Advertisement
ಶನಿವಾರ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ನಡಾಲ್ ಸ್ಟಾನ್ ವಾಂವ್ರಿಕ ವಿರುದ್ಧ ಕೇವಲ ಒಂದು ಗಂಟೆ ಕಾದಾಟದಲ್ಲಿ 6-1, 6-2 ನೇರ ಸೆಟ್‌ಗಳ ಗೆಲವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. 2ನೇ ಶ್ರೇಯಾಂಕದ ನಡಾಲ್ ಕಳೆದ 15 ವರ್ಷಗಳಲ್ಲಿ 14ನೇ ಬಾರಿ ‘ಮ್ಯಾಡ್ರಿಡ್ ಓಪನ್’ ಕೂಟದ ಕ್ವಾರ್ಟರ್‌ಫೈನಲ್ನಲ್ಲಿ ಆಡುತ್ತಿದ್ದಾರೆ.
ಇನ್ನೊಂದು ಕ್ವಾರ್ಟರ್ ಫೈನಲ್ ಕಾದಾಟದಲ್ಲಿ ರೋಜರ್ ಫೆಡರರ್ ಡೋಮಿನಿಕ್ ಥೀಮ್ ವಿರುದ್ಧ ಸೋಲು ಆಘಾತ ಅನುಭವಿಸಿದ್ದಾರೆ.
Related Articles
Advertisement
ಫೈನಲ್ ಹಾಲೆಪ್ವನಿತಾ ವಿಭಾಗದ ಸೆಮಿಫೈನಲ್ನಲ್ಲಿ ಪಂದ್ಯದಲ್ಲಿ ಬೆಲಿಂಡಾ ಬೆನ್ಸಿಕ್ ವಿರುದ್ಧ ಗೆಲುವು ದಾಖಲಿಸಿದ ಸಿಮೋನಾ ಹಾಲೆಪ್ 4ನೇ ಬಾರಿಗೆ ‘ಮ್ಯಾಡ್ರಿಡ್ ಓಪನ್’ ಫೈನಲ್ಗೆ ಕಾಲಿಟ್ಟಿದ್ದಾರೆ. ಶನಿವಾರ ನಡೆದ ಸೆಮಿಫೈನಲ್ನಲ್ಲಿ ರೊಮೇನಿಯದ ಹಾಲೆಪ್ ಸ್ವಿಟ್ಸರ್ಲಂಡ್‌ನ ಬೆಲಿಂಡಾ ಅವರನ್ನು 6-2, 6-7 (2-7), 6-0 ಸೆಟ್‌ಗಳಿಂದ ಗೆದ್ದು ನೆದರ್‌ಲ್ಯಾಂಡ್‌ನ ಕಿಕಿ ಬರ್ಟೆನ್ಸ್ ವಿರುದ್ಧ ಫೈನಲ್ ಕಾದಾಟಕ್ಕೆ ಸಿದ್ಧರಾಗಿದ್ದಾರೆ. ಒಂದು ವೇಳೆ ಫೈನಲ್ನಲ್ಲಿ ಹಾಲೆಪ್ ಜಯಿಸಿದರೇ ನೂತನ ರ್‍ಯಾಂಕಿಂಗ್‌ನಲ್ಲಿ ನವೋಮಿ ಒಸಾಕಾ ಅವರನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಲಿದ್ದಾರೆ.