Advertisement

ನಿಷೇಧದ ನಡುವೆಯೂ ಭರ್ಜರಿ ದನಗಳ ಜಾತ್ರೆ

02:22 PM Mar 26, 2023 | Team Udayavani |

ಮಾಗಡಿ: ನಿಷೇಧದ ನಡುವೆಯೂ ದನಗಳ ಜಾತ್ರೆ ಭರ್ಜರಿಯಾಗಿ ಸೇರಿದೆ. ದಕ್ಷಿಣದಲ್ಲೇ ಸುಪ್ರಸಿದ್ಧ ದನಗಳ ಬೃಹತ್‌ ಜಾತ್ರೆ ಮಾಗಡಿಯಲ್ಲಿ ರಂಗೇರಿದೆ.  ಇತಿಹಾಸ ಪ್ರಸಿದ್ಧ ಮಾಗಡಿ ಮಾಂಡವ್ಯ ಕ್ಷೇತ್ರದ ತಿರುಮಲೆ ಶ್ರೀರಂಗನಾಥಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ಭಾರೀ ದನಗಳ ಜಾತ್ರೆ ಸೇರಿದ್ದು, ಭರ್ಜರಿ ವ್ಯಾಪಾರ ನಡೆಯುತ್ತಿದೆ. ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಮಾಗಡಿಯಲ್ಲಿ ಶ್ರೀರಂಗನಾಥಸ್ವಾಮಿ ಜಾತ್ರೆ ನಡೆದಿ ರಲಿಲ್ಲ. ಈ ಭಾರಿ ಗಂಟು ರೋಗದ ಭೀತಿಯಿದ್ದರೂ ಮುಂಜಾಗ್ರತಾ ಕ್ರಮ ಕೈಗೊಂಡಿರು ವುದರಿಂದಈ ಭಾರೀ ಭಾರಿ ದನಗಳು ಸೇರಿದ್ದು, ದನಗಳನ್ನು ನೋಡಲು ರಸ್ತೆ ಎರಡೂ ಬದಿ ಜನ ಜಮಾಯಿಸುತ್ತಾರೆ. ಜನ. ರಸ್ತೆ ಮಧ್ಯೆ ರೈತರ ಎತ್ತುಗಳನ್ನು ಹಿಡಿದು ಮುನ್ನೆಡೆಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

Advertisement

ರಾಜ್ಯದ ವಿವಿಧ ಮೂಲೆಗಳಿಂದ ರೈತರು ತಮ್ಮ ರಾಸುಗೊಂದಿಗೆ ಇಲ್ಲಿನ ದನಗಳ ಜಾತ್ರೆಗೆ ಸೇರಿದ್ದಾರೆ. ನೆತ್ತಿ ಸುಡುವ ಬಿಸಿಲು, ನೇಗಿಲ ಯೋಗಿ ಸುಡು ಬಿಸಿಲನ್ನು ಲೆಕ್ಕಿಸದೆ ಜಾತ್ರೆಗೆ ಜಮಾಯಿಸುತ್ತಿದ್ದಾರೆ. ಯುಗಾದಿ ಹಬ್ಬದಿಂದಲೂ ಸೇರುತ್ತಿದ್ದ ದನಗಳ ಜಾತ್ರೆ ಜಮಾಯಿಸಿರು ವುದು ನೋಡಿದರೆ ಈ ಜಾತ್ರೆ ನಿಜಕ್ಕೂ ರೈತರ ಪಾಲಿಗೆ ಭರ್ಜರಿ ವ್ಯಾಪಾರಕ್ಕೆ ಸಾಕ್ಷಿಯಾಗಿದೆ. ರೈತರು ಪ್ರೀತಿಯಿಂದ ಮಗುವಿನಂತೆ ಸಾಕಿರುವ ದೇಶಿತಳಿ ಹಳ್ಳೀಕರ್‌, ಅಮೃತ ಮಹಲ್‌ ಜೋಡಿ ಎತ್ತುಗಳ ಬೆಲೆ ಕೇಳಿದರೆ ಅಶ್ಚರ್ಯದ ಜತೆಗೆ ಅಚ್ಚರಿ ಉಂಟಾಗದೆ ಇರದು. ಏಕೆಂದರೆ 25 ಸಾವಿರ ರೂ ನಿಂದ 12 ಲಕ್ಷ ರೂ ಬೆಲೆ ಬಾಳು

ವ ಎತ್ತುಗಳು ಜಾತ್ರೆಯ ಸೇರಿರುವುದು ವಿಶೇಷ ಆಕರ್ಷಕಣೀಯ ವಾಗಿದ್ದು, ನೋಡುಗರ ಕಣ್ಮನ ಸೆಳೆದಿದೆ. ದಕ್ಷಿಣ ಭಾರತದಲ್ಲಿಯೇ ಭಾರಿ ಜಾತ್ರೆ ಇಲ್ಲಿ ಕಣ್ಣಾಯಿಸುವವರೆವಿಗೂ ಕಾಣುತ್ತಿದೆ ದನಗಳ ಜಾತ್ರೆ. ರಾಸುಗಳನ್ನು ಖರೀದಿಸಲು ರಾಜ್ಯ, ಹೊರ ರಾಜ್ಯಗಳಿಂದಲೂ ರೈತರು ಬರುತ್ತಾರೆ. ತಿರುಮಲೆ, ಹೊಸಪೇಟೆ, ಎನ್‌ಇಎಸ್‌, ತಿಮ್ಮಸಂದ್ರ ಭಾಗದ ಹೊಲಗದ್ದೆ, ಮೈದಾನಗಳು ದನಗಳಿಂದ ತುಂಬಿವೆ. ಇಲ್ಲಿನ ತಾಪಂ ಮುಂದೆ ಬೃಹತ್‌ ಪೆಂಡಾಲ್‌ ಹಾಕಿ ರೈತರು ಉತ್ತಮ ತಳಿಗಳ ಎತ್ತುಗಳನ್ನು ಕಟ್ಟಿದ್ದಾರೆ.

ದುಬಾರಿ ಬೆಲೆ: 25 ಸಾವಿರದಿಂದ 12 ಲಕ್ಷದ ವರೆಗಿನ ಎತ್ತುಗಳ ಮಾರಾಟಕ್ಕೆ ಕಟ್ಟಿರುವುದು ವಿಶೇಷ. ರೈತರಿಗೆ ದುಬಾರಿಯಾದರೂ ಖುಷಿಯಿಂದಲೇ ಖರೀದಿ ಮಾತ್ರ ಭರ್ಜರಿಯಗೇ ನಡೆಯುತ್ತದೆ. ಯಾತ್ರಿಕ ಯುಗದಲ್ಲೂ ಇಷ್ಟೊಂದು ಬೆಲೆಯ ಎತ್ತನ್ನು ಖರೀದಿಸುವುದು ರೈತರನ್ನು ಹುಬ್ಬೇರುವಂತೆಯೂ ಮಾಡಿದೆ. ಒಂದು ಟ್ರ್ಯಾಕ್ಟರ್‌ ಬೆಲೆ 5 ರಿಂದ 6 ಲಕ್ಷ ಇರಬಹುದು. ಅದರೂ ಸಹ ಅದಕ್ಕಿಂತ ಅಧಿಕ ಬೆಲೆಯ ಎತ್ತುಗಳನ್ನು ಖರೀದಿಗೆ ರೈತರು ಮುಂದಾಗುತ್ತಿರುವುದು ನೋಡಿ ದರೆ ರೈತರಲ್ಲಿ ರಾಸುಗಳ ಮೇಲಿನ ಪ್ರೇಮ ಕಾಣಿಸುತ್ತದೆ. ಟ್ರ್ಯಾಕ್ಟರ್‌ ಭರಾಟೆಯಲ್ಲಿ ರಾಸುಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಆತಂಕ ಒಂದೆಡೆಯಾದರೆ, ಮೊತ್ತೂಂದೆಡೆ ದನಗಳ ಜಾತ್ರೆಗಳಲ್ಲಿ ರಾಸುಗಳ ವ್ಯಾಪಾರಕ್ಕೆ ಮಾಗಡಿ ರಂಗನ ಜಾತ್ರೆ ಉತ್ತರ ನೀಡುತ್ತಿದೆ.

ಒಂದು ಖರೀದಿಸಿದರೆ ಮತ್ತೂಂದು ಉಚಿತ: ಮಾರುಕಟ್ಟೆಗಳಲ್ಲಿ ಒಂದು ಖರೀದಿಸಿದರೆ ಮತ್ತೂಂದು ಉಚಿತ ಎಂಬಂತೆ ದನಗಳ ಜಾತ್ರೆಗಳಲ್ಲೂ ಎತ್ತುಗಳ ಖರೀದಿಸಿದರೆ ಕುರಿ, ಟಗರ್‌ ಉಚಿತ ಎಂಬಂತೆ ಪೋಷ್ಟರ್‌ಗಳನ್ನು ಹಾಕಿರುವುದನ್ನು ಕಾಣಬಹುದು.

Advertisement

ವ್ಯಾಪಾರದ ಲಕ್ಷಣ: ದಳ್ಳಾಳಿ ಮತ್ತು ಮಾಲೀಕರು ಸೇರಿ ಜಾತ್ರೆಗೆ ಒಂದಿರುತ್ತಾರೆ. ಎತ್ತುಗಳನ್ನು ಹಿಡಿದು ಕಾಲು,ಬಾಯಿ ನೋಡುವುದು, ಎಷ್ಟು ಹಲ್ಲುಗಳು ರಾಸು ಬೇಕು ಎಂಬುದನ್ನು ನಿರ್ಧರಿಸಿ ವ್ಯಾಪಾರಕ್ಕೆ ಕೂರುತ್ತಾರೆ. ದಳ್ಳಾಯಿ ಮಾಲೀಕನ ಕೈ ಮೇಲೆ ಟವಲ್‌ ಹಾಕಿ ಕೈಬೆರಳ ಗೆಣ್ಣುಗಳ ಲೆಕ್ಕಾಚಾರದ ಅಧಾರದ ಮೇಲೆ ವ್ಯಾಪಾರ ನಡೆಯುತ್ತದೆ. ಉದಾಹರಣೆಗೆ ಒಂದು ಗೆಣ್ಣಿಗೆ ಸಾವಿರ ರೂ ಲೆಕ್ಕದಲ್ಲಿರುತ್ತದೆ. ಇದರಿಂದಲೇ ವ್ಯಾಪಾರ ನಿರ್ಧರಿಸಿ ವ್ಯವಹರಿಸುವುದು ವಾಡಿಕೆ. ಹಿಂದೆ 15 ದಿನಗಳ ಕಾಲ ದನಗಳ ಜಾತ್ರೆ ನಡೆಯುತ್ತಿದ್ದವು. ಈಗ ಕಾಲ ಬದಲಾದಂತೆ ರೈತರು ಬದಲಾಗಿದ್ದಾರೆ. ಕನಿಷ್ಠ ಪಕ್ಷ ಒಂದು ವಾರಗಳ ಕಾಲ ಈ ದನಗಳ ಜಾತ್ರೆ ನಡೆಯುತ್ತದೆ.

ನೀರಿನ ವ್ಯವಸ್ಥೆ: ದನಗಳ ಜಾತ್ರೆ ಎಂದ ಮೇಲೆ ಬಹುಮುಖ್ಯವಾಗಿ ನೀರಿನ ವ್ಯವಸ್ಥೆ ಇರ ಬೇಕು. ಇದಕ್ಕಾಗಿ ತಾಲೂಕು ಆಡಳಿತ ಮತ್ತು ಪುರಸಭೆ ನೀರನ ವ್ಯವಸ್ಥೆ ಮಾಡಿರುತ್ತದೆ. ಜತೆಗೆ ಶಾಸಕ ಎ. ಮಂಜುನಾಥ್‌ ಉಚಿತವಾಗಿ ರೈತರಿಗೆ ಊಟದ ವ್ಯವಸ್ಥೆ ಮಾಡಿರುವುದು ವಿಶೇಷ. ಜಾತ್ರೆಗೆ ಬರುವ ದನಗಳಿಗೆ ಸುಂಕ ರಹಿತವಾಗಿದೆ.

ವೈವಿದ್ಯಮಯ ತಳಿಗಳು : ಈ ಜಾತ್ರೆಯಲ್ಲಿ ವೈವಿದ್ಯಮುಯ ತಳಿಗಳ ರಾಸುಗಳನ್ನು ಕಟ್ಟಿ ಮಾರಾಟ ಮಾಡಲಾಗುತ್ತದೆ. ಹಳ್ಳಿಕಾರ್‌, ಅಮೃತ ಮಹಲ್‌ ತಳಿಗಳಿಗೆ ಬಾರಿ ಬೇಡಿಕೆ ಇದೆ. ಗಂಗೇಲ,ಬೆಟ್ಟದ ಪುಲಿ ಸೇರಿದಂತೆ ಹತ್ತಾರು ತಳಿಗಳ ಎತ್ತುಗಳು ಸೇರಿವೆ. ರಾಜ್ಯದ ದಾವಣಗೆರೆ,ದಾರವಾಡ, ಗುಲ್ಬರ್ಗ, ಹಾವೇರಿ, ಮೈಸೂರು, ಮಂಡ್ಯ, ತುಮಕೂರು, ಕೋಲಾರ, ಹೊಸಕೋಟೆ, ತಮಿಳುನಾಡು, ಆಂಧ್ರ ಪ್ರದೇಶಗಳಿಂದ ರೈತರು ರಾಸುಗಳನ್ನು ಖರೀದಿಸಲು ಜಾತ್ರೆಗೆ ಬರುತ್ತಿದ್ದಾರೆ.

ಎತ್ತುಗಳಿಗೆ ಹೂ, ಬಣ್ಣಗಳಿಂದ ಸಿಂಗಾರ : ರಾಜ್ಯದ ವಿವಿಧ ಮೂಲೆಗಳಿಂದ ಸಾವಿರಾರು ರೈತರು ಜಾತ್ರೆಯಲ್ಲಿ ಭವ್ಯವಾದ ಬಣ್ಣದ ಪೆಂಡಾಲ್‌ಗೆ ಲಕ್ಷಾಂತರ ರು ಖರ್ಚು ಮಾಡಿ ಹಾಕಿದ್ದಾರೆ. ಬಣ್ಣ,ಬಣ್ಣ ಹೂಗಳಿಂದ ಅಲಂಕರಿಸಿ, ಡಿಜಿಟಲ್‌ ಪ್ಲೆಕ್ಸ್‌ಗಳನ್ನು ಹಾಕಿ ರಾಸುಗಳಿಗೆ ವೈಭೋಗ ಮಾಡಿದ್ದಾರೆ. ಇಲ್ಲಿ ರಾಸುಗಳಿಗೆ ಮೆತ್ತನೆಯ ಹುಲ್ಲಿನ ಹಾಸಿಗೆ, ಹೂ,ಬಣ್ಣಗಳಿಂದ ಎತ್ತುಗಳಿಗೆ ಸಿಂಗಾರ ಮಾಡಿ ಆಧುನಿಕ ಸ್ಪರ್ಶ ನೀಡಿದ್ದಾರೆ.

ಜಾತ್ರೆಗೆ ಬರುವ ರಾಸುಗಳಿಗೆ ರೋಗರುಜೀ ನಗಳು ಕಾಣಿಸಿಕೊಳ್ಳುವುದು ಸಹಜ. ಆದ್ದರಿಂದಲೇ ಜಾತ್ರೆಯಲ್ಲಿ ದಿನದ 24 ಗಂಟೆಯೂ ಪಶು ಚಿಕಿತ್ಸಾಲಯ ತೆರೆದು ಇಲಾಖೆ ಸಹಕಾರ ನೀಡಲಾಗುತ್ತದೆ. ಗಂಟು ರೋಗ ರಾಸುಗಳನ್ನು ಜಾತ್ರೆಗೆ ಕಟ್ಟದಂತೆ ಕಟ್ಟೆಚ್ಚರ ವಹಿಸಲಾಗಿದೆ. – ಬಾಬುಗೌಡ ಚಕ್ಕೊಡಿ, ಪಶು ಇಲಾಖೆ ಸಹಾಯಕ ನಿರ್ದೇಶಕ

ಪಾರಂಪರಿಕ ದನಗಳ ಜಾತ್ರೆ ಉಳಿಯಬೇಕಾದರೆ ಸರ್ಕಾರ ದನಗಳ ಜಾತ್ರೆ ನಡೆಯಲು ಕನಿಷ್ಠ 100 ಎಕರೆ ಜಮೀನು ಮೀಸಲಿಡಬೇಕಿದೆ. ಇರುವ ಜಾತ್ರೆ ಜಾಗವೆಲ್ಲ ಭೂದಾಹಿಗಳ ಪಾಲಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದರು. – ಎಚ್‌.ನಾಗರಾಜು , ಪ್ರಗತಿಪರ ರೈತ

-ತಿರುಮಲೆ ಶ್ರೀನಿವಾಸ್‌

Advertisement

Udayavani is now on Telegram. Click here to join our channel and stay updated with the latest news.

Next