Advertisement

Japanese ನಿರ್ದೇಶಕ ಮಿಯಾಜಾಕಿ ಸೇರಿ ಐವರಿಗೆ ಮ್ಯಾಗ್ಸೆಸೆ ಗೌರವ

01:46 AM Sep 02, 2024 | Team Udayavani |

ಟೋಕಿಯೊ: ಜಪಾನ್‌ ಸಿನೆಮಾ ನಿರ್ದೇಶಕ ಹಯಾವೋ ಮಿಯಾಜಾಕಿ ಸೇರಿ 5 ಮಂದಿ ಈ ಬಾರಿ ಏಷ್ಯಾದ ನೊಬೆಲ್‌ ಎಂದೇ ಖ್ಯಾತಿ ಗಳಿಸಿರುವ ರೆಮನ್‌ ಮ್ಯಾಗ್ಸೆಸೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅನಿಮೇಶನ್‌ಗೆ ಮಿಯಾ­­­ಜಾಕಿ ನೀಡಿದ ಕೊಡುಗೆ ಪರಿಗಣಿಸಿ ಈ ಗೌರವ ನೀಡಲಾಗುತ್ತಿದೆ. ಜತೆಗೆ ವಿಯೆಟ್ನಾಂ ವೈದ್ಯ ಡಾ| ಗುಯೇನ್‌ ಥಿ ಗಾಟ್‌ ಹುವಾಂಗ್‌, ಭೂತಾನ್‌ನ ಮಾಜಿ ಬೌದ್ಧ ಗುರು ಕರ್ಮಾ ಫ‌ುಂಟ್‌ಶೋ, ಇಂಡೋನೇಷ್ಯಾದ ಫ‌ರ್ವೀಝಾ ಫ‌ರ್ಹಾನ್‌, ಥಾçಲೆಂಡ್‌ನ‌ ರೂರಲ್‌ ಡಾಕ್ಟರ್ಸ್‌ ಮೂವ್‌ಮೆಂಟ್‌ ಎಂಬ ಸಂಸ್ಥೆ ಈ ಗೌರವಕ್ಕೆ ಪಾತ್ರವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next