Advertisement

ವರದಿಯಲ್ಲಿ ಮುದ್ರಣವಾದ ತಪ್ಪನ್ನು ತಿದ್ದಿ ಬಾಲಕಿಗೆ ನ್ಯಾಯ ನೀಡಿದ ಮದ್ರಾಸ್‌ ಹೈಕೋರ್ಟ್‌

07:30 PM Jul 17, 2021 | Team Udayavani |

ಚೆನ್ನೈ: ಅತ್ಯಾಚಾರ ಪ್ರಕರಣವೊಂದರ ವರದಿ ತಯಾರಿಸುವಾಗ ಟೈಪಿಸ್ಟ್‌ ಮಾಡಿರುವ ಎಡವಟ್ಟೊಂದು ಅಪರಾಧಿಯನ್ನು, ನಿರಪರಾಧಿಯಾಗಿ ಬಿಡುಗಡೆಯಾಗಿಸುವ ಸಂದರ್ಭ ಸೃಷ್ಟಿಸಿತ್ತು. ಕೊನೆಗೆ ಮದ್ರಾಸ್‌ ಹೈಕೋರ್ಟ್‌ ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿ, ಕೆಳಹಂತದ ನ್ಯಾಯಾಲಯ ನೀಡಿದ್ದ ಬಿಡುಗಡೆ ತೀರ್ಪನ್ನು ಬದಲಿಸಿ ಅಪರಾಧಿಗೆ ಶಿಕ್ಷೆ ವಿಧಿಸಿದೆ.

Advertisement

ಏನಿದು ಪ್ರಕರಣ?: 2017ರಲ್ಲಿ ಚೆನ್ನೈನ ಮಹಿಳೆಯೊಬ್ಬರು, ತಮ್ಮ ಎರಡು ವರ್ಷ 9 ತಿಂಗಳ ಮಗುವಿನ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇರೆಗ ನೆರೆ ಮನೆಯಾತನ ವಿರುದ್ಧ ದೂರು ದಾಖಲಿಸಿದ್ದರು. ಆಗ ತಯಾರಾದ ವೈದ್ಯಕೀಯ ಚಿಕಿತ್ಸಾ ವರದಿಯಲ್ಲಿ ಮಗುವಿನಲ್ಲಿ ಕಂಡುಬಂದ ಆ ವ್ಯಕ್ತಿಯ ಸಿಮೆನ್‌ (ವೀರ್ಯ) ಅನ್ನು “ಸೆಮ್ಮನ್‌’ ಎಂದು ತಪ್ಪಾಗಿ ಮುದ್ರಿಸಲಾಗಿತ್ತು.

ರೈತರನ್ನು ಕಂಗಾಲು ಮಾಡಿದ ಅಂತರಗಂಗೆ : ಶಾಶ್ವತ ಪರಿಹಾರಕ್ಕಾಗಿ ಹೂಳೆತ್ತುವಂತೆ ಆಗ್ರಹ

ತಮಿಳಿನಲ್ಲಿ ಸೆಮ್ಮನ್‌ ಎಂದರೆ ಕೆಮ್ಮಣ್ಣು ಎಂದರ್ಥ. ಹಾಗಾಗಿ, ಪ್ರಕರಣದ ವಿಚಾರಣೆ ನಡೆಸಿದ್ದ ಪೋಕ್ಸೋ ನ್ಯಾಯಾಲಯ, ಆರೋಪಿಯ ಬಿಡುಗಡೆಗೆ ಆದೇಶಿಸಿತ್ತು. ಆದರೆ, ಮಗುವಿನ ತಾಯಿ ಮದ್ರಾಸ್‌ ಹೈಕೋರ್ಟ್‌ ಮೊರೆ ಹೋದರು. ವರದಿಯಲ್ಲಿ ಆಗಿರುವ ಮುದ್ರಣ ದೋಷವನ್ನು ಪತ್ತೆ ಹಚ್ಚಿದ ಉಚ್ಚ ನ್ಯಾಯಾಲಯ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next