ಹೊಸದಿಲ್ಲಿ: ಸತತ ಭೂಕಂಪನಗಳಿಂದ ತತ್ತರಿಸಿರುವ ಟರ್ಕಿ ಇನ್ನೂ ಅಪಾಯುಮುಕ್ತವಾಗಿಲ್ಲ. ಶನಿವಾರ ಕೇಂದ್ರ ಟರ್ಕಿಯಲ್ಲಿ ರಿಕ್ಟರ್ ಮಾಪಕದ ಪ್ರಕಾರ 5.5 ತೀವ್ರತೆಯ ಕಂಪನವಾಗಿದೆ. ಇದು ಕೇಂದ್ರ ಟರ್ಕಿಯಲ್ಲಿ ಸಂಭವಿಸಿದ 37ನೇ ಭೂಕಂಪ.
Advertisement
ವಾರಗಳ ಹಿಂದೆ ಆ ದೇಶದಲ್ಲಿ ಭಾರೀ ಕಂಪನ ಸಂಭವಿಸಿತ್ತು. ಅದರಿಂದ 50,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ಇದರ ಪರಿಣಾಮ 5.20 ಲಕ್ಷ ಅಪಾರ್ಟ್‌ಮೆಂಟ್‌ಗಳಿದ್ದ 1.60 ಲಕ್ಷ ಕಟ್ಟಡಗಳು ನಿರ್ನಾಮಗೊಂಡಿವೆ.
ಸದ್ಯ ಟರ್ಕಿ ಸರಕಾರ ಮನೆಗಳ ಮರು ನಿರ್ಮಾಣಕ್ಕೆ ಸಜ್ಜಾಗಿದೆ. ಭಾರತೀಯರು ಟರ್ಕಿಗೆ ಧಾವಿಸಿ ಭಾರೀ ನೆರವು ನೀಡಿದ್ದನ್ನು ಅಲ್ಲಿನ ನಾಗರಿಕರು ಕಣ್ತುಂಬಿಕೊಂಡು ಸ್ಮರಿಸಿದ್ದಾರೆ.