Advertisement

23 ವರ್ಷದ ಬಳಿಕ ರಣಜಿ ಟ್ರೋಫಿ ಫೈನಲ್ ಗೇರಿದ ಮಧ್ಯಪ್ರದೇಶ ತಂಡ

02:43 PM Jun 18, 2022 | Team Udayavani |

ಬೆಂಗಳೂರು: ಬರೋಬ್ಬರಿ 23 ವರ್ಷಗಳ ಬಳಿಕ ರಣಜಿ ಟ್ರೋಫಿ ಕೂಟದಲ್ಲಿ ಮಧ್ಯಪ್ರದೇಶ ತಂಡ ಫೈನಲ್ ಪ್ರವೇಶಿಸಿದೆ. ಸೆಮಿ ಫೈನಲ್ ನಲ್ಲಿ ಬೆಂಗಾಲ್ ತಂಡವನ್ನು ಮಣಿಸಿದ ಆದಿತ್ಯ ಶ್ರೀವಾಸ್ತವ್ ನೇತೃತ್ವದ ಮಧ್ಯ ಪ್ರದೇಶ ತಂಡ ಫೈನಲ್ ಗೆ ಅರ್ಹತೆ ಗಿಟ್ಟಿಸಿದೆ.

Advertisement

ಗೆಲ್ಲಲು 350 ರನ್ ಗುರಿ ಪಡೆದ ಬೆಂಗಾಲ ತಂಡ ಕೇವಲ 175 ರನ್ ಗಳಿಗೆ ತನ್ನೆಲ್ಲಾ  ವಿಕೆಟ್ ಕಳೆದುಕೊಂಡಿತು. ಇದರೊಂದಿಗೆ ಮಧ್ಯ ಪ್ರದೇಶ ತಂಡ 174 ರನ್ ಅಂತರದ ಗೆಲುವು ಸಾಧಿಸಿತು.

1999ರಲ್ಲಿ ಮೊದಲ ಬಾರಿಗೆ ಮಧ್ಯಪ್ರದೇಶ ರಣಜಿ ಟ್ರೋಫಿ ಫೈನಲ್ ಪ್ರವೇಶಿಸಿದ ಸಾಧನೆ ಬರೆದಿತ್ತು. ಇದೀಗ 23 ವರ್ಷಗಳ ಬಳಿಕ ಮತ್ತೊಮ್ಮೆ ಪ್ರಶಸ್ತಿ ಸುತ್ತಿಗೇರಿದೆ.

ಮ.ಪ್ರದೇಶ ತಂಡ ಮೊದಲ ಇನ್ನಿಂಗ್ಸ್ ನಲ್ಲಿ ಹಿಮಾಂಶು ಮಂತ್ರಿ ಶತಕದ (165) ನೆರವಿನಿಂದ 341 ರನ್ ಗಳಿಸಿತ್ತು. ಬೆಂಗಾಲ ತಂಡ ಮನೋಜ್ ತಿವಾರಿ ಮತ್ತು ಶಹಬಾಜ್ ಅಹಮದ್ ಶತಕದ ಹೊರತಾಗಿಯೂ 273 ರನ್ ಗಳಷ್ಟೇ ಗಳಿಸಿತ್ತು. ಎರಡನೇ ಇನ್ನಿಂಗ್ಸ್ ನಲ್ಲಿ ಮ.ಪ್ರದೇಶ 281 ರನ್ ಗಳಿಸಿತ್ತು. ರಜತ್ ಪಾಟಿದಾರ್ 79 ರನ್ ಗಳಸಿದ್ದರು. ಗೆಲ್ಲಲು 350 ರನ್ ಗುರಿ ಪಡೆದ ಬೆಂಗಾಲ ತಂಡ ಕೇವಲ 175 ರನ್ ಮಾತ್ರ ಗಳಿಸಿ ಸೋಲನುಭವಿಸಿತು. ಮ.ಪ್ರದೇಶ ಬೌಲರ್ ಪಂದ್ಯದಲ್ಲಿ ಒಟ್ಟು ಎಂಟು ವಿಕೆಟ್ ಪಡೆದು ಮಿಂಚಿದರು.

ಇದನ್ನೂ ಓದಿ:ಗುಜರಾತ್: ಪಾವಗಢ್ ಬೆಟ್ಟದಲ್ಲಿನ ಪುರಾತನ ಕಾಳಿಕಾ ಮಾತೆ ದೇವಾಲಯ ಉದ್ಘಾಟಿಸಿದ ಪ್ರಧಾನಿ ಮೋದಿ

Advertisement

ಜೂನ್ 22ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದ್ದು, ಮಧ್ಯಪ್ರದೇಶ ತಂಡ ಮುಂಬೈ ತಂಡವನ್ನು ಎದುರಿಸಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next