಹಾರಾಷ್ಟ್ರದ ಪರಿಸರ ಮತ್ತು ಹವಾಮಾನ ಬದಲಾವಣೆ ಇಲಾಖೆಯ ಕಾರ್ಯದರ್ಶಿ ಪ್ರವೀಣ್ ದಾರಾದೆ ತಿಳಿಸಿದರು.
ಇದನ್ನೂ ಓದಿ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ: ಮಧ್ಯಪ್ರದೇಶಕ್ಕೆ 4 ಆನೆಗಳ ಹಸ್ತಾಂತರ