Advertisement

ಶಾಸಕ ಸಂಜಯ್‌ ಶಿರ್ಸಾತ್‌ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

04:54 PM Oct 18, 2022 | Team Udayavani |

ಮುಂಬಯಿ: ಔರಂಗಾಬಾದ್‌ ಶಾಸಕ ಸಂಜಯ್‌ ಶಿರ್ಸಾತ್‌ ಹೃದಯಾಘಾತಕ್ಕೆ ಒಳಗಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಏರ್‌ ಆ್ಯಂಬುಲೆನ್ಸ್‌ ಮೂಲಕ ಮುಂಬಯಿಗೆ ರವಾನಿಸಲಾಗಿದೆ.

Advertisement

ಸೋಮವಾರ ರಾತ್ರಿ ಅವರಿಗೆ ಹೃದಯಾಘಾತ ಸಂಭವಿಸಿದ್ದು, ಅವರನ್ನು ಚಿಕಿತ್ಸೆಗಾಗಿ ಔರಂಗಾಬಾದ್‌ನ ಸಿಗ್ಮಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅನಂತರ ಮಂಗಳವಾರ ಬೆಳಗ್ಗೆ ಚಿಕಿತ್ಸೆಗಾಗಿ ಮುಂಬಯಿಗೆ ರವಾನಿಸಲಾಗಿದ್ದು ಸದ್ಯ ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಸಂಜಯ್‌ ಶಿರ್ಸಾತ್‌ ಔರಂಗಾಬಾದ್‌ ಪಶ್ಚಿಮದಿಂದ ಶಾಸಕರಾಗಿದ್ದಾರೆ. ರಾಜ್ಯದಲ್ಲಿ ಅಧಿಕಾರ ಪರಿವರ್ತನೆಯಲ್ಲಿ ಶಿರ್ಸಾತ್‌ ಕೂಡ ಭಾಗಿಯಾಗಿತ್ತು. ಶಿವಸೇನೆ ಅಭ್ಯರ್ಥಿಯಾಗಿ ಸತತ ಮೂರು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. 2019ರ ವಿಧಾನಸಭಾ ಚುನಾವಣೆಯಲ್ಲಿ ಸಂಜಯ್‌ ಶಿರ್ಸಾತ್‌ ಅವರು ಬಿಜೆಪಿಯ ಬಂಡಾಯ ಅಭ್ಯರ್ಥಿ ರಾಜು ಶಿಂಧೆ ಅವರನ್ನು 40,747 ಮತಗಳಿಂದ ಸೋಲಿಸಿದ್ದರು.

ಏಕನಾಥ್‌ ಶಿಂಧೆ ನೇತೃತ್ವದಲ್ಲಿ ನಡೆದ ಬಂಡಾಯದಲ್ಲಿ ಭಾಗವಹಿಸಿದ್ದರು. ಶಿಂಧೆ-ಫಡ್ನವೀಸ್‌ ನೇತೃತ್ವದ ಸರಕಾರಕ್ಕೆ ಅವರು ಸೇರ್ಪಡೆಯಾಗುತ್ತಾರೆ ಎಂಬ ಊಹಾಪೋಹಗಳು ಇದ್ದವು. ಆದರೆ, ಸಚಿವ ಸ್ಥಾನ ಸಿಗದ ಕಾರಣ ಅಸಮಾಧಾನಗೊಂಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ:ವಾಯುಭಾರ ಕುಸಿತ: ಬೆಂಗಳೂರು, ಕರಾವಳಿ ಸೇರಿ ದೇಶದ ಹಲವೆಡೆ 5 ದಿನ ಭಾರೀ ಮಳೆ ಸಾಧ್ಯತೆ

Advertisement

ಶಿವಸೇನೆ ವಿಭಜನೆಯ ಅನಂತರ, ಸಂಜಯ್‌ ಶಿರ್ಸಾತ್‌ ಅವರು ಶಿವಸೇನೆ ನಾಯಕತ್ವವನ್ನು ವಿಶೇಷವಾಗಿ ಸಂಸದ ಸಂಜಯ್‌ ರಾವುತ್‌ ಅನ್ನು ಕಟುವಾಗಿ ಟೀಕಿಸಿದ್ದರು.

ಸಂಜಯ್‌ ಶಿರ್ಸಾತ್‌ 1985ರಲ್ಲಿ ಶಿವಸೇನೆಯ ನಗರ ಸಂಘಟಕರಾಗಿ ನೇಮಕಗೊಂಡರು. 1995 ರಲ್ಲಿ ರಾಜ್ಯದಲ್ಲಿ ಸಮ್ಮಿಶ್ರ ಅಧಿಕಾರಕ್ಕೆ ಬಂದ ನಂತರ, ಅವರು ಮರಾಠವಾಡ ಕೈಗಾರಿಕಾ ಅಭಿವೃದ್ಧಿ ನಿಗಮದ ಸದಸ್ಯರಾಗಿ ಆಯ್ಕೆಯಾದರು.

2000ರಲ್ಲಿ ಶಿರ್ಸಾತ್‌ ಕಾರ್ಪೊರೇಟರ್‌ ಆಗಿ ಆಯ್ಕೆಯಾದರು. ಅನಂತರ 2009ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅದಾದ ಬಳಿಕ ಶಿರ್ಸಾತ್‌ ಸತತ ಮೂರು ಬಾರಿ ಜಯಭೇರಿ ಬಾರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next