Advertisement

ಉತ್ತರ ಕೊರಿಯದಲ್ಲಿ ಲಘು ಭೂಕಂಪ: ಸ್ಫೋಟದ ಶಂಕೆ

03:36 PM Sep 23, 2017 | Team Udayavani |

ಪಾಂಗ್‌ಯಾಂಗ್‌ : ಉತ್ತರ ಕೊರಿಯದಲ್ಲಿ 3.4 ಅಂಕಗಳ ತೀವ್ರತೆಯ ಭೂಕಂಪ ಸಂಭವಿಸಿರುವುದು ಪತ್ತೆಯಾಗಿದೆ. ಈ ಲಘು ಭೂಕಂಪವು ಶಂಕಿತ ಸ್ಫೋಟದಿಂದ ಉಂಟಾಗಿರುವ ಸಾಧ್ಯತೆ ಇದೆ ಎಂದು ಚೀನದ ಭೂಕಂಪ ನಿರ್ವಹಣ ಸಂಸ್ಥೆ ಹೇಳಿದೆ. 

Advertisement

ಉತ್ತರ ಕೊರಿಯದಲ್ಲಿನ ಭೂಕಂಪವು ಬೆಳಗ್ಗೆ 11.30ರ ಹೊತ್ತಿಗೆ (0330 ಜಿಎಂಟಿ ಕಾಲಮಾನ) ಸಂಭವಿಸಿರುವುದು ದಾಖಲಾಗಿದೆ. ಮಾತ್ರವಲ್ಲದೆ ಇದರ ಆಳವು ಶೂನ್ಯ ಕಿಲೋ ಮೀಟರ್‌ ಎಂದು ದಾಖಲಾಗಿದೆ ಎಂದು ಚೀನ ಭೂಕಂಪ ನಿರ್ವಹಣ ಸಂಸ್ಥೆ ಹೇಳಿದೆ. 

ಉತ್ತರ ಕೊರಿ ನಿನ್ನೆ ಶುಕ್ರವಾರವಷ್ಟೇ ತಾನು ಶಾಂತ ಸಾಗರದಲ್ಲಿ ಹೈಡ್ರೋಜನ್‌ ಬಾಂಬ್‌ ನ ಪರೀಕ್ಷಾರ್ಥ ನ್ಪೋಟವನ್ನು ಕೈಗೊಳ್ಳುವುದಾಗಿ ಹೇಳಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇದಕ್ಕೆ ಮುನ್ನ ಉತ್ತರ ಕೊರಿಯವನ್ನು ನಿರ್ನಾಮ ಮಾಡುವ ಬೆದರಿಕೆಯನ್ನು ಒಡ್ಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next