Advertisement

Madrid: ಕ್ಲಬ್‌ನಲ್ಲಿ ಬೆಂಕಿ: 13 ಸಾವು

10:11 PM Oct 01, 2023 | Team Udayavani |

ಮ್ಯಾಡ್ರಿಡ್‌: ಹುಟ್ಟುಹಬ್ಬದ ಆಚರಣೆಗೆಂದು ತೆರಳಿದ್ದವರು ಬೆಂಕಿಗೆ ಆಹುತಿಯಾಗಿರುವ ದುರಂತ ಘಟನೆ ಸ್ಪೇನ್‌ನ ಮುರ್ಸಿಯಾ ನಗರದಲ್ಲಿ ವರದಿಯಾಗಿದ್ದು, ಅವಘಡದಲ್ಲಿ 13 ಮಂದಿ ಮೃತಪಟ್ಟಿದ್ದಾರೆಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ. “ಥಿಯೇಟರ್‌’ ಹೆಸರಿನ 2 ಅಂತಸ್ತಿನ ನೈಟ್‌ಕ್ಲಬ್‌ನಲ್ಲಿ ಶನಿವಾರ ತಡರಾತ್ರಿ ಬರ್ತ್‌ ಡೇ ಪಾರ್ಟಿ ಇತ್ತು.

Advertisement

ಭಾನುವಾರದ ಬೆಳಗ್ಗೆವರೆಗೂ ಪಾರ್ಟಿ ಮುಂದುವರಿದಿದೆ. ಇದೇ ವೇಳೆ ಭಾನುವಾರ ಬೆಳಗ್ಗೆ 6 ಗಂಟೆಗೆ ಅಚಾನಕ್‌ ಬೆಂಕಿ ಕಾಣಿಸಿಕೊಂಡು, ಇಡೀ ಕಟ್ಟಡ ವ್ಯಾಪಿಸಿ ಹೊತ್ತಿ ಉರಿದಿದೆ. ಘಟನೆಯಲ್ಲಿ 13 ಮಂದಿ ಮೃತಪಟ್ಟು, 4 ಮಂದಿ ಗಾಯಗೊಂಡಿದ್ದಾರೆ. ಬೆಂಕಿ ನಂದಿಸಲು ಅಗ್ನಿಶಾಮಕದಳಗಳು ಸತತ ಪ್ರಯತ್ನ ಪಟ್ಟು ಬಳಿಕ ಉಳಿದವರನ್ನು ರಕ್ಷಿಸಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next