Advertisement

ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗಳಿಗೆ ಹೈ ಮಾರ್ಗಸೂಚಿ

01:48 PM Oct 19, 2021 | Team Udayavani |

ಬೆಂಗಳೂರು: ಖಾಸಗಿ ದೂರುಗಳನ್ನು ವಿಚಾರಣೆಗೆಅಂಗೀಕರಿಸುವಾಗ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಅನುಸರಿಸಬೇಕಾದ ಕ್ರಮಗಳ ಕುರಿತು ಹೈಕೋರ್ಟ್‌ಮಾರ್ಗಸೂಚಿಗಳನ್ನು ತಿಳಿಸಿದೆ.

Advertisement

ಜಮೀನು ವ್ಯಾಜ್ಯ ಸಂಬಂಧ ತನ್ನ ವಿರುದ್ಧದ ದಾಖಲಾಗಿದ್ದ ಎಫ್ಐಆರ್‌ ರದ್ದು ಕೋರಿ ಶ್ರೀಸತ್ಯಸಾಯಿ ಸೆಂಟ್ರಲ್‌ ಟ್ರಸ್ಟ್‌ ಸಲ್ಲಿಸಿದ್ದ ಅರ್ಜಿವಿಚಾರಣೆ ನಡೆಸಿದ ನ್ಯಾ. ಶ್ರೀನಿವಾಸ್‌ ಹರೀಶ್‌ಕುಮಾರ್‌ ಅವರು ಈ 7 ಮಾರ್ಗಸೂಚಿಗಳನ್ನು ರಚಿಸಿದ್ದಾರೆ.

ಭೂ ಮಾಲೀಕರು ಎನ್ನಲಾದ ಚಿಕ್ಕಬಳ್ಳಾಪುರದಸತ್ಯ ಸಾಯಿ ಗ್ರಾಮದ ನಿವಾಸಿ ಬಿ.ಎನ್‌. ನರಸಿಂಹಮೂರ್ತಿ ಅವರು ಶ್ರೀ ಸತ್ಯಸಾಯಿ ಸೆಂಟ್ರಲ್‌ ಟ್ರಸ್ಟ್‌ವಿರುದ್ಧ ದಾಖಲಿಸಿದ್ದ ಖಾಸಗಿ ದೂರನ್ನು ತನಿಖೆನಡೆಸುವಂತೆ ನಂದಿಗಿರಿಗ್ರಾಮದ ಠಾಣಾಪೊಲೀಸರಿಗೆ ಸ್ಥಳೀಯ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಆದೇಶಿಸಿತ್ತು.

ಆದರೆ, ಪ್ರಕರಣದಲ್ಲಿ ಅಪರಾಧ ಕೃತ್ಯನಡೆದಿರುವುದನ್ನು ಸಾಬೀತುಪಡಿಸಲು ಯಾವುದೇದಾಖಲೆ ಮತ್ತು ಸಾಕ್ಷ್ಯ ಲಭ್ಯವಿಲ್ಲದಿದ್ದರೂ ತನಿಖೆಗೆಆದೇಶಿಸಿರುವುದನ್ನು ಗಂಭೀರವಾಗಿ ಪರಿಗಣಿಸಿದಹೈಕೋರ್ಟ್‌, ಮ್ಯಾಜಿಸ್ಟ್ರೇಟ್‌ ಕೊರ್ಟ್‌ಕಡ್ಡಾಯವಾಗಿ ಅನುಸರಿಸಬೇಕಾದ ಈ ಏಳು ಮಾರ್ಗಸೂಚಿಗಳನ್ನು ರಚಿಸಿದೆ. ಇದೇ ವೇಳೆ ಟ್ರಸ್ಟ್‌ವಿರುದ್ಧ ಎಫ್ಐಆರ್‌ ಮತ್ತುದೋಷಾರೋಪ ಪಟ್ಟಿಯನ್ನುರದ್ದುಪಡಿಸಿದೆ.

ಹೈಕೋರ್ಟ್‌ ರಚಿಸಿದಮಾರ್ಗಸೂಚಿಗಳು:

Advertisement

 ಖಾಸಗಿ ದೂರು ಸಲ್ಲಿಕೆಯಾದಾಗ ಅದನ್ನುಮ್ಯಾಜಿಸ್ಟ್ರೇಟ್‌ ಕೋರ್ಟ್‌ ಕಡ್ಡಾಯವಾಗಿ ಓದಬೇಕು.ದೂರಿನಲ್ಲಿ ಅಪರಾಧ ಕೃತ್ಯ ನಡೆದಿರುವ ಬಗ್ಗೆಯಾವುದೇ ಮಾಹಿತಿ ಇಲ್ಲವಾದರೆ ದೂರನ್ನುವಜಾಗೊಳಿಸಬಹುದು. ಆದರೆ, ದೂರುದಾರ ಸೂಕ್ತರೀತಿಯಲ್ಲಿ ದೂರು ಸಿದ್ಧಪಡಿಸಿಲ್ಲ ಎಂಬ ಅಂಶಕಂಡುಬಂದರೆ ಅಥವಾ ಬಹಳ ಚಾಣಾಕ್ಷತೆ ಯಿಂದದೂರು ಸಿದ್ಧಪಡಿಸಿದ್ದರೆ ಸಂದರ್ಭದಲ್ಲಿ ದೂರುದಾರಮತ್ತು ಸಾಕ್ಷಿಗಳನ್ನು ಪರಿಶೀಲಿಸಬಹುದು.

 ಸಿಆರ್‌ಪಿಸಿ ಸೆಕ್ಷನ್‌ -200ರ ಅನ್ವಯ ದೂರನ್ನುಓದಿದ ನಂತರ (ಸಾಕ್ಷಿಗಳು ಹಾಜರಿದ್ದರೆ ಮತ್ತುಅವರನ್ನು ವಿಚಾರಿಸುವುದು ಅಗತ್ಯ ವಾದರೆ)ಪ್ರಕರಣದಲ್ಲಿ ಮುಂದು ವರಿಯಲುಸೂಕ್ತ ಅಂಶಗಳಿವೆ ಎಂಬ ತೀರ್ಮಾನಕ್ಕೆ ಬಂದರೆ, ಮ್ಯಾಜಿಸ್ಟ್ರೇಟ್‌ಕೋರ್ಟ್‌ ಕಾಗ್ನಿಜೆನ್ಸ್‌ ತೆಗೆದುಕೊಂಡು ಆರೋಪಿಗೆ ನೋಟಿಸ್‌ಜಾರಿಗೊಳಿಸಬಹುದು.

 ಸಿಆರ್‌ಪಿಸಿ ಸೆಕ್ಷನ್‌ 200ರಅನ್ವಯ ಎಲ್ಲ ಪ್ರಕ್ರಿಯೆ ಅನುಸರಿಸಿದ ಬಳಿಕವೂಪ್ರಕರಣದಲ್ಲಿ ಕಾಗ್ನಿಜೆನ್ಸ್‌ ತೆಗೆದುಕೊಳ್ಳಲುಸಮರ್ಪಕ ಅಂಶಗಳು ಇಲ್ಲ ಎಂದು ಕಂಡು ಬಂದರೆಆ ಬಗ್ಗೆ ಮ್ಯಾಜಿಸ್ಟ್ರೇರ್ಟ್‌ ಖುದ್ದು ವಿಚಾರಣೆನಡೆಸಬಹುದು ಅಥವಾ ಸಿಆರ್‌ಪಿಸಿ ಸೆಕ್ಷನ್‌202ರಡಿ ನೇರ ತನಿಖೆಗೆ ನಿರ್ದೇಶಿಸಬಹುದು.

 ಒಂದು ವೇಳೆ ದೂರುದಾರರು ಹಾಗೂಸಾಕ್ಷಿಗಳನ್ನು ಪರೀಕ್ಷೆಗೊಳಪಡಿಸಿದ ನಂತರವೂಅಪರಾಧ ಕೃತ್ಯವನ್ನು ಸಾಬೀತು ಪಡಿಸುವಂತಹಅಂಶಗಳು ಲಭ್ಯವಾಗದಿದ್ದರೆ ಸಿಆರ್‌ಪಿಸಿ ಸೆಕ್ಷನ್‌203ರ ಅನ್ವಯ ದೂರನ್ನು ರದ್ದುಪಡಿಸಬಹುದು.

 ಸೆಕ್ಷನ್‌ 202ರ ಅನ್ವಯ ಕ್ರಮ ಕೈಗೊಳ್ಳುವುದುಎಲ್ಲ ಸಂದರ್ಭಗಳಲ್ಲೂ ಕಡ್ಡಾಯವಲ್ಲ. ಸೆಕ್ಷನ್‌202ರಲ್ಲಿ ವಿವರಿಸಲಾಗಿರುವ ಸಂದರ್ಭಕ್ಕೆಅನುಗುಣವಾಗಿದ್ದರೆ ಮಾತ್ರ ದೂರನ್ನು ವಿಚಾರಣೆಗೆಆದೇಶಿಸಬಹುದು. ಅಂದರೆ ಸೆಕ್ಷನ್‌ 200ರ ಹಂತದನಂತರವೂ ದೂರನ್ನು ಕಾಗ್ನಿಜೆನ್ಸ್‌ತೆಗೆದುಕೊಳ್ಳುವುದು ಅಥವಾ ವಜಾಗೊಳಿಸುವುದುಆಯಾ ಸಂದರ್ಭವನ್ನು ಆಧರಿಸುತ್ತದೆ.

 ಕಾಗ್ನಿಜೆನ್ಸ್‌ ತೆಗೆದುಕೊಂಡ ಬಗ್ಗೆ ಆದೇಶದ ಪ್ರತಿಯಲ್ಲಿ ಕಡ್ಡಾಯವಾಗಿ ಹಿಂಬರಹ ನೀಡುವುದುಅಗತ್ಯವಿಲ್ಲ. ಆದರೆ, ಕಾಗ್ನಿಜೆನ್ಸ್‌ ತೆಗೆದುಕೊಳ್ಳುದಕ್ಕೆವಿವೇಚನೆ ಬಳಸಬೇಕು. ಕಾಗಿಜೆನ್ಸ್‌ ತೆಗೆದುಕೊಂಡಿರುವ ಬಗ್ಗೆ ಆದೇಶದಲ್ಲಿ ಸಂಕ್ಷಿಪ್ತವಾಗಿ ವಿವರಿಸಬೇಕು.ಆರೋಪಿಗೆ ನೋಟಿಸ್‌ ಜಾರಿಗೆ ಕೈಗೊಂಡ ನಿರ್ಧಾರವೇ ಕಾಗ್ನಿಜೆನ್ಸ್‌ ತೆಗೆದುಕೊಳ್ಳಲಾಗಿದೆ ಎಂಬುದನ್ನುಸೂಚಿಸುತ್ತದೆ.

 ತನಿಖಾ ಪೊಲೀಸ್‌ ಅಧಿಕಾರಿ ಬಿ ರಿಪೋರ್ಟ್‌ಸಲ್ಲಿಸಿದ ಸಂದರ್ಭದಲ್ಲಿ ಅದನ್ನು ದೂರುದಾರಪ್ರಶ್ನಿಸಿದರೆ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಈ ಮೇಲೆಹೇಳಿದ ಕ್ರಮಗಳನ್ನು ಅನುಸರಿಸಬೇಕು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next