Advertisement
ರಸಭೆ ಅಕ್ಷರಸಃ ಯಜಮಾನನಿಲ್ಲದ ಖಾಲಿ ಮನೆಯಂತಿದೆ. ನಿತ್ಯ ಕಚೇರಿಗೆ ಬರುವವರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ನಿರಾಸೆಯಿಂದ ವಾಪಸ್ ಆಗುತ್ತಿದ್ದಾರೆ. ಮಾಗಡಿ ಪುರಸಭೆ ಮುಖ್ಯಾಧಿಕಾರಿಗಳಿಲ್ಲದೆ ದಿನದಿಂದ ದಿನಕ್ಕೆ ಪುರನಾಗರಿಕರ ಸಮಸ್ಯೆ ಹೆಚ್ಚಾಗುತ್ತಿದ್ದು, ಮುಖ್ಯಾಧಿಕಾರಿ ಯಾವಾಗ ಬರುತ್ತಾರೆ, ಅಧಿಕಾರ ಯಾವಾಗ ಸ್ವೀಕರಿಸುತ್ತಾರೆ ಎಂಬ ಪುರನಾಗರಿಕರ ಪ್ರಶ್ನೆಗೆ ಪುರಸಭೆ ಕಚೇರಿಯಲ್ಲಿ ನಿಖರವಾಗಿ ಉತ್ತರಿಸುವವರೇ ಇಲ್ಲದಂತಾಗಿದೆ.
Related Articles
Advertisement
ಪುರಸಭೆ ಮುಖ್ಯಾಧಿಕಾರಿ ನೇಮಕಕ್ಕೆ ಆಗ್ರಹ : ಮನೆಕಟ್ಟಲು, ಸಾಲ ಪಡೆಯಲೋ, ಮಕ್ಕಳ ಮದುವೆ ಮಾಡಲೋ, ನಿವೇಶನ ಖರೀದಿಸಲೋ ಅವರಿಗೆ ತುರ್ತು ಹಣದ ಅವಶ್ಯಕತೆ ಇರುತ್ತದೆ. ಆದರೆ, ಸರಿಯಾದ ಸಮಯಕ್ಕೆ ತಮ್ಮ ಸ್ವತ್ತಿನ ದಾಖಲೆಗಳು ಮತ್ತು ಲೈಸೆನ್ಸ್ ಸಿಗದೆ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರೂ, ಜವಾಬ್ದಾರಿಯುತ ಪುರಸಭೆ ಅಧ್ಯಕ್ಷರಾಗಲಿ, ಶಾಸಕ ಎ. ಮಂಜುನಾಥ್ ಆಗಲಿ, ಜಿಲ್ಲಾ ಉಸ್ತವಾರಿ ಸಚಿವರಾಗಲಿ ಇತ್ತ ಗಮನಹರಿಸಿ ಪುರಸಭೆಗೆ ಮುಖ್ಯಾಧಿಕಾರಿ ನೇಮಕ ಮಾಡುವ ಮೂಲಕ ಪುರನಾಗರಿಕರ ಸಮಸ್ಯೆಗಳ ನಿವಾರಣೆ ಹಾಗೂ ಪಟ್ಟಣದ ಅಭಿವೃದ್ಧಿಗೆ ಮುಂದಾಗದೆ ಇರುವುದು ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಸದ್ಯಕ್ಕೆ ಮ್ಯಾನೇಜರ್‌ಗೆ ಇನ್‌ಚಾರ್ಜ್ ಕೊಡಲಾಗಿದೆ. ಇ-ಖಾತೆ ಲೈಸೆನ್ಸ್ ಕೊಡಲು ಮುಖ್ಯಾಧಿಕಾರಿ ಸಹಿ ಬೇಕಿರುತ್ತದೆ. ಶಾಸಕರು ಬೇರೆಯವರ ನೇಮಕಕ್ಕೆ ಪತ್ರ ಕೊಟ್ಟಿದ್ದಾರೆ. ಶೀಘ್ರದಲ್ಲೇ ಮಾಗಡಿಗೆ ಹೊಸ ಮುಖ್ಯಾಧಿಕಾರಿ ಬರಲಿದ್ದಾರೆ. ಕುಡಿಯುವ ನೀರು, ಒಳಚರಂಡಿ ಹಾಗೂ ಬೀದಿದೀಪದ ಸಮಸ್ಯೆಗಳಿದ್ದು, ಎಲ್ಲವನ್ನು ಸರಿಪಡಿಸುವ ಕೆಲಸಕ್ಕೆ ಶಾಸಕರು ಚಾಲನೆ ನೀಡಲಿದ್ದಾರೆ. -ವಿಜಯಾರೂಪೇಶ್, ಪುರಸಭೆ ಅಧ್ಯಕ್ಷೆ
ಬಸವರಾಜು ಎನ್ನುವವರು ಮಾಗಡಿ ಪುರಸಭೆ ವರ್ಗಾ ವಣೆಯಾಗಿತ್ತು. ಅವರು ಕೆಲ ಕಾರಣದಿಂದ ಬೇರೆಡೆಗೆ ವರ್ಗಾವಣೆ ಮಾಡಿಸಿಕೊಂಡು ಹೋಗಿದ್ದಾರೆ. ಮಾಗಡಿ ಪುರಸಭೆಗೆ ಇನ್ನೊಂದು ವಾರದಲ್ಲಿ ಮುಖ್ಯಾಧಿಕಾರಿ ಬರಲಿದ್ದಾರೆ. – ಎ.ಮಂಜುನಾಥ್, ಮಾಗಡಿ ಶಾಸಕ
ಪಟ್ಟಣದ ಬಹುತೇಕ ಕಡೆಗಳಲ್ಲಿ ಬೀದಿದೀಪ ಊರಿಯುತ್ತಿಲ್ಲ, ದೀಪಗಳು ಕೆಟ್ಟಿದ್ದರೂ ಅಳವಡಿಸದೆ ಇರುವುದರಿಂದ ಜನರು ಕತ್ತಲ್ಲಲ್ಲಿ ಓಡಾಡುವಂತಾಗಿದೆ. ಒಳಚರಂಡಿ, ತ್ಯಾಜ್ಯ ವಿಲೇವಾರಿ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಮತ್ತೂಷ್ಟು ಸಮಸ್ಯೆ ಉಲ್ಬಣಗೊಳ್ಳುವ ಮುನ್ನ ಆದಷ್ಟು ಬೇಗ ಮುಖ್ಯಾಧಿಕಾರಿ ನೇಮಕ ಆಗಬೇಕಿದೆ. – ಗೋವಿಂದರಾಜು, ಸ್ಥಳೀಯ ನಾಗರಿಕ
– ತಿರುಮಲೆ ಶ್ರೀನಿವಾಸ್