Advertisement

Maha Election: ಡಿಕೆಶಿ ಸೇರಿ ಕಾಂಗ್ರೆಸ್‌ ಜತೆ ಇವಿಎಂ ಬಗ್ಗೆ ಚರ್ಚೆ: ಸಂಸದೆ ಸುಪ್ರಿಯಾ

12:47 AM Nov 26, 2024 | Team Udayavani |

ಹೊಸದಿಲ್ಲಿ: ಮಹಾರಾಷ್ಟ್ರ ಚುನಾವಣೆಯಲ್ಲಿ ಇವಿಎಂ ತಿರುಚುವಿಕೆ ಆರೋಪಗಳ ಸರಣಿ ಮುಂದುವರಿದಿದೆ. ಈ ಬಗ್ಗೆ ಕಾಂಗ್ರೆಸ್‌ ಜತೆ ಚರ್ಚಿಸುತ್ತೇನೆ. ಇದನ್ನು ಸಾಬೀತು ಮಾಡಲು ನಮಗೆ ಸಾಕ್ಷ್ಯಗಳ ಆವಶ್ಯಕತೆ ಇದೆ ಎಂದು ಎನ್‌ಸಿಪಿ (ಎಸ್‌ಪಿ) ಸಂಸದೆ ಸುಪ್ರಿಯಾ ಸುಳೆ ಹೇಳಿದ್ದಾರೆ.

Advertisement

ಸೋಮವಾರ ಮಾಧ್ಯಮಗಳ ಜತೆ ಮಾತನಾಡಿದ ಸುಳೆ, ಇವಿಎಂ ಅಕ್ರಮದ ಬಗ್ಗೆ ಕರ್ನಾಟಕ ಡಿಸಿಎಂ ಡಿ.ಕೆ.ಶಿವಕುಮಾರ್‌ ಮತ್ತಿತರ ಕಾಂಗ್ರೆಸ್‌ ನಾಯಕರ ಜತೆ ನಾನು ಚರ್ಚಿಸುತ್ತೇನೆ. ಸಾಕ್ಷ್ಯಗಳನ್ನು ಕಲೆ ಹಾಕಿ, ನಾವು ಇದನ್ನು ಸಾಬೀತು ಮಾಡುತ್ತೇವೆ’ ಎಂದು ಹೇಳಿದರು. ಇವಿಎಂ ಅಕ್ರಮದ ಬಗ್ಗೆ ಮಾತನಾಡಲು ಕೆಲವೇ ದಿನಗಳಲ್ಲೇ ದಿಲ್ಲಿಗೆ ಪ್ರಯಾಣಿಸುತ್ತೇನೆ ಎಂದು ಡಿ.ಕೆ.ಶಿವಕುಮಾರ್‌ ಸಹ ಇತ್ತೀಚೆಗೆ ಹೇಳಿದ್ದರು.

ಮತಪತ್ರ ಮೂಲಕ ಮರು ಚುನಾವಣೆಗೆ ರಾವತ್‌ ಆಗ್ರಹ
ಮಹಾರಾಷ್ಟ್ರದಲ್ಲಿ ಮರು ಚುನಾವಣೆ ನಡೆಸಬೇಕು. ಇದಕ್ಕೆ ಮತಪತ್ರ ಬಳಸಬೇಕು ಎಂದು ಶಿವಸೇನೆ ಉದ್ಧವ್‌ ಬಣ ಆಗ್ರಹಿಸಿದೆ. ಜತೆಗೆ ಇವಿಎಂಗಳ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆಪಾದಿಸಿದೆ. ನಾವು ಇವಿಎಂಗಳ ಬಗ್ಗೆ  ಸುಮಾರು 450 ದೂರು ಗಳನ್ನು ಸ್ವೀಕರಿಸಿದ್ದೇವೆ. ಈಗಿನ ಫ‌ಲಿತಾಂಶ ತಡೆಹಿಡಿದು ಮತ ಪತ್ರ ಬಳಸಿ ಮತ್ತೆ ಚುನಾವಣೆ ನಡೆಸಬೇಕು ಎಂದು ಸಂಸದ ಸಂಜಯ್‌ ರಾವತ್‌ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next