Advertisement

ಸಿಐಡಿಗೆ ಅಧಿಕೃತ ಆದೇಶವಾಗದ ಮನ್‌ಮುಲ್‌ ಹಗರಣ

10:29 PM Jun 26, 2021 | Team Udayavani |

ಎಚ್‌.ಶಿವರಾಜು

Advertisement

ಮಂಡ್ಯ: ಮನ್‌ಮುಲ್‌ನಲ್ಲಿ ನಡೆದಿರುವ ಹಾಲು-ನೀರು ಮಿಶ್ರಿತ ಹಗರಣವನ್ನು ಸಿಐಡಿಗೆ ವಹಿಸಲಾಗಿದೆಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪಹೇಳಿಕೆ ನೀಡಿ ವಾರವೇ ಕಳೆಯುತ್ತಾ ಬಂದರೂ ಇನ್ನೂಅಧಿಕೃತ ಆದೇಶ ಹೊರ ಬೀಳದ ಕಾರಣದಿಂದ ಪ್ರಕರಣ ಹಳ್ಳ ಹಿಡಿಯುವ ಎಲ್ಲ ಲಕ್ಷಣಗಳುಗೋಚರಿಸುತ್ತಿವೆ.

ಪ್ರಕರಣ ನಡೆದು 20 ದಿನಗಳು ಕಳೆಯುತ್ತಾಬಂದರೂ, ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡಿಲ್ಲ.ಡಿವೈಎಸ್ಪಿ ನೇತೃತ್ವದಲ್ಲಿ ನಡೆಯುತ್ತಿದ್ದ ತನಿಖೆಯೂನಿಂತಿದೆ. ಸಿಐಡಿಗೆ ವಹಿಸಿದ್ದರಿಂದ ಪೊಲೀಸ್‌ ಅಧಿಕಾರಿಗಳು ತನಿಖೆಯನ್ನು ಅರ್ಧಕ್ಕೆ ಮೊಟಕುಗೊಳಿಸಿಸಿಐಡಿಗೆ ವರ್ಗಾಯಿಸಲು ಕಾಯುತ್ತಿದ್ದಾರೆ.

ನಿರೀಕ್ಷಣಾ ಜಾಮೀನು ಪಡೆದ ಆರೋಪಿಗಳು: ಲಾರಿಚಾಲಕರು ಹಾಗೂ ಕ್ಲೀನರ್‌ಗಳನ್ನು ಬಂಧಿಸಿರುವಪೊಲೀಸರು ಅವರ ಮೂಲಕವೇ ತನಿಖೆ ನಡೆಸಲುಮುಂದಾಗಿದ ªರು. ಹಗರಣದಲ್ಲಿ ಭಾಗಿಯಾಗಿರುವಗುತ್ತಿಗೆದಾರರ ಸುಳಿವು ಇನ್ನೂ ಸಿಕ್ಕಿಲ್ಲ. ಈಗಾಗಲೇಅವರೆಲ್ಲ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನುಪಡೆದಿದ್ದಾರೆ ಎಂಬ ಮಾಹಿತಿಗಳು ಹರಿದಾಡುತ್ತಿವೆ.

ರಾಜಕೀಯ ಪ್ರಭಾವಕ್ಕೆ ಸರ್ಕಾರ ಮೌನ: ಪ್ರಕರಣದಲ್ಲಿ ರಾಜಕೀಯ ಪ್ರಭಾವ ಹೆಚ್ಚಾಗಿದೆ. ಪ್ರಕರಣನಡೆದು ಇಷ್ಟು ದಿನಗಳಾದರೂ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲು ಸಾಧ್ಯವಾಗಿಲ್ಲ. ಆರೋಪಿಗಳು ರಾಜಕೀಯ ಪ್ರಭಾವ ಬೀರಿರುವುದರಿಂದ ಆಳಕ್ಕಿಳಿದು ತನಿಖೆ ನಡೆಸಲು ಸಾಧ್ಯವಾಗಿಲ್ಲ. ಪ್ರಭಾವಿರಾಜಕೀಯ ನಾಯಕರು ತನಿಖೆಯ ಮೇಲೆ ಒತ್ತಡ ಬೀರುತ್ತಿದ್ದಾರೆ.

Advertisement

ಜಿಲ್ಲೆಯಾದ್ಯಂತ ಪ್ರಕರಣವನ್ನು ಸಿಐಡಿಗೆ ವಹಿಸಲು ಒತ್ತಡ ಹೆಚ್ಚಾಗಿದೆ. ಆದರೆ ಸರ್ಕಾರಸಿಐಡಿಗೆ ವಹಿಸಲಾಗಿದೆ ಎಂಬ ಹೇಳಿಕೆ ಕೊಟ್ಟು ಮೌನವಾಗಿರುವುದನ್ನು ಗಮನಿಸಿದರೆ ರಾಜಕೀಯ ಪ್ರಭಾವಕ್ಕೆ ಒಳಗಾಗಿದೆ ಎಂಬ ಚರ್ಚೆಗಳು ಶುರುವಾಗಿದೆ.

ಪ್ರಕರಣ ಹಳ್ಳ ಹಿಡಿಯುವ ಆತಂಕ: ಇಷ್ಟು ದಿನಗಳಾದರೂ ಸರ್ಕಾರ ಸಿಐಡಿಗೆ ಪ್ರಕರಣವನ್ನು ಒಪ್ಪಿಸಲು ಅಧಿಕೃತ ಆದೇಶ ಹೊರಬಿದ್ದಿಲ್ಲ. ಕೇವಲ ಸಿಎಂಹೇಳಿಕೆಗೆ ಸೀಮಿತವಾಗಿದೆ.

ಮೈಷುಗರ್‌ ಕಾರ್ಖಾನೆಯಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ತನಿಖೆಗೊಳಪಡಿಸುವಂತೆ ಕೂಗು ಹೆಚ್ಚಾದರೂ ಇದುವರೆಗೂಯಾವುದೇ ಸರ್ಕಾರಗಳು ತಲೆಕೆಡಿಸಿಕೊಂಡಿಲ್ಲ. ಅದರಂತೆ ಮನ್‌ಮುಲ್‌ ಹಗರಣವೂ ಹಳ್ಳ ಹಿಡಿಯಲಿದೆ ಎಂಬ ಮಾತುಗಳು ಹೋರಾಟಗಾರರಿಂದ ಕೇಳಿ ಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next